Tuesday, October 22, 2024

Latest Posts

ಮೋದಿ ಪ್ರಧಾನಿಯಾಗಿ ೮ ವರ್ಷ : ಮೋದಿ ಆಡಳಿತ ತೃಪ್ತಿ ಕೊಟ್ಟಿದ್ಯಾ..?

- Advertisement -

 

ನರೇಂದ್ರ ಮೋದಿ ದೇಶದ ಪ್ರಧಾನಿಯಾಗಿ ಇವತ್ತಿಗೆ ಸರಿಯಾಗಿ ೮ ವರ್ಷ. ೨೦೧೪ರ ಚುನಾವಣೆ ದೇಶದ ಇತಿಹಾಸಲ್ಲೇ ಹೊಸ ದಾಖಲೆ, ಹೊಸ ಮೈಲಿಗಲ್ಲು. ೩೦ ವರ್ಷಗಳ ನಂತರ ಒಂದೇ ಪಕ್ಷಕ್ಕೆ ಬಹುಮತ ಬಂದಿದ್ದು. ಅದಕ್ಕೆ ಕಾರಣ ಮೋದಿ ಅನ್ನೋ ಮ್ಯಾಜಿಕಲ್ ಮ್ಯಾನ್. ಇಂದಿರಾಗಾAಧಿಯAತಹ ಗಟ್ಟಿಗಿತ್ತಿ ಮಾಡಿ ತೋರಿಸಲಾಗದ ಮ್ಯಾಜಿಕ್ಕನ್ನೂ ಮೀರಿದ್ದ ಮೋದಿ ೫ ವರ್ಷಗಳ ಯಶಸ್ವಿ ಅಧಿಕಾರವನ್ನು ನಡೆಸಿ ಮತ್ತೆ ಆಯ್ಕೆಯಾಗಿದ್ದು ಇನ್ನೊಂದು ದಾಖಲೆ.
ಅಂದ್ರೆ ೬೦ ವರ್ಷದ ನಂತರ ಸತತ ಎರಡನೇ ಬಾರಿಗೆ ಪೂರ್ಣ ಬಹುಮತದೊಂದಿಗೆ ಆರಿಸಿ ಬಂದ್ರು. ೮ ವರ್ಷಗಳ ಅವಧಿಯಲ್ಲಿ ಮೋದಿ ಅಭಿವೃದ್ಧಿ ಕಾರ್ಯಗಳ ಮೂಲಕ ಜನ ಮನ್ನಣೆ ಗಳಿಸುವದರ ಜೊತೆಗೇ ಹಲವು ವಿಷಯಗಳ ಹಿನ್ನಡೆಯಿಂದ ಟೀಕೆಗೂ ಒಳಗಾಗಬೇಕಾಯ್ತು. ಸ್ವಚ್ಛ ಭಾರತ್ ಮಿಷನ್, ಜನಧನ್ ಯೋಜನೆ, ತ್ರಿವಳಿ ತಲಾಖ್ ನಿಷೇಧ, ಅಯೋಧ್ಯೆಯ ರಾಮಮಂದಿರ ನಿರ್ಮಾಣ, ಬೊಡೋ ಶಾಂತಿ ಒಪ್ಪಂದ, ಕೊರೋನಾ ಲಸಿಕಾ ಅಭಿಯಾನ, ಡಿಜಿಟಲ್ ಇಂಡಿಯಾ, ಕ್ಯಾಷ್‌ಲೆಸ್ ಪೇಮೆಂಟ್ ಸೇರಿ ಹಲವು ಕಾರ್ಯಕ್ರಮಗಳಿಂದ ಜನಮನ್ನಣೆ ಗಳಿಸಿದರು.
ಕೃಷಿ ಕಾಯಿದೆ. ನೋಟ್ ಬ್ಯಾನ್, ನಿರುದ್ಯೋಗ, ಬೆಲೆ ಏರಿಕೆ, ಸ್ಮಾರ್ಟ್ ಸಿಟಿ ಸೇರಿದಂತೆ ಹಲವು ವಿಷಯಗಳಲ್ಲಿ ಹಿನ್ನೆಡೆ ಅನುಭವಿಸಬೇಕಾಯಿತು. ಸಿಎಎ ಜಾರಿ, ಆರ್ಟಿಕಲ್ ೩೭೦ ರದ್ಧು. ಆಧಾರ್ ದಾಖಲೆ, ಮುದ್ರಾ ಯೋಜನೆ, ಪಿ ಎಂ ಆವಾಸ್ ಯೋಜನೆ, ಕಿಸಾನ್ ಸಮ್ಮಾನ್, ವೈದ್ಯಕೀಯ ಶಿಕ್ಷಣಕ್ಕೆ ಹೊಸ ಮಂಡಳಿ ಸೇರಿದಂತೆ ಹಲವು ಐತಿಹಾಸಿಕ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ. ಹಾಗೆ ನೋಡಿದ್ರೆ ಮೋದಿ ಗುಜರಾತ್ ಮಾಡೆಲ್ ಹೆಸರು ಮಾಡಿದ್ದ ಒಂದು ಕಡೆಯಾದ್ರೆ ದೇಶಕ್ಕೆ ಪ್ರಧಾನಿಯಾಗಿ ಮೋದಿ ಗೆಲ್ಲೋಕೆ ೨೦೦೪ರಿಂದ ೨೦೧೪ರ ವರೆಗೂ ಇದ್ದ ದುರಾಡಳಿತವೇ ಕಾರಣವಾಯ್ತು.
ಹಗರಣಗಳು, ಕಾಮನ್ ವೆಲ್ತ್ ಹಗರಣ, ೨ಜಿ ಹಗರಣಗಳು ಭಾರೀ ಸದ್ದು ಮಾಡಿದ್ವು. ಬಿಜೆಪಿಯಲ್ಲಿ ಅಡ್ವಾಣಿ, ರಾಜನಾಥ್‌ಸಿಂಗ್, ಅರುಣ್ ಜೆಟ್ಲಿ, ಸುಷ್ಮಾ ಸ್ವರಾಜ್ ಹೆಸರುಗಳ ಮಿಂಚಿನAತೆ ಮೋದಿ ಹೆಸರು ಎದ್ದು ಬಂತು. ಬಿಜೆಪಿ ಪಕ್ಷದ ಭರವಸೆಯ ಪ್ರಧಾನಮಂತ್ರಿ ಅಭ್ಯರ್ಥಿಯಿಂದ ಭಾರತವನ್ನು ರಾಜತಾಂತ್ರಿಕ ವಿಚಾರಗಳಲ್ಲಿ, ವಿದೇಶಾಂಗ ವ್ಯವಹಾರಗಳಲ್ಲಿ ಅತ್ಯಂತ ಸಶಕ್ತವನ್ನಾಗಿಸಿದ್ದಕ್ಕೆ ಕೋವಿಡ್ ಸವಾಲಿನ ದಿನಗಳಲ್ಲಿ, ವಿಶ್ವದ ಬೇರೆ ದೇಶಗಳು ಎಡವಿದ್ರೂ ಮೋದಿ ಸಮರ್ಥವಾಗಿ ೧೩೦ ಕೋಟಿ ಜನಸಂಖ್ಯೆಯ ದೇಶವನ್ನು ನಿಭಾಯಿಸಿದ್ರು. ವಿಶ್ವದ ಹಲವು ದೇಶಗಳಿಗೆ ವ್ಯಾಕ್ಸಿನ್ ಪೂರೈಸಿದ್ರು. ಮೋದಿ ೩೦ ವರ್ಷ ನಂತರ ಹೊಸ ರಾಷ್ಟಿçÃಯ ಶಿಕ್ಷಣ ನೀತಿ ತಂದಿರುವುದು ಮತ್ತು ಹೊಸ ದಿಶೆಯತ್ತ ದೇಶವನ್ನು ಕೊಂಡೊಯ್ಯುತ್ತಿದ್ದಾರೆ ಎನ್ನುವ ಭರವಸೆಗಳಿದ್ದರೂ ಆಡಳಿತದಲ್ಲಿ ಇನ್ನೂ ಹಲವು ಸುಧಾರಣೆಗಳು ನಡೆಯಬೇಕಿದೆ.

ಓಂ ಕರ್ನಾಟಕ ಟಿವಿ

 

- Advertisement -

Latest Posts

Don't Miss