Saturday, March 15, 2025

Latest Posts

ತೆಲುಗು ಸಿನಿಮಾದ ಬಗ್ಗೆ ಖುಷಿ ಮಾತು.!

- Advertisement -

ಕೋವಿಡ್ ಸಮಯದಲ್ಲಿ ದಿಯಾ ಸಿನಿಮಾ ಓಟಿಟಿಯಲ್ಲಿ ರಿಲೀಸ್ ಆಗಿ ಅಭಿಮಾನಿಗಳ ಮನೆ ಮಾತಾಗಿತ್ತು. ಇನ್ನು ಈ ಸಿನಿಮಾದಲ್ಲಿ ತ್ರಿಕೋನ ಪ್ರೇಮ ಕಥೆ ಇದ್ದು, ಮೂವರ ಪಾತ್ರ ಕೂಡ ವಿಭಿನ್ನವಾಗಿ ಮೂಡಿ ಬಂದಿತ್ತು. ಮೂವರ ಪಾತ್ರದಲ್ಲಿ ‘ದಿಯಾ’ ಪಾತ್ರ ಬಹಳ ಯಶಸ್ಸು ಕಂಡಿತ್ತು. ದಿಯಾ ಪಾತ್ರ ವಹಿಸಿದ್ದ ಖುಷಿ ಇದೀಗ ಟಾಲಿವುಡ್ ಗೂ ಎಂಟ್ರಿ ಕೊಟ್ಟಿದ್ದಾರೆ.

‘ದಿಯಾ’ ಸಿನಿಮಾದ ಮೂಲಕ ದೊಡ್ಡ ಯಶಸ್ಸು ಕಂಡ ನಟಿ ಖುಷಿ ರವಿ, ಕನ್ನಡ ಚಿತ್ರರಂಗದಲ್ಲಿ ಮಾತ್ರ ಅಲ್ಲದೆ ಬೇರೆ ಭಾಷೆಗಳಲ್ಲೂ ಕೂಡ ಜನಪ್ರಿಯರಾಗಿದ್ದಾರೆ. ‘ದಿಯಾ’ ಚಿತ್ರದ ನಂತರ ಖುಷಿ ಅವರಿಗೆ ಹಲವು ಸಿನಿಮಾ ಆಫರ್‌ಗಳು ಬಂದಿದ್ದು, ಖುಷಿ ಅವರು ಸಹ ನಕ್ಷೆ, ಸ್ಪೂಕಿ ಕಾಲೇಜು ಸೇರಿದಂತೆ ಒಂದಷ್ಟು ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ.

ಇನ್ನು ಖುಷಿ ರವಿ ಟಾಲಿವುಡ್‌ ಸಿನಿಮಾವೊಂದರಲ್ಲಿ ನಟಿಸುತ್ತಿದ್ದಾರೆ ಎಂಬ ವಿಷಯ ಕೇಳಿ ಬಂದಿತ್ತು. ಇದೀಗ ಆ ಸಿನಿಮಾದ ಬಗ್ಗೆ ಮತ್ತು ತಮ್ಮ ಪಾತ್ರದ ಬಗ್ಗೆ ಸ್ವತಃ ಅವರೇ ಮಾತನಾಡಿದ್ದಾರೆ. ‘ನಾನು ‘ರುದ್ರ’ ಎಂಬ ತೆಲುಗು ಸಿನಿಮಾದಲ್ಲಿ ನಟಿಸಿದ್ದೇನೆ. ಈ ಸಿನಿಮಾವನ್ನು ಭಾರ್ಗವ ಎನ್ನುವವರು ನಿರ್ದೇಶನ ಮಾಡಿದ್ದಾರೆ. ಹಾಗೂ ಈ ಸಿನಿಮಾದ ತಂತ್ರಜ್ಞರ ತಂಡ ಬಹಳ ಚೆನ್ನಾಗಿದೆ. ಆ ತಂಡದಲ್ಲಿರುವ ಬಹುತೇಕ ಮಂದಿ ಅಮೆರಿಕದಲ್ಲಿ ವಾಸವಾಗಿದ್ದಾರೆ. ಇವರೆಲ್ಲರೂ ಕೂಡ ಇಲ್ಲಿ ಬಂದು ಸಿನಿಮಾ ಮಾಡಿ ಹೋಗುತ್ತಾರೆ. ಈ ಹಿಂದೆ ಇದೇ ತಂಡದ ವತಿಯಿಂದ ‘ಗತಂ’ ಎಂಬ ಸಿನಿಮಾ ಆಗಿತ್ತು. ಈ ಸಿನಿಮಾದಲ್ಲಿ ನಾನು ನಟಿಸಿದ ಪಾತ್ರ ಬಹಳ ವಿಭಿನ್ನವಾಗಿದೆ’ ಎಂದು ಖುಷಿ ರವಿ ತಿಳಿಸಿದ್ದಾರೆ.

‘ನನ್ನ ಸಿನಿಮಾ ಕರಿಯರ್‌ನಲ್ಲಿ ನಿರ್ವಹಿಸದೇ ಇದ್ದಂತಹ ಪಾತ್ರವಿದು. ಬಹುಶಃ ನಾನು ಮುಂದೆಯೂ ಸಹ ಇಂತಹ ಚಾಲೆಂಜಿಂಗ್‌ ರೋಲ್‌ ಅನ್ನು ಮಾಡುತ್ತೇನಾ ಎನ್ನುವುದು ಗೊತ್ತಿಲ್ಲ. ಹಾಗಾಗಿ ಒಪ್ಪಿಕೊಂಡೆ. ನನ್ನ ನಟನೆಗೆ ಸವಾಲು ಹಾಕುವಂತಹ ಪಾತ್ರ ಇದು. ಜನ ನೋಡಿ ನಿಜಕ್ಕೂ ಅಚ್ಚರಿ ಪಡುತ್ತಾರೆ’ ಎಂದು ತಮ್ಮ ಪಾತ್ರದ ಬಗ್ಗೆ ಖುಷಿ ಹೇಳಿಕೊಂಡಿದ್ದಾರೆ. ಅದಷ್ಟೇ ಅಲ್ಲದೆ ಖುಷಿ ಅವರು ಎರಡ್ಮೂರು ಸಿನಿಮಾಗಳ ಕಥೆಯನ್ನು ಕೇಳಿದ್ದಾರಂತೆ. ಸದ್ಯದಲ್ಲೇ ಒಂದರ ಅನೌನ್ಸ್‌ಮೆಂಟ್‌ ಆಗಲಿದೆ ಎಂದು ತಿಳಿಸಿದರು.

ಪ್ರಕೃತಿ ಪ್ರಭಾಕರ್, ಕರ್ನಾಟಕ ಟಿವಿ, ಸಿನಿಮಾ ಬ್ಯುರೋ

 

 

 

 

 

- Advertisement -

Latest Posts

Don't Miss