ಬೆಂಗಳೂರು: ರಾಜ್ಯಸಭೆ ಚುನಾವಣೆಗೆ ಕರ್ನಾಟಕದಿಂದ ನಾಲ್ಕು ಸ್ಥಾನಗಳಿಗೆ ಜೂನ್.10ರಂದು ಚುನಾವಣೆ ಘೋಷಣೆ ಮಾಡಲಾಗಿದೆ. ಬಿಜೆಪಿಯಿಂದ ಇಬ್ಬರು, ಕಾಂಗ್ರೆಸ್ ನಿಂದ ಒಬ್ಬರಿಗೆ ನಿನ್ನೆ ಟಿಕೆಟ್ ಘೋಷಣೆ ಮಾಡಲಾಗಿತ್ತು. ಈ ಬೆನ್ನಲ್ಲೇ ಜೆಡಿಎಸ್ ಗೆ ಬಿಕ್ ಶಾಕ್ ನೀಡುವಂತೆ ಕಾಂಗ್ರೆಸ್ ನಿಂದ 2ನೇ ಅಭ್ಯರ್ಥಿಯಾಗಿ ಮನ್ಸೂರ್ ಆಲಿ ಖಾನ್ ಗೆ ಬಿ-ಫಾರಂ ಟಿಕೆಟ್ ನೀಡಲಾಗಿದೆ.
ಇಂದು ಕೆಪಿಸಿಸಿ ಕಚೇರಿಯಲ್ಲಿ ಅಧ್ಯಕ್ಷರಾದಂತ ಡಿಕೆ ಶಿವಕುಮಾರ್, ವಿಪಕ್ಷ ನಾಯಕ ಸಿದ್ಧರಾಮಯ್ಯ ಸಮ್ಮುಖದಲ್ಲಿ ಎಐಸಿಸಿಯಿಂದ ರಾಜ್ಯಸಭಾ ಚುನಾವಣೆಗೆ ಟಿಕೆಟ್ ಘೋಷಣೆಯಾಗಿದ್ದಂತ ಜೈರಾಂ ರಮೇಶ್ ಗೆ ಬಿ-ಫಾರಂ ವಿತರಿಸಲಾಯಿತು.
ಇನ್ನೂ ಅಚ್ಚರಿ ಎನ್ನುವಂತೆ ಮೂರನೇ ಅಭ್ಯರ್ಥಿಗಾಗಿ ಸ್ಪಷ್ಟ ಬಹುಮತವಿಲ್ಲದೇ ಇದ್ದರೂ, ಕಾಂಗ್ರೆಸ್ ಪಕ್ಷದಿಂದ 2ನೇ ಅಭ್ಯರ್ಥಿಯಾಗಿ ಮನ್ಸೂರ್ ಆಲಿ ಖಾನ್ ಅವರಿಗೂ ಇಂದು ಬಿ-ಫಾರಂ ಅನ್ನು ಕಾಂಗ್ರೆಸ್ ನಿಂದ ವಿತರಿಸಲಾಗಿದೆ. ಈ ಇಬ್ಬರು ಇಂದೇ ತಮ್ಮ ನಾಮಪತ್ರವನ್ನು ಸಲ್ಲಿಸಲಿದ್ದಾರೆ. ಈ ಮೂಲಕ ಜೆಡಿಎಸ್ ಗೆ ಕಾಂಗ್ರೆಸ್ ಬಿಗ್ ಶಾಕ್ ನೀಡಿದೆ.




