Monday, April 14, 2025

Latest Posts

ಮುಂಬೈ ಗೆಲುವನ್ನು ಸಂಭ್ರಮಿಸಿದ ಆರ್ಸಿಬಿ ಆಟಗಾರರು, ಫ್ಯಾನ್ಸ್

- Advertisement -

ಮುಂಬೈ:ನಿರ್ಣಾಯಕ ಪಂದ್ಯದಲ್ಲಿ ಡೆಲ್ಲಿ ವಿರುದ್ಧ ಮುಂಬೈ ಗೆದ್ದು ಬೀಗಿದೆ. ಇದರ ಫಲವಾಗಿ ಆರ್ಸಿಬಿ ಪ್ಲೇ ಆಫ್ಗೆ ಏರಿದೆ.

ಪಂದ್ಯಕ್ಕೂ ಮುನ್ನ ಮುಂಬೈ ಗೆಲ್ಲಲ್ಲಿ ಎಂದು ಆರ್ಸಿಬಿ ಆಟಗಾರರು, ಆರ್ಸಿಬಿ ಅಭಿಮಾನಿಗಳು ಪ್ರಾರ್ಥಿಸಿದ್ದರು.

ಸ್ವತಃ ವಿರಾಟ್ ಕೊಹ್ಲಿ ಹಾಗೂ ನಾಯಕ ಫಾಪ್ ಡುಪ್ಲೆಸಿಸ್ ಮುಂಬೈ ಗೆಲ್ಲಲಿ ಎಂದು ಬಹಿರಂಗವಾಗಿ ಬೆಂಬಲಿಸಿದ್ದರು.

ಈ ಎಲ್ಲಾ ಕಾರಣಗಳಿಂದ ಡೆಲ್ಲಿ ಹಾಗೂ ಮುಂಬೈ ಪಂದ್ಯ ರೋಚಕತೆಗೆ ಸಾಕ್ಷಿಯಾಗಿತ್ತು.

ಕೊನೆಗೂ ಮುಂಬೈ ರೋಚಕವಾಗಿ ಗೆದ್ದಾಗ ಆರ್ ಸಿಬಿ ಆಟಗಾರರು, ಆರ್ಸಿಬಿ ಅಭಿಮಾನಿಗಳು ಎಂಜಾಯ್ ಮಾಡಿದರು.

ಮುಂಬಗೆ ಧನ್ಯವಾದ ತಿಳಿಸಿದರು. ಆಟಗಾರರು ಸಂಭ್ರಮಿಸಿದ್ದನ್ನ ಆರ್ಸಿಬಿ ಫ್ರಾಂಚೈಸಿ ವಿಡಿಯೋವನ್ನು ಪೋಸ್ಟ್ ಮಾಡಿದೆ.

ಮುಂಬೈ ಗೆದ್ದಾಗ ವಿರಾಟ್ ಹಾಗೂ ಫಾಫ್ ಸಂಭ್ರಮಿಸಿದರು. ರೋಹಿತ್ ಔಟ್ ಆದಾಗ ವಿರಾಟ್ ನಿರಾಸೆ ವ್ಯಕ್ತಪಡಿಸಿದರು.

- Advertisement -

Latest Posts

Don't Miss