ಬ್ಯಾಟಿಂಗ್ ವೈಫಲ್ಯ ಆರ್ಸಿಬಿಗೆ ಸೋಲು

ಮುಂಬೈ: ಮತ್ತೆ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ಆರ್ಸಿಬಿ ಪಂಜಾಬ್ ವಿರುದ್ಧ 54 ರನ್ಗಳ ಸೋಲು ಕಂಡಿದೆ.

ಟಾಸ್ ಗೆದ್ದ ಆರ್ಸಿಬಿ ಫೀಲ್ಡಿಂಗ್ ಆಯ್ದುಕೊಂಡಿತು.ಪಂಜಾಬ್ ಪರ ಆರಂಭಿಕರಾಗಿ ಕಣಕ್ಕಳಿದ ಜಾನಿ ಭೈರ್ ಸ್ಟೋ (66 ರನ್) ಹಾಗೂ ಶಿಖರ್ ಧವನ್ (21 ರನ್) ಮೊದಲ ವಿಕೆಟ್ ಗೆ 60 ರನ್ ಸೇರಿಸಿದರು.

ಭಾನುಕಾ ರಾಜಪಕ್ಸ (1), ಬಿರುಸಿನ ಬ್ಯಾಟಿಂಗ್ ಮಾಡಿದ ಜಾನಿ ಭೈರ್ ಸ್ಟೊ 21 ಎಸೆತದಲ್ಲಿ ಅರ್ಧ ಶತಕ ಸಿಡಿಸಿದರು.

ಒಂದೆಡೆ ವಿಕೆಟ್ ಬೀಳುತ್ತಿದ್ದರೂ ಏಕಾಂಗಿ ಹೋರಾಟ ಮಾಡಿದ ಲಿಯಾಮ್ ಲಿವಿಂಗ್ ಸ್ಟೋನ್ 35 ಎಸೆತದಲ್ಲಿ ಅರ್ಧ ಶತಕ ಬಾರಿಸಿದರು. ಲಿವಿಂಗ್ ಸ್ಟೋನ್ 42 ಎಸೆತದಲ್ಲಿ 5 ಬೌಂಡರಿ 4 ಸಿಕ್ಸರ್ ಒಟ್ಟು 70 ರನ್ ಗಳಿಸಿದರು.

ಮಯಾಂಕ್ ಅಗರ್ ವಾಲ್ (19), ಜಿತೇಶ್ ಶರ್ಮಾ (9), ಹರಪ್ರೀತ್ ಬ್ರಾರ್ (7),ರಿಷಿ ಧವನ್ (7),ರಾಹುಲ್ ಚಾಹರ್ (2), ಪಂಜಾಬ್ ನಿಗದಿತ 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 209 ರನ್ ಗಳಿಸಿತು.

210 ರನ್ಗಳ ಸವಾಲು ಬೆನ್ನತ್ತಿದ ಆರ್ಸಿಬಿ ವಿರಾಟ್ ಕೊಹ್ಲಿ ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿ ಸಿಲುಕಿತು. ನಾಯಕ ಫಾಫ್ ಡುಪ್ಲೆಸಿಸ್(10), ಮಹಿಪಾಲ್ ಲಮೊರೊರ್ (6) ರಿಷಿ ಧವನ್ಗೆ ವಿಕೆಟ್ ಒಪ್ಪಿಸಿದರು.

ರಜತ್ ಪಟಿಧಾರ್ (26), ಗ್ಲೆನ್ ಮ್ಯಾಕ್ಸ್ ವೆಲ್ (35), ದಿನೇಶ್ ಕಾರ್ತಿಕ್ (11), ಶಾಬಾಜ್ ಅಹ್ಮದ್ (9), ಹರ್ಷಲ್ ಪಟೇಲ್ (11), ವನಿಂದು ಹಸರಂಗ(1), ಮೊಹ್ಮದ್ ಸಿರಾಜ್ 9, ಆರ್ಸಿಬಿ ನಿಗದಿತ 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 155 ರನ್ ಗಳಿಸುವಲ್ಲಿ ಮಾತ್ರ ಶಕ್ತವಾಯಿತು.

ಅರ್ಧ ಶತಕ ಸಿಡಿಸಿದ ಜಾನಿ ಬೈರ್ ಸ್ಟೊ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

 

About The Author