ಭಾರಿ ಮಳೆಗೆ ಮಾವಿನ ಬೆಳೆ ನಾಶ; ಕಂಗಾಲಾದ ರೈತ.!

ಅಕಾಲಿಕ ಮಳೆಯಿಂದಾಗಿ ಈ ಬಾರೀಯೂ ಕೂಡ ರೈತರನ್ನು ಕಂಗಾಲಾಗುವಂತೆ ಮಾಡಿದೆ. ಕಳೆದ ಮೂರು ದಿನಗಳಿಂದ ಬಿರುಗಾಳಿ, ಆಲಿಕಲ್ಲು ಸಮೇತ ಸುರಿದ ಭಾರೀ ಮಳೆ ಮಾವಿನ ಬೆಳೆಯನ್ನೇ ನಾಶಪಡಿಸಿದೆ. ರಾಯಚೂರು ಜಿಲ್ಲೆಯಾದ್ಯಂತ ಅಪಾರ ಪ್ರಮಾಣದಲ್ಲಿ ಮಾವು ಹಾನಿಯಾಗಿದೆ. ಅದ್ರಲ್ಲೂ ರಾಯಚೂರು ತಾಲ್ಲೂಕಿನ ಕೊರವಿಹಾಳ ಗ್ರಾಮದಲ್ಲೇ ಹೆಚ್ಚಿನ ನಷ್ಟವಾಗಿದೆ.

ಕೊರವಿಹಾಳ ಗ್ರಾಮ, ತೆಲಂಗಾಣ ಗಡಿಯಲ್ಲಿರೊ ರಾಜ್ಯದ ಕೊನೆ ಗ್ರಾಮವಾಗಿದ್ದು, ಈ ಭಾಗದಲ್ಲಿ ಸುಮಾರು‌ 10 ಕ್ಕು ಹೆಚ್ಚು ಎಕರೆಯಲ್ಲಿ ರವೀಂದ್ರ ಅನ್ನೊ ರೈತ ಮಾವು ಬೆಳೆದಿದ್ದರು. ಪ್ರತಿವರ್ಷದಂತೆ ಈ ಬಾರಿಯೂ ಕೂಡ ಮೇ ಕೊನೆ ವಾರದಲ್ಲಿ ಮಾವಿಗೆ ಒಳ್ಳೆ ಬೆಲೆ ಸಿಗೋ ಸಾಧ್ಯತೆ ಇತ್ತು. ಆದರೆ ಅಕಾಲಿಕ ಮಳೆ ಅಷ್ಟರಲ್ಲಾಗಲೇ ಭರ್ಜರಿಯಾಗಿ ಬೆಳೆದಿದ್ದ ಮಾವನ್ನು ನುಂಗಿ ಹಾಕಿದೆ.

ರಾಯಚೂರು ತಾಲ್ಲೂಕಿನಲ್ಲಿ ಮಾವು ಹೂ ಬಿಡೊ‌ ಮೊದಲೇ ಜಿಗಿ‌ ರೋಗ ಬಂದಿದ್ದು, ಈ ರೋಗ ಬೇವಿನ ಮರಕ್ಕೂ ಕೂಡ ವ್ಯಾಪಿಸಿತ್ತು. ರೈತರು ಸಾಮಾನ್ಯವಾಗಿ ಎಕರೆಗೆ 50000ರೂ. ಖರ್ಚು ಮಾಡುತ್ತ ಇದ್ರೂ, ಆದ್ರೆ ಜಿಗಿ ರೋಗದ ಭಾದೆ ನಿಯಂತ್ರಿಸಲು ಕ್ರಿಮಿನಾಶಕ, ಹೆಚ್ವುವರಿ ಗೊಬ್ಬರ ಅಂತೆಲ್ಲಾ ಎಕರೆಗೆ ಲಕ್ಷಾಂತರ ರೂ. ಖರ್ಚು ಮಾಡಿದ್ದಾರೆ. ಆದರೆ ಬಿರುಗಾಳಿ ಸಹಿತ ಮಳೆಯ ಹೊಡೆತಕ್ಕೆ ಮರದಲ್ಲಿದ್ದ 70-80% ಮಾವು ನೆಲಕ್ಕೆ ಬಿದ್ದಿದೆ. ಹೀಗೆ ಬಿದ್ದು ಹೋದ ಮಾವನ್ನು ವ್ಯಾಪಾರಸ್ಥರು, ಕೆಜಿ‌ಗೆ‌ 10 ರೂ. ತೆಗೆದುಕೊಳ್ತಿಲ್ಲ. ಹಾಗಾಗಿ ಸರ್ಕಾರ, ತೋಟಗಾರಿಕೆ ಇಲಾಖೆ ಹೆಕ್ಟರ್ ಗೆ ಕನಿಷ್ಠ ಒಂದು ಲಕ್ಷ ರೂ. ಪರಿಹಾರ ನೀಡಬೇಕು ಅಂತ ರೈತರು ಆಗ್ರಹಿಸಿದ್ದಾರೆ.

ಇದಷ್ಟೇ ಅಲ್ಲ ಪ್ರತಿ ಬಾರೀ ಒಳ್ಳೆಯ ಆದಾಯ ಪಡೆಯುತ್ತಿದ್ದ ರೈತ ರವೀಂದ್ರ ಈ ಬಾರೀ ಎಲ್ಲವನ್ನೂ ಕೈಚೆಲ್ಲಿ ಕುಳಿತಿದ್ದಾರೆ. ಮಾಡಿದ ಸಾಲ ತೀರುವಷ್ಟಾದರೂ ಆದಾಯ ಬರಲಿ ಅನ್ನೋ‌ ನೀರಿಕ್ಷೆ ಇಟ್ಟುಕೊಂಡಿದ್ದಾರೆ. ವಿವಿಧ ಬೆಳೆ ನಾಶವಾಗಿರೋ ಹಿನ್ನೆಲೆ ಇಡೀ ಊರಿಗೆ ಊರೇ ಮುಂದೇನಪ್ಪ ನಮ್ಮಗತಿ ಅಂತ ಮೌನಕ್ಕೆ ಶರಣಾಗಿದ್ದಾರೆ.

 

 

About The Author