Thursday, December 4, 2025

Latest Posts

ರಾಗಿ ಮುದ್ದೆ ಸೇವಿಸಿ, ಅನಾರೋಗ್ಯಕ್ಕೆ ಗುಡ್ ಬಾಯ್ ಹೇಳಿ.!

- Advertisement -

ರಾಗಿ ಮುದ್ದೆ ಕರ್ನಾಟಕದ ಗ್ರಾಮೀಣ ಜನರ ಒಂದು ಮುಖ್ಯ ಆಹಾರ. ಶ್ರಮಜೀವಿಗಳು ಮತ್ತು ಗ್ರಾಮಾಂತರ ಪ್ರದೇಶಗಳ ಜನರು ಹೆಚ್ಚಾಗಿ ರಾಗಿ ಮುದ್ದೆಯನ್ನ ಸೇವಿಸುತ್ತಾರೆ. ರಾಗಿಹಿಟ್ಟಿನಿಂದ ತಯಾರಿಸುವ ಈ ಆಹಾರ ಆರೋಗ್ಯಕರವೆಂದು ಪರಿಗಣಿಸಲ್ಪಟ್ಟಿದೆ. “ಹಿಟ್ಟು ತಿಂದು ಗಟ್ಟಿಯಾಗು” ಎಂಬ ಗಾದೆ ರಾಗಿಮುದ್ದೆಯ ಮಹತ್ವವನ್ನು ಸಾರುತ್ತದೆ.

ಹೀಗಿರುವಾಗ ರಾಗಿ ಮುದ್ದೆಯನ್ನ ಯಾವ ಸಮಯದಲ್ಲಿ ತಿನ್ನಬೇಕು, ಯಾವ ಸಮಯದಲ್ಲಿ ತಿನ್ನಬಾರದು ಎಂಬುದು ಸಾಕಷ್ಟು ಜನರ ಪ್ರಶ್ನೆಯಾಗಿದೆ.

ರಾಗಿ ಮುದ್ದೆಯನ್ನ ರಾತ್ರಿ ಸಮಯದಲ್ಲಿ ತಿನ್ನಬಹುದು. ಏಕೆಂದರೆ ರಾಗಿಯಲ್ಲಿರುವ ಟ್ರಿಪ್ಟೊಫಾನ್‌, ಖಿನ್ನತೆ ಮತ್ತು ಆತಂಕವನ್ನು ದೂರವಾಗಿಸುತ್ತದೆ. ರಾತ್ರಿಯ ಸಮಯದಲ್ಲಿ ಮುದ್ದೆ ತಿನ್ನುವುದರಿಂದ ನಿದ್ರಾಹೀನತೆ ಮತ್ತು ಅನೇಕ ಸಮಸ್ಯೆಗಳನ್ನು ದೂರವಾಗಿಸಬಹುದು. ಅದಷ್ಟೇ ಅಲ್ಲದೆ ನಮ್ಮ ದೇಹಕ್ಕೆ ಬೇಕಾದ ಶಕ್ತಿಯನ್ನು ತುಂಬಿಸಿ ಆರೋಗ್ಯವಾಗಿರಿಸಲು ಸಹಾಯ ಮಾಡುತ್ತದೆ.

ರಾಗಿ ಮುದ್ದೆಯನ್ನ ರಾತ್ರಿ ಸಮಯದಲ್ಲಿ ಅಷ್ಟೇ ಅಲ್ಲದೆ ಬೆಳಗ್ಗೆ ಕೂಡ ತಿನ್ನಬಹುದು. ಇದರಿಂದಾಗಿ ಸಾಕಾತು ಉಪಯೋಗಗಳಿವೆ. ರಾಗಿ ಮುದ್ದೆಯನ್ನು ದಿನಕ್ಕೆ 2 ಬಾರಿ ಸೇವಿಸುವುದರಿಂದ ಸೊಂಟದ ತೂಕವನ್ನು ಗಣನೀಯವಾಗಿ ಇಳಿಸಿಕೊಳ್ಳಬಹುದು. ರಾಗಿಯಲ್ಲಿರುವ ಟ್ರಿಪ್ಟೊಫಾನ್‌ ಹಸಿವನ್ನು ಕಡಿಮೆ ಮಾಡುವ ಮೂಲಕ ಹೆಚ್ಚೆಚ್ಚು ಕ್ಯಾಲೋರಿ ಹೊಂದಿರುವ ಆಹಾರದ ಸೇವನೆಗೆ ಕಡಿವಾಣ ಹಾಕುತ್ತದೆ.

ಇದೆಲ್ಲದರ ಜೊತೆಗೆ ರಾಗಿ ಮುದ್ದೆಯಲ್ಲಿ ಪ್ರೋಟೀನ್‌ ಮತ್ತು ಆರೋಗ್ಯಕರ ಕಾರ್ಬೋಹೈಡ್ರೇಟ್‌ಗಳು ಸಹ ಇದೆ. ಹಾಗು ರಾಗಿ ಮುದ್ದೆಯಲ್ಲಿ ಫೈಬರ್‌ ಹೆಚ್ಚಾಗಿರುವುದರಿಂದ ದೀರ್ಘಾಕಾಲದವರೆಗೆ ಪರಿಪೂರ್ಣವಾಗಿರಲು ಸಹಾಯ ಮಾಡುತ್ತದೆ. ಹಾಗಾಗಿ ತೂಕವನ್ನು ನಿರ್ವಹಿಸಲು ರಾಗಿ ಮುದ್ದೆ ಬೆಸ್ಟ್ ಆಹಾರವಾಗಿದೆ.

ರಾಗಿ ಮುದ್ದೆ ಪೌಷ್ಟಿಕ ಆಹಾರವಾಗಿದ್ದು, ಇದರಲ್ಲಿರುವ ಕ್ಯಾಲ್ಸಿಯಂ ಮತ್ತು ವಿಟಮಿನ್‌ ಡಿ, ಬಲವಾದ ಮೂಳೆಗಳನ್ನು ಪಡೆಯಲು ಹಾಗೂ ಯಾವುದೇ ಮೂಳೆಯ ಸಮಸ್ಯೆಗಳಿಂದ ಪಾರಾಗಲು ರಾಗಿ ಮುದ್ದೆಯನ್ನ ಸೇವಿಸುವುದು ಉತ್ತಮ.

ರಾಗಿ ಮುದ್ದೆ ತೂಕ ಇಳಿಕೆಗಷ್ಟೇ ಅಲ್ಲದೆ ಸಕ್ಕರೆ ಕಾಯಿಲೆ ಇರುವವರಿಗೂ ಕೂಡ ಇದು ಬೆಸ್ಟ್‌ ಫುಡ್‌ ಎಂದು ಹೇಳಿದರೆ ತಪ್ಪಾಗದು. ಇದರಲ್ಲಿ ಕಡಿಮೆ ಸಕ್ಕರೆಯ ಅಂಶ ಮತ್ತು ಕಡಿಮೆ ಕ್ಯಾಲೋರಿ ಹೊಂದಿರುವುದರಿಂದ ಮಧುಮೇಹಿಗಳಿಗೆ ಒಳ್ಳೆಯದು.

ರಾಗಿ ಮುದ್ದೆಯನ್ನೇ ತಿನ್ನುತ್ತಾ ಇದ್ದರೆ ಯಾರಿಗೆ ಆದರೂ ಬೋರ್ ಆಗುತ್ತೆ. ಹಾಗಾಗಿ ರಾಗಿಯಿಂದ ವಿವಿಧ ಬಗೆಯ ತಿಂಡಿಗಳನ್ನು ತಯಾರಿಸಿಕೊಂಡು ಸಹ ತಿನ್ನಬಹುದು. ಸಿಹಿಯಾದ ರಾಗಿ ಲಡ್ಡುಗಳು, ರಾಗಿ ದೋಸೆ, ರಾಗಿ ಮುದ್ದೆ ಹಾಗೂ ರಾಗಿ ರೊಟ್ಟಿಯನ್ನ ತಯಾರಿಸಿಕೊಂಡು ತಿನ್ನಬಹುದು.

ಪ್ರಕೃತಿ ಪ್ರಭಾಕರ್, ಕರ್ನಾಟಕ ಟಿವಿ, ಸಿನಿಮಾ ಬ್ಯುರೋ 

 

 

 

 

 

- Advertisement -

Latest Posts

Don't Miss