Wednesday, April 16, 2025

Latest Posts

ಇಂದು ಆರ್‍ಸಿಬಿ, ಲಕ್ನೊ ಎಲಿಮಿನೇಟರ್ ಫೈಟ್ 

- Advertisement -

ಕೋಲ್ಕತ್ತಾ: ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಆರ್‍ಸಿಬಿ ಇಂದು ಎಲಿಮಿನೇಟರ್‍ನಲ್ಲಿ ಬಲಿಷ್ಠ ಲಕ್ನೊ ತಂಡವನ್ನು ಎದುರಿಸಲಿದೆ. ಇಂದು ಸೋಲುವ ತಂಡ ಟೂರ್ನಿಯಿಂದ ಹೊರ ಬೀಳಲಿದೆ. ಗೆದ್ದ ತಂಡ 2ನೇ ಕ್ವಾಲಿಫೈಯರ್‍ಗೆ ಹೋಗಲಿದೆ.

ಇಲ್ಲಿನ ಈಡನ್ ಗಾರ್ಡನ್ ಮೈದಾನದಲ್ಲಿ ನಡೆಯಲಿರುವ ಕದನ ಎರಡೂ ತಂಡಗಳಿಗೂ ಪ್ರತಿಷ್ಠೆಯ ಕದನವಾಗಿದೆ. ರನ್ ಮಷೀನ್ ವಿರಾಟ್ ಕೊಹ್ಲಿ  ಫಾರ್ಮ್‍ಗೆ ಮರಳಿದ್ದು ಆರ್‍ಸಿಬಿ ಪ್ಲೇ ಆಫ್ಗೆ ಹೋಗಲು ಸಾಹಾಯವಾಗಿದೆ. ಇಂದು ಲಕ್ನೊ ವಿರುದ್ಧ ಆತ್ಮವಿಶ್ವಾಸದಿಂದಲೇ ಕಣಕ್ಕಿಳಿಯುತ್ತಿದೆ.

ಮೊನ್ನೆ ಟೈಟಾನ್ಸ್ ವಿರುದ್ಧ ವಿರಾಟ್ ಕೊಹ್ಲಿ  54 ಎಸೆತದಲ್ಲಿ 73 ರನ್ ಸಿಡಿಸಿದರು. ವಿರಾಟ್ ಅವರ ಅದ್ಬುತ ಹೊಡೆತಗಳ ನೆರೆವಿನಿಂದ ಆರ್‍ಸಿಬಿಯ ಕಪ್ ಗೆಲ್ಲುವ ಆಸೆ ಜೀವಂತವಾಗಿದೆ.

ಲೀಗ್‍ನಲ್ಲಿ  ಯಾವುದು ಆರ್‍ಸಿಬಿ ಕೈಯಲ್ಲಿ ಇರಲಿಲ್ಲ. ಮುಂಬೈ ಇಂಡಿಯನ್ಸ್ ಡೆಲ್ಲಿ ಮೇಲೆ ಗೆಲ್ಲಬೇಕಾಗಿತ್ತು.

ವಿರಾಟ್ ಅವರ ಫಾರ್ಮ್ ತಂಡಕ್ಕೆ ಪ್ಲಸ್ ಪಾಯಿಂಟ್ ಆಗಿದ್ದು ಇಲ್ಲದಿದ್ದರೆ ಪವರ್ ಪ್ಲೇವರೆಗೂ ಬರುವುದು ಕಷ್ಟಕರವಾಗಿತ್ತು. ಉಳಿದಂತೆ ಮ್ಯಾಚ್ ಫಿನಿಶರ್‍ರಾಗಿ ದಿನೇಶ್ ಕಾರ್ತಿಕ್, ಜೋಶ್ ಹೆಜ್ಲ್ ವುಡ್ ಅವರ ಅದ್ಬುತ ಬೌಲಿಂಗ್ ದಾಳಿ ಇದೆ. ವನಿಂದು ಹಸರಂಗ ಹರ್ಷಲ್ ಪಟೇಲ್ ವೇಗಿಗಳಿಗೆ ನೆರವಾಗುವ ಪಿಚ್ ಅನ್ನ ಅಪ್ಪಿಕೊಳ್ಳಬೇಕಿದೆ. ಫಾಫ್ ಡುಪ್ಲೆಸಿಸ್ ಅವರ ತಾಳ್ಮೆಯ ನಾಯಕತ್ವ . ಈ ಎಲ್ಲಾ ಅಂಶಗಳು ಆರ್‍ಸಿಬಿಗೆ ಮೊದಲ ಐಪಿಎಲ್ ಟ್ರೋಫಿಯನ್ನು ನೆತ್ತಿ ಹಿಡಿಯಲು ಸಹಾಯ ಮಾಡಲಿದೆ.

ಮೂರು ಬಾರಿ ಫೈನಲ್ ತಲುಪಿದರೂ ಆರ್‍ಸಿಬಿ ಪ್ರಶಸ್ತಿಗೆ ನಿರಾಸೆ ಅನುಭವಿಸಿ ಅಭಿಮಾನಿಗಳ ಆಸೆಯನ್ನು ಈಡೇರಿಸುವಲ್ಲಿ ವಿಫಲವಾಗಿದೆ. ಫಾಫ್ ಡುಪ್ಲೆಸಿಸ್ ನೇತೃಥ್ವದಲ್ಲಿ  ಆರ್‍ಸಿಬಿ ತಂಡ ಸಮತೋಲನದಿಂದ ಕೂಡಿದೆ.

ವೇಗಿಗಳಾದ ಮೊಹ್ಮದ್ ಸಿರಾಜ್ (13 ಪಂದ್ಯಗಳಿಂದ 8 ವಿಕೆಟ್), ವಿಫಲರಾಗಿದ್ದಾರೆ. ಹೆಜ್ಲ್‍ವುಡ್, ಹಸರಂಗ ಮತ್ತು ಹರ್ಷಲ್ 57 ವಿಕೆಟ್ ಪಡೆದಿದ್ದಾರೆ.

 

ಹೊಸ ಪಿಚ್‍ನಲ್ಲಿ ಈ ಬೌಲರ್‍ಗಳು ಸವಾಲನ್ನು ಎದುರಿಸಬೇಕಿದೆ. 36 ವರ್ಷದ ಅನುಭವಿ ಬ್ಯಾಟರ್ ದಿನೇಶ್ ಕಾರ್ತಿಕ್ ಈ ಪಂದ್ಯದಲ್ಲಿ  ಪ್ರಮುಖಪಾತ್ರ ವಹಿಸಲಿದ್ದಾರೆ. ಕಾರ್ತಿಕ್ 14 ಇನ್ನಂಗ್ಸ್‍ಗಳಿಂದ 287 ರನ್ ಕಲೆ  ಹಾಕಿದ್ದು 9 ಬಾರಿ ಅಜೇಯರಾಗಿ 191.33 ಸ್ಟ್ರೈಕ್ ರೇಟ್ ಹೊಂದಿದ್ದಾರೆ.

ಆರ್‍ಸಿಬಿ ಬ್ಯಾಟರ್‍ಗಳಿಗೆ ವೇಗಿಗಳಾದ ಮೊಹ್ಸಿನ್ ಖಾನ್ ಮತ್ತು ಆವೇಶ್ ಖಾನ್ ದೊಡ್ಡ ಸವಾಲಾಗಿದ್ದಾರೆ.

ಇನ್ನು ಲಕ್ನೊ ತಂಡದಲ್ಲಿ ಜಾಸನ್ ಹೋಲ್ಡರ್ ಮತ್ತು ದುಶ್ಮಾಂತ್ ಚಾಮೀರಾ ಈ ಬಾರಿಯ ಆವೃತ್ತಿಯಲ್ಲಿ ಸ್ಥಿರ ಪ್ರದರ್ಶನ ನೀಡಿಲ್ಲ.  ಇನ್ನು ನಾಯಕ ಕೆ.ಎಲ್.ರಾಹುಲ್ ಅವರ ಫಾರ್ಮ್ ಕೂಡ ಚಿಂತೆಗೀಡು ಮಾಡಿದೆ.

ಆರಂಭಿಕ ಬ್ಯಾಟರ್‍ಗಳಾದ ಕ್ವಿಂಟಾನ್ ಡಿಕಾಕ್ ಹಾಗೂ ಕೆ.ಎಲ್.ರಾಹುಲ್ ಟೂರ್ನಿಯಲ್ಲಿ ಅತ್ಯುತ್ತಮ ಆರಂಭಿಕರಾಗಿದ್ದು ಆರ್‍ಸಿಬಿಗೆ ದೊಡ್ಡ ಸವಾಲಾಗಿದ್ದಾರೆ. ಇವರಿಬ್ಬರು ಟೂರ್ನಿಯಲ್ಲಿ 1039 ರನ್ ಸಿಡಿಸಿದ್ದಾರೆ. ಕೋಲ್ಕತ್ತಾ ವಿರುದ್ಧ ದಾಖಲೆ 210 ರನ್ ಜೊತೆಯಾಟ ಆಡಿದ್ದಾರೆ. ಆದರೆ ಮಧ್ಯಮ ಹಾಗೂ ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸುತ್ತಿದೆ. ದೀಪಕ್ ಹೂಡಾ ಹೊರತುಪಡಿಸಿ ಆಲ್ರೌಂಡರ್‍ಗಳಾದ ಮಾರ್ಕಸ್ ಸ್ಟೋಯ್ನಿಸ್, ಕೃಣಾಲ್ ಪಾಂಡ್ಯ ಹಾಗೂ ಆಯೂಶ್ ಬಡೋನಿ ವಿಫಲರಾಗಿದ್ದಾರೆ.

ಸಂಭಾವ್ಯ ಇಲೆವೆನ್ : 

ಆರ್‍ಸಿಬಿ ತಂಡ:  ವಿರಾಟ್ ಕೊಹ್ಲಿಘಿ, ಫಾಫ್ ಡುಪ್ಲೆಸಿಸ್ (ನಾಯಕ), ಗ್ಲೆನ್ ಮ್ಯಾಕ್ಸ್‍ವೆಲ್, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ರಜತ್ ಪಟಿಧಾರ್, ಮಹಿಪಾಲ್ ಲೊಮೊರೊರ್, ಶಬಾಜ್ ಅಹ್ಮದ್, ಹರ್ಷಲ್ ಪಟೇಲ್, ವನಿಂದು ಹಸರಂಗ, ಜೋಶ್ ಹೆಜ್ಲ್‍ವುಡ್, ಸಿದ್ದಾರ್ಥ್ ಕೌಲ್.  

ಲಕ್ನೊ ತಂಡ: ಕ್ವಿಂಟಾನ್ ಡಿಕಾಕ್ (ವಿಕೆಟ್ ಕೀಪರ್), ಕೆ.ಎಲ್.ರಾಹುಲ್, ಎವಿನ್ ಲಿವೀಸ್, ದೀಪಕ್ ಹೂಡಾ, ಮನನ್ ವೊಹ್ರಾ, ಮಾರ್ಕಸ್ ಸ್ಟೋಯ್ನಿಸ್, ಜಾಸನ್ ಹೋಲ್ಡರ್, ಕೆ.ಗೌತಮ್, ಮಾಹ್ಸಿನ್ ಖಾನ್, ಆವೇಶ್ ಖಾನ್, ರವಿ ಬಿಷ್ಣೋಯಿ.

 

 

 

 

- Advertisement -

Latest Posts

Don't Miss