ಅಹಮದಾಬಾದ್: ಕಳೆದ ವಾರ ರಾಜಸ್ಥಾನ ರಾಯಲ್ಸ್ ಈ ಬಾರಿಯ ಐಪಿಎಲ್ ಟೂರ್ನಿಯಿಂದಲೇ ಹೊರ ಬೀಳುವ ಭೀತಿಯಲ್ಲಿತ್ತು. ಡೆಲ್ಲಿ ವಿರುದ್ಧ ಗೆದ್ದ ಮುಂಬೈ, ಆರ್ಸಿಬಿಗೆ ಪ್ಲೇ ಆಫ್ ಪ್ರವೇಸಿಸುವಂತೆ ಅವಕಾಶ ಮಾಡಿಕೊಟ್ಟಿತ್ತು.
ಮೊನ್ನೆ ಎಲಿಮಿನೇಟರ್ನಲ್ಲಿ ಬಲಿಷ್ಠ ಲಕ್ನೊ ವಿರುದ್ಧ ಗೆದ್ದು ಕ್ವಾಲಿಫೈಯರ್ 2ರಲ್ಲಿ 14 ರನ್ ಗಳಿಂದ ಗೆದ್ದುಕೊಂಡಿತು. ಇಂದು ನಡೆಯುವ 2ನೇ ಕ್ವಾಲಿಫೈಯರ್ ಪಂದ್ಯವನ್ನು ಗೆದ್ದು ಫೈನಲ್ಗೆ ಹೋಗುವ ಕನಸು ಕಾಣುತ್ತಿದೆ.
ಗೆಲುವಿನೊಂದಿಗೆ ಮುನ್ನುಗುತ್ತಿರುವ ಆರ್ಸಿಬಿಗೆ ಅದೃಷ್ಟವೂ ಕೈ ಹಿಡಿಯುತ್ತಿದೆ. ಸ್ಟಾರ್ ಬ್ಯಾಟರ್ ಗಳು ಕೈಕೊಟ್ಟರು ರಜತ್ ಪಾಟಿದಾರ್ ರಂತಹ ಯುವ ಬ್ಯಾಟರ್ ತಂಡದ ಆಪಾದ್ಭಾಂದವರಾಗಿದ್ದಾರೆ.
ವೇಗಿ ಹರ್ಷಲ್ ಪಟೇಲ್ ಗಾಯದಿಂದ ಚೇತರಿಸಿಕೊಂಡಿದ್ದಾರೆ. ದಿನೇಶ್ ಕಾರ್ತಿಕ್ ಕೂಡ ಲಯ ಕಂಡಕೊಂಡಿದ್ದಾರೆ.
ಇನ್ನು ರಾಜಸ್ಥಾನ ತಂಡ ಮೊನ್ನೆ ಗುಜರಾತ್ ವಿರುದ್ಧ ಸೋತು ಲಯ ಕಳೆದುಕೊಂಡಂತೆ ಕಾಣುತ್ತಿದೆ. ಮುಖ್ಯವಾಗಿ ಬ್ಯಾಟಿಂಗ್ ವಿಭಾಗದಲ್ಲಿ ಸ್ಫೋಟಕ ಬ್ಯಾಟಿಂಗ್ ಅನ್ನ ನಿರೀಕ್ಷಿಸಲಾಗುತ್ತಿದೆ.
ಜೋಸ್ ಬಟ್ಲರ್ ಸ್ಟ್ರೈಕ್ ರೇಟ್ ಕುಸಿದಿದೆ. ನಾಯಕ ಸಂಜು ಸ್ಯಾಮನ್ 40ರ ಗಡಿ ದಾಟುತ್ತಿಲ್ಲ. ಇನ್ನು ಬೌಲಿಂಗ್ ನಲ್ಲಿ ಅಶ್ವಿನ್ ಹಾಗೂ ಕನ್ನಡಿಗ ಪ್ರಸಿದ್ಧ ಕೃಷ್ಣ ದುಬಾರಿ ಬೌಲರ್ ಗಳಾಗಿದ್ದಾರೆ.
ಇಂದಿನ 2ನೇ ಕ್ವಾಲಿಫೈಯರ್ ಪಂದ್ಯ ಇಲ್ಲಿನ ಮೊಟೆರೊ ಮೈದಾನದಲ್ಲಿ ನಡೆಯಲಿದೆ. ಈ ಹಿಂದೆ ಈ ಅಂಗಳ ರಾಜಸ್ಥಾನ ತಂಡದ ತವರು ಪಿಚ್ ಆಗಿತ್ತು. ಇಲ್ಲಿ ರಾಜಸ್ಥಾನ 12 ಪಂದ್ಯಗಳನ್ನು ಆಡಿ 7ರಲ್ಲಿ ಗೆದ್ದುಕೊಂಡಿದೆ.