ಹಾಸನ : ಕಾಡಿನಲ್ಲಿ ಭೇಟೆಯಾಡುವ ಹುಲಿಯನ್ನ ಹಿಡಿದುಕೊಂಡು ಬಂದು ಜೂನಲ್ಲಿ ಬೋನಿನಲ್ಲಿ ಹಾಕಿದ ತಕ್ಷಣ ಅದು ಹುಲ್ಲು ತಿನ್ನಲ್ಲ. ಕಾಡಿನಲ್ಲಿರುವ ಹುಲಿ ಏನು ತಿನ್ನುತ್ತೋ, ಬೋನಿನಲ್ಲಿರುವ ಹುಲಿ ಅದನ್ನೇ ತಿನ್ನುತ್ತೆ. ಜೂನಲ್ಲಿ ಹಾಕಿದ ತಕ್ಷಣ ಹುಲಿ ತನ್ಬ ಪ್ರವೃತ್ತಿ ಮೆರೆಯಲ್ಲ, ಭೇಟೆಯಾಡುವುದನ್ನು ಮರೆಯಲ್ಲ ಎಂಬುದಾಗಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ ತಿಳಿಸಿದ್ದಾರೆ.
ಹಾಸನ ಜಿಲ್ಲೆ, ಹೊಳೆನರಸೀಪುರದಲ್ಲಿ ನಡೆದ ಶ್ರೀ ಶಿವಕುಮಾರ ಸ್ವಾಮೀಜಿ ಅವರ 115 ನೇ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಸಮಾಜದ ಶಕ್ತಿಯ ಬಗ್ಗೆ ಮಾತನಾಡಿದ ಅವರು, ಒಕ್ಕಲಿಗರ ಪ್ರಾಬಲ್ಯವಿರುವ ಹಾಸನ ನೆಲದಲ್ಲಿ ತಮ್ಮ ಸಮಾಜದ ಶಕ್ತಿಯ ಬಗ್ಗೆ ಗುಣಗಾನ ಮಾಡಿದರು.
ಕಾಡಿನಲ್ಲಿ ಭೇಟೆಯಾಡುವ ಹುಲಿಯನ್ನ ಹಿಡಿದುಕೊಂಡು ಬಂದು ಜೂನಲ್ಲಿ ಬೋನಿನಲ್ಲಿ ಹಾಕಿದ ತಕ್ಷಣ ಅದು ಹುಲ್ಲು ತಿನ್ನಲ್ಲ. ಕಾಡಿನಲ್ಲಿರುವ ಹುಲಿ ಏನು ತಿನ್ನುತ್ತೋ, ಬೋನಿನಲ್ಲಿರುವ ಹುಲಿ ಅದನ್ನೇ ತಿನ್ನುತ್ತದೆ. ಜೂನಲ್ಲಿ ಹಾಕಿದ ತಕ್ಷಣ ಹುಲಿ ತನ್ನ ಪ್ರವೃತ್ತಿ ಮೆರೆಯಲ್ಲ, ಭೇಟೆಯಾಡುವುದನ್ನು ಮರೆಯಲ್ಲ. ಅದೇ ರೀತಿ ನಮ್ಮ ಸಮಾಜ ಕೂಡ, ಕರ್ನಾಟಕ ರಾಜ್ಯದಲ್ಲಿ ದೊಡ್ಡಮಟ್ಟದಲ್ಲಿ ಇದೆ. ಅದರಲ್ಲೂ ಈ ಭಾಗದಲ್ಲಿ ನಾವ್ಯಾರು ಕೂಡ ಬಸವಣ್ಣವರ ರೀತಿ ಹುಲ್ಲು ತಿಂದು ಕೂರುವ ಅವಶ್ಯಕತೆ ಇಲ್ಲ ಎಂದು ತಿಳಿಸಿದರು.




