ಕಿಚ್ಚ ಸುದೀಪ್ ಕನ್ನಡ ಚಿತ್ರರಂಗದ ಒಬ್ಬ ಹೆಸರಾಂತ ನಟ, ನಿರ್ದೇಶಕ, ನಿರ್ಮಾಪಕ, ಕಥೆ, ಚಿತ್ರಕಥೆಗಾರ, ವಿತರಕ, ದೂರದರ್ಶನ ನಿರೂಪಕ ಮತ್ತು ಹಿನ್ನೆಲೆ ಗಾಯಕ. ಇವರು ಕನ್ನಡ ಭಾಷೆಯಲ್ಲಿ ಅಷ್ಟೇ ಅಲ್ಲದೆ ತೆಲುಗು, ಹಿಂದಿ ಮತ್ತು ತಮಿಳು ಭಾಷೆಗಳಲ್ಲೂ ಕೂಡ ನಟಿಸಿದ್ದಾರೆ.
ಕಿಚ್ಚ ಸುದೀಪ್ ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿದ್ದು, ಟ್ವಿಟ್ಟರ್ ಹಾಗೂ ಇನ್ಸ್ಟಾಗ್ರಾಮ್‌ನಲ್ಲಿ ಆಕ್ಟೀವ್ ಆಗಿರುವ ಕಿಚ್ಚ ಸುದೀಪ್ ಈವರೆಗೂ ಯಾವುದೇ ರೀಲ್ಸ್ ಮಾಡಿರಲಿಲ್ಲ. ಇದೀಗ ಮೊಟ್ಟ ಮೊದಲ ಬಾರಿಗೆ ಕಿಚ್ಚ ಸುದೀಪ್ ರೀಲ್ಸ್ ಮಾಡಿದ್ದಾರೆ. ಅದೂ ಜಾಕ್ವೆಲಿನ್ ಫಾರ್ನಾಂಡಿಸ್ ಅವರ ಬೇಡಿಕೆ ಮೇರೆಗೆ.
ಕಿಚ್ಚ ಸುದೀಪ್ ಜಾಕ್ವೆಲಿನ್ ಫರ್ನಾಂಡಿಸ್ ಜೊತೆಗೆ ವಿಡಿಯೋ ಕಾಲ್ ಸಂಭಾಷಣೆಯಲ್ಲಿರುವಾಗ ನೀವೊಂದು ರೀಲ್ಸ್ ಮಾಡಬೇಕು’’ ಅಂತ ಜಾಕ್ವೆಲಿನ್ ಫರ್ನಾಂಡಿಸ್ ಬೇಡಿಕೆ ಇಡುತ್ತಾರೆ. ಇದಕ್ಕೆ ಪ್ರತಿಕ್ರಿಹಿಸಿದ ಸುದೀಪ್ ‘’ನನ್ನ ಜೀವಮಾನದಲ್ಲೇ ನಾನು ರೀಲ್ಸ್ ಮಾಡಿಲ್ಲ’’ ಎನ್ನುತ್ತಾರೆ. ನೀವು ರೀಲ್ಸ್ ಮಾಡೋದನ್ನ ನಾವೆಲ್ಲಾ ನೋಡಲೇಬೇಕು’’ ಎಂದು ಜಾಕ್ವೆಲಿನ್ ಫರ್ನಾಂಡಿಸ್ ಹಠ ಹಿಡಿಯುತ್ತಾರೆ. ಬಳಿಕ ಕಿಚ್ಚ ಸುದೀಪ್, ‘’ರೀಲ್ಸ್ ಮಾಡುತ್ತೇನೆ. ಆದರೆ ಒಂದು ಕಂಡೀಷನ್ ಮೇಲೆ’’ ಎನ್ನುತ್ತಾರೆ.
‘’ಕನ್ನಡದಲ್ಲಿ ನಾನು ಒಂದು ಲೈನ್ ಹೇಳುತ್ತೇನೆ. ಅದನ್ನ ನೀವು ಹೇಳಬೇಕು’’ ಎಂದ ಕಿಚ್ಚ ಸುದೀಪ್, ‘’ಕರ್ನಾಟಕದ ಎಲ್ಲಾ ನನ್ನ ಸ್ನೇಹಿತರಿಗೆ ಈ ಜಾಕ್ವೆಲಿನ್ ಮಾಡುವ ನಮಸ್ಕಾರಗಳು. ರಕ್ಕಮ್ಮ ಈಗ ಬರ್ತಿದ್ದಾಳೆ’’ ಅಂತ ಹೇಳೋಕೆ ಜಾಕ್ವೆಲಿನ್ ಗೆ ಸೂಚಿಸಿದರು. ಸವಾಲು ಸ್ವೀಕರಿಸಿದ ಜಾಕ್ವೆಲಿನ್ ಫರ್ನಾಂಡಿಸ್, ಕಿಚ್ಚ ಸುದೀಪ್ ಕೊಟ್ಟ ಲೈನ್‌ಅನ್ನು ಕನ್ನಡದಲ್ಲಿ ಹೇಳುತ್ತಾರೆ.
ಸವಾಲಲ್ಲಿ ಜಾಕ್ವೆಲಿನ್ ಗೆದ್ದ ಕಾರಣ ಕಿಚ್ಚ ಸುದೀಪ್ ಅವರು ಮೊಟ್ಟ ಮೊದಲ ರೀಲ್ಸ್ ಮಾಡಿದ್ದಾರೆ. ‘’ಹಾಯ್ ಜ್ಯಾಕಿ..ನಿಮ್ಮ ಬೇಡಿಕೆ ಈಡೇರಿದೆ. ನನ್ನ ಮೊಟ್ಟ ಮೊದಲ ರೀಲ್ ಇಲ್ಲಿದೆ’’ ಎಂದು ಸುದೀಪ್ ಇನ್ಸ್ಟಾಗ್ರಾಮ್‌ನಲ್ಲಿ ರೀಲ್ಸ್ ವಿಡಿಯೋವನ್ನು ಶೇರ್ ಮಾಡಿ ಬರೆದುಕೊಂಡಿದ್ದಾರೆ.
‘ವಿಕ್ರಾಂತ್ ರೋಣ’ ಸಿನಿಮಾದ ‘ರಾ ರಾ ರಕ್ಕಮ್ಮ..’ ಹಾಡಿಗೆ ಡ್ಯಾನ್ಸ್ ಮಾಡಿರುವ ರೀಲ್ಸ್‌ಅನ್ನು ಕಿಚ್ಚ ಸುದೀಪ್ ಹಂಚಿಕೊಂಡಿದ್ದು, ಈ ರೀಲ್ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ.
ಪ್ರಕೃತಿ ಪ್ರಭಾಕರ್, ಕರ್ನಾಟಕ ಟಿವಿ, ಸಿನಿಮಾ ಬ್ಯುರೋ