ಅಮೂಲ್ಯ ರವರು ಚಿಕ್ಕ ವಯಸ್ಸಿಗೆ “ಪರ್ವ” ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಇವರು ಬಾಲನಟಿಯಾಗಿ ಪರ್ವ, ಲಾಲಿ ಹಾಡು, ಮಂಡ್ಯ ಮೊದಲಾದ ಚಿತ್ರಗಳಲ್ಲಿ ದೊಡ್ಡ ನಟರ ಜೊತೆ ಕಾಣಿಸಿಕೊಂಡಿದ್ದಾರೆ.
ಸಾಕಷ್ಟು ಸಿನಿಮಾಗಳಲ್ಲಿ ಬಾಲ ನಟಿಯಾಗಿ ನಟಿಸಿ ಪ್ರಸಿದ್ಧಿ ಪಡೆದಿದ್ದ ಅಮೂಲ್ಯ “ಚೆಲುವಿನ ಚಿತ್ತಾರ” ಸಿನಿಮಾದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಅವರ ಜೊತೆ ಮೊದಲ ಬಾರಿಗೆ ನಾಯಕಿಯಾಗಿ ನಟಿಸುತ್ತಾರೆ. ಈ ಚಿತ್ರದಿಂದಲೇ ಅಮೂಲ್ಯ ಅವರ ಸಿನಿಮಾ ಜೀವನ ಬದಲಾಯಿತು. ಚೆಲುವಿನ ಚಿತ್ತಾರ ಸಿನಿಮಾ ಯಶಸ್ವಿ ನಂತರ ಇವರಿಗೆ ಹಲವು ಚಿತ್ರಗಳಲ್ಲಿ ನಟಿಸಲು ಅವಕಾಶಗಳು ದೊರೆತವು. ಚೈತ್ರದ ಚಂದ್ರಮ, ಶ್ರಾವಣಿ ಸುಬ್ರಮಣ್ಯಂ, ಗಜಕೇಸರಿ ಸೇರಿದಂತೆ ಇನ್ನು ಹಲವು ಕನ್ನಡ ಸಿನಿಮಾಗಳಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಿ ಕನ್ನಡ ಸಿನಿಮಾರಂಗದಲ್ಲಿ ಸೈ ಎನಿಸಿಕೊಂಡಿದ್ದು, ಸ್ಯಾಂಡಲ್ವುಡ್ನಲ್ಲಿ ಗೋಲ್ಡನ್ಕ್ವೀನ್ ಅಂತಲೇ ಯಶಸ್ವಿಯಾಗಿದ್ದಾರೆ.
ಸದ್ಯ ನಟಿ ಅಮೂಲ್ಯ ಕೌಟುಂಬಿಕ ಜೀವನದಲ್ಲಿ ಬ್ಯುಸಿ ಆಗಿದ್ದಾರೆ. ಮದುವೆ ಬಳಿಕ ಸಿನಿಮಾರಂಗದಿಂದ ಅಮೂಲ್ಯ ದೂರಾಗಿದ್ದು, ಇತ್ತೀಚೆಗೆ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಮಕ್ಕಳಾದ ಬಳಿಕ ನಟಿ ಅಮೂಲ್ಯ ಎಲ್ಲೂ ಕಾಣಿಸಿಕೊಂಡಿರಲಿಲ್ಲ. ಈಗ ಮಕ್ಕಳ ಜೊತೆಗೆ ದೇವಸ್ಥಾನದಲ್ಲಿ ಅಮೂಲ್ಯ ದಂಪತಿ ಕಾಣಿಸಿಕೊಂಡಿದ್ದಾರೆ. ಹಾಗು ಮೊದಲ ಬಾರಿಗೆ ಅಮೂಲ್ಯ ಮತ್ತು ಮಕ್ಕಳು ಕ್ಯಾಮೆರಾ ಕಣ್ಣಿಗೆ ಬಿದ್ದಿದ್ದಾರೆ.
ಬೆಂಗಳೂರಿನ ಮೆಜೆಸ್ಟಿಕ್‌ನಲ್ಲಿರುವ ಅಣ್ಣಮ್ಮ ದೇವಸ್ಥಾನಕ್ಕೆ ನಟಿ ಅಮೂಲ್ಯ ಭೇಟಿ ನೀಡಿ ಹರಕೆ ತೀರಿಸಿದ್ದಾರೆ. ಮಗು ಆದ ಬಳಿಕ ಇದೆ ಮೊದಲ ಬಾರಿಗೆ ಅಮೂಲ್ಯ ಹೊರಗೆ ಮಕ್ಕಳ ಜೊತೆಗೆ ಕಾಣಿಸಿಕೊಂಡಿದ್ದು ವಿಶೇಷವಾಗಿತ್ತು.
ಪ್ರಕೃತಿ ಪ್ರಭಾಕರ್, ಕರ್ನಾಟಕ ಟಿವಿ, ಸಿನಿಮಾ ಬ್ಯುರೋ