Saturday, November 29, 2025

Latest Posts

ಅಜ್ಜಿಯ ನೆನಪಲ್ಲಿ ಹೊಸ ಸಿನಿಮಾ ಬ್ಯಾನರ್ ಆರಂಭಿಸಿದ ಮೊಮ್ಮಗ.!

- Advertisement -

ಕನ್ನಡ ಚಿತ್ರರಂಗಕ್ಕೆ ಅನೇಕ ಹೊಸ ಹೊಸ ಕಲಾವಿದರು ಮತ್ತು ನಿರ್ದೇಶಕರು ಎಂಟ್ರಿ ಕೊಡ್ತಿರೋದು ಹೊಸದೇನಲ್ಲ. ಹಾಗೆಯೇ ಕೆಲವರು ಅವರದ್ದೇ ಆದ ಹೊಸ ಸಿನಿಮಾ ನಿರ್ಮಾಣ ಸಂಸ್ಥೆಯನ್ನು ಶುರು ಮಾಡುತ್ತಿರುವುದು ಹೊಸದೇನಲ್ಲ. ಇದೀಗ ಈ ಸಾಲಿಗ ಮತ್ತೊಂದು ಸಿನಿಮಾ ನಿರ್ಮಾಣ ಸಂಸ್ಥೆ ಸೇರ್ಪಡೆಯಾಗುತ್ತಿದೆ.

ಹಾಗಿದ್ರೆ ಯಾವದಪ್ಪ ಈ ಹೊಸ ಸಿನಿಮಾ ನಿರ್ಮಾಣ ಸಂಸ್ಥೆ ಅಂತೀರಾ..ಮುಂದೆ ಓದಿ.

ಕನ್ನಡ ಚಿತ್ರರಂಗದಲ್ಲಿ ಹೊಸದೊಂದು ‘ಗುಲಾಬ್ ಪ್ರೊಡಕ್ಷನ್ಸ್’ ಎಂಬ ಸಿನಿಮಾ ನಿರ್ಮಾಣ ಸಂಸ್ಥೆ ಶುರುವಾಗಿದೆ. ಇತ್ತೀಚಿಗಷ್ಟೇ ಈ ಸಂಸ್ಥೆಯ ಲಾಂಚ್ ಸಮಾರಂಭ ನಡೆಯಿತು. ಈ ಉದ್ಘಾಟನಾ ಕಾರ್ಯಕ್ರಮಕ್ಕೆ ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ, ಕಾಂಗ್ರೆಸ್ ಪಕ್ಷದ ಮುಖಂಡರಾದ ಕೆ.ಎಚ್. ಮುನಿಯಪ್ಪ, ಯುವ ಕಾಂಗ್ರೆಸ್‌ನ ರಾಷ್ಟ್ರೀಯ ಅಧ್ಯಕ್ಷ ಬಿ.ವಿ. ಶ್ರೀನಿವಾಸ್‌, ನಿರ್ದೇಶಕರಾದ ಎಸ್‌.ವಿ. ರಾಜೇಂದ್ರ ಸಿಂಗ್ ಬಾಬು, ನಾಗತಿಹಳ್ಳಿ ಚಂದ್ರಶೇಖರ್ ಸೇರಿದಂತೆ ಅನೇಕರು ಆಗಮಿಸಿ, ತಂಡಕ್ಕೆ ಶುಭ ಹಾರೈಸಿದರು.

ಗುಲಾಬ್ ಪದ್ಮನಾಭ ಸಾ ಖೋಡೆ ಅವರ ಮೊಮ್ಮಗ. ತಮ್ಮ ಅಜ್ಜಿಯ ನೆನಪಿನಲ್ಲಿ ಗುಲಾಬ್ ಪ್ರೊಡಕ್ಷನ್ಸ್ ಎಂಬ ಹೆಸರಿನಲ್ಲಿ ಸಿನಿಮಾ ನಿರ್ಮಾಣ ಸಂಸ್ಥೆಯನ್ನು ಆರಂಭಿಸಿದ್ದಾರೆ. ಇದರ ಮೊದಲ ಕೊಡುಗೆಯಾಗಿ ‘streets of ಬೆಂಗಳೂರು’ ಎಂಬ ಕಿರುಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.

‘Streets of ಬೆಂಗಳೂರು’ ಎಂಬ ಕಿರುಚಿತ್ರವನ್ನು ಕೃಷ್ಣ ನಿರ್ಮಾಣ ಮಾಡಿದ್ದು, ಪ್ರೀತಮ್ ಶಿವಕುಮಾರ್ ರವರು ನಿರ್ದೇಶಿಸಿದ್ದಾರೆ. ಈ ಕಿರುಚಿತ್ರ 27 ನಿಮಿಷಗಳಿದ್ದು, ಈ ಕಿರುಚಿತ್ರದ ಮೂಲಕ ಪ್ರಜ್ವಲ್ ಗೌಡ ಎಂಬ ನಟನನ್ನು ‘ಗುಲಾಬ್ ಪ್ರೊಡಕ್ಷನ್ಸ್’ ಕನ್ನಡ ಚಿತ್ರರಂಗಕ್ಕೆ ಪರಿಚಯಿಸುತ್ತಿದೆ.

ಪ್ರಕೃತಿ ಪ್ರಭಾಕರ್, ಕರ್ನಾಟಕ ಟಿವಿ, ಸಿನಿಮಾ ಬ್ಯುರೋ 

 

- Advertisement -

Latest Posts

Don't Miss