Friday, March 14, 2025

Latest Posts

ಲುಷಿತ ನೀರು ಕುಡಿದು ೬೦ ಜನ ಅಸ್ವಸ್ಥೆ..!

- Advertisement -

ರಾಯಚೂರು : ಎರಡು ನದಿಗಳು ಇದ್ದು ನಗರಸಭೆ ದಿವ್ಯ ನಿರ್ಲಕ್ಷ ದಿಂದ ರಾಯಚೂರು ನಗರಕ್ಕೆ ಸರಿಯಾದ ರೀತಿ ನೀರು ನೀಡದೆ ಇಂದು
ಏಕಾಏಕಿ ಸುಮಾರು 60 ಕ್ಕು ಹೆಚ್ಚು ಜನ ಅಸ್ಪತ್ರೆಗೆ ದಾಖಲಾಗಿದ್ದು, ಅಲ್ಲಿನ ಜನ ಅಕ್ಷರಶಃ ಬೆಚ್ಚಿ ಬಿದ್ದಿದ್ದಾರೆ..ಹಲವರಿಗೆ ಮೂತ್ರಪಿಂಡದ ಸಮಸ್ಯೆ ಕೂಡ ಎದುರಾಗಿದ್ದು, ಎಲ್ಲೆಡೆ ಆತಂಕ ಮನೆ ಮಾಡಿದೆ.

ರಾಯಚೂರು ನಗರದ ಶಿಲಾತಲಾಬ್,ಮಾವಿನಕೆರೆ,ಸ್ಟೇಶನ್ ಏರಿಯಾ,ಆಜಾದ್ ನಗರ ಸೇರಿ ಹಲವೆಡೆ ರಾತ್ರೋ ರಾತ್ರಿ ಅದೊಂದು ಅನಾಹುತ ನಡೆದುಹೋಗಿದೆ..ರಾಯಚೂರು ನಗರದಲ್ಲಿ ಕಲುಷಿತ ನೀರು ಕುಡಿದು ಅದೆಷ್ಟೋ ಜನ ವಿಲವಿಲ ಒದ್ದಾಡುತ್ತಿದ್ದಾರೆ.
ಕಳೆದ ಒಂದು ವಾರದಿಂದ ಜನ ಕಲುಷಿತ ನೀರನ್ನ ಕುಡಿಯುತ್ತಿದ್ದಾರೆ,
ರಾಯಚೂರು ನಗರಸಭೆ ಸರಬರಾಜು ಮಾಡೊ ನೀರಿನಿಂದಲೇ ಇಂಥಹ ಅನಾಹುತ ಸಂಭವಿಸಿದೆ,ಕುಡಿಯೋ ನೀರು ಕಲುಷಿತಗೊಂಡಿದ್ದು,ಅದೇ ನೀರನ್ನ ಕುಡಿದ ಜನ ಈಗ ಹಾಸಿಗೆ ಹಿಡಿದಿದ್ದಾರೆ.
ಇಂದಿರಾನಗರದ ಮಲ್ಲಮ್ಮ ಅನ್ನೋ ಮಹಿಳೆ ಇದೇ ಕಾರಣಕ್ಕೆ ಮೃತಪಟ್ಟಿದ್ದು,60 ಕ್ಕು ಹೆಚ್ಚು ಜನ ಅಸ್ವಸ್ಥಗೊಂಡಿದ್ದಾರೆ.
ಕಲುಷಿತ ನೀರು ಕುಡಿದ ಪರಿಣಾಮ ವಾಂತಿ,ಭೇದಿ ಶುರುವಾಗಿರೋದ್ರಿಂದ ಅಸ್ವಸ್ಥಗೊಂಡಿರೋರೆಲ್ಲಾ ರಾಯಚೂರು ನಗರದ ರಿಮ್ಸ್ ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿ,ನರಳುತ್ತಿದ್ದಾರೆ..

ಇನ್ನೂ ನಗರದ ವಿವಿಧ ಏರಿಯಾಗಳಲ್ಲಿ ಇಂಥಹ ದುಸ್ಥಿತಿ ಎದುರಾಗಿದೆ..ರಾಯಚೂರು ಜಿಲ್ಲೆ ಮೊದಲೇ ಬಿರುಬಿಸಿಲಿಗೆ ಹೆಸರುವಾಸಿ..ವೈದ್ಯರು ಕೂಡ ಮಕ್ಕಳಿಗೆ ಹೆಚ್ಚಿನ ನೀರು ಕುಡಿಯಲು ಹೇಳ್ತಾರೆ..!
ಆದ್ರೆ ನಗರಸಭೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡದೇ ಜನರ ಜೀವದ ಜೊತೆ ಆಟವಾಡ್ತಿದೆ..ಎರಡು ದಿನಕ್ಕೊಮ್ಮೆ ಬರೋ ನೀರು,ಸಂಪೂರ್ಣ ಕಲುಷಿತಗೊಂಡಿರುತ್ತದೆ, ನೀರನ್ನು ಒದು ದಿನ ಇಟ್ಟರೆ ಸಾಕು, ಆ ನೀರಿನಲ್ಲಿ ಮಾರನೇ ದಿನ ಹುಳು ಓಡಾಡುತ್ತವೆ,ಇಂಥ ಕಲಿಷಿತ ನೀರು ಕುಡಿದು ಒಟ್ಟು 63 ಜ‌ನ ಅಸ್ವಸ್ಥಗೊಂಡಿದ್ದಾರೆ.ಇದರಲ್ಲಿ 23 ಮಕ್ಕಳು ಕೂಡ ಇದ್ದಾರೆ,ಇದೇ‌ ಕಲುಷಿತ ನೀರಿನ ಪರಿಣಾಮದಿಂದ ಮೂರು ಜನರಿಗೆ ಮೂತ್ರಪಿಂಡದ ಸಮಸ್ಯೆ ಉಂಟಾಗಿದೆ,ಬಿಪಿ ಲೆವಲ್ ಸ್ಟೇಬಲ್ ಆಗಿದ್ದರೂ,ಕಿಡ್ನಿ ಸಮಸ್ಯೆ ಉಲ್ಬಣಿಸಿದೆ,ಒಬ್ಬರಿಗೆ ಡೈಯಾಲಿಸಿಸ್ ಮಾಡಲಾಗಿದ್ದು,ಉಳಿದವರನ್ನು ಮಾನಿಟರ್ ಮಾಡಲಾಗ್ತಿದೆ,ಮಕ್ಕಳಿಗೆ ಅಂಥದ್ದೇನು ಸಮಸ್ಯೆ ಗಂಭೀರ ಸ್ವರೂಪದಲ್ಲಾಗಿಲ್ಲ ಅಂತ ರಿಮ್ಸ್ ಅಸ್ಪತ್ರೆಯ ಅಧಿಕ್ಷಕ ಡಾ.ಭಾಸ್ಕರ್ ತಿಳಿಸಿದ್ದಾರೆ.

ಇಷ್ಟೆಲ್ಲಾ ಅನಾಹುತವಾಗ್ತಿದ್ರು ಕೂಡ ರಾಯಚೂರು ನಗರಸಭೆ ಕಮಿಷನರ್ ಆಗ್ಲಿ,ಅಧ್ಯಕ್ಷರಾಗ್ಲಿ ಯಾರೂ ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ ಎನ್ನುಯುದೇ ಪ್ರೆಶ್ನೆಯಾಗಿದೆ,ಬಡವರು ಕುಡಿಯೋದೇ ಕಲುಷಿತ ನೀರನ್ನ ನಾವೇನ್ ಮಾಡೋಕೆ ಆಗುತ್ತೆ ಅನ್ನೋ ದುರಹಂಕಾದರಲ್ಲಿ ಸಂಬಂಧಪಟ್ಟ ಅಧಿಕಾರಿಗಳು ವರ್ತಿಸುತ್ತಿರೊ ಹಾಗೆ ಕಾಣ್ತಿದೆ. ಸೌಜನ್ಯಕ್ಕಾದ್ರೂ ಜನಪ್ರತಿನಿಧಿಗಳು ಅಸ್ವಸ್ಥಗೊಂಡವರನ್ನಾಗಲಿ ಇಲ್ಲಾ ಮೃತಳ ಕುಟುಂಬಸ್ಥರನ್ನ ಸಂಪರ್ಕಿಸಿಲ್ಲ.ಇದಕ್ಕಿಂತ ದುರಂತಹಂಕಾರದ ಪರವಾವಧಿ ಮತ್ತೊಂದಿಲ್ಲ ಅಂತ ಜನ ಹಿಡಿ ಶಾಪ ಹಾಕ್ತಿದ್ದಾರೆ.

ಅನಿಲ್‌ಕುಮಾರ್ ಕರ್ನಾಟಕ ಟಿವಿ ರಾಯಚೂರು. 

 

- Advertisement -

Latest Posts

Don't Miss