Saturday, November 15, 2025

Latest Posts

ಕನ್ನಡದ ಹಾಸ್ಯನಟ ಮೋಹನ್ ಜುನೇಜ ನಿಧನ.!

- Advertisement -

ಸ್ಯಾಂಡಲ್ ವುಡ್ ನಲ್ಲಿ 150ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಖ್ಯಾತ ಹಾಸ್ಯ ನಟನಾಗಿ ನಟಿಸಿದ್ದ ಮೋಹನ್ ಜುನೇಜ ರವರು ಅನಾರೋಗ್ಯ ಸಮಸ್ಯೆಯಿಂದಾಗಿ ನಿಧನರಾಗಿದ್ದಾರೆ. ಮೋಹನ್ ಜುನೇಜ ಅವರು ಕನ್ನಡದ ಹಲವಾರು ಸಿನಿಮಾಗಳಲ್ಲಿ ನಟಿಸಿರುವುದಲ್ಲದೆ, ‘ವಠಾರ’ ಎಂಬ ಧಾರಾವಾಹಿ ಸೇರಿದಂತೆ ಅನೇಕ ಧಾರಾವಾಹಿಗಳಲ್ಲಿ ಹಾಸ್ಯನಟ ಮತ್ತು ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. ಅದಷ್ಟೇ ಅಲ್ಲದೆ ಇವರು ‘ಕೆಜಿಎಫ್’ ಸಿನಿಮಾದಲ್ಲಿಯೂ ಕೂಡ ನಟಿಸಿದ್ದಾರೆ.

ಬೆಂಗಳೂರು ಉತ್ತರ ತಾಲ್ಲೂಕಿನ ತಮ್ಮೇನಹಳ್ಳಿಯಲ್ಲಿ ಮೋಹನ್ ಜುನೇಜ ವಾಸವಾಗಿದ್ದು, ಕೆಲವು ದಿನಗಳಿಂದ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ಆದರೆ ಇತ್ತೀಚೆಗೆ ಆರೋಗ್ಯದಲ್ಲಿ ತೀವ್ರ ಏರುಪೇರಾದ ಕಾರಣ ಮೋಹನ್ ರವರನ್ನು ಚಿಕ್ಕಬಾಣಾವರ ಸಪ್ತಗಿರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿಯೇ ಮೋಹನ್ ರವರು ಕೊನೆ ಉಸಿರೆಳೆದಿದ್ದಾರೆ.

ಮೋಹನ್ ಅವರು ತಮ್ಮ ಪತ್ನಿ ಹಾಗೂ ಪುತ್ರನನ್ನ ಅಗಲಿದ್ದು, ಮೋಹನ್ ನಿಧನಕ್ಕೆ ಸಿನಿಗಣ್ಯರು ಮತ್ತು ಅವರ ಆಪ್ತರು ಕಂಬನಿ ಮಿಡಿದಿದ್ದಾರೆ.

ಪ್ರಕೃತಿ ಪ್ರಭಾಕರ್, ಕರ್ನಾಟಕ ಟಿವಿ, ಸಿನಿಮಾ ಬ್ಯುರೋ

 

 

- Advertisement -

Latest Posts

Don't Miss