ಪ್ಯಾರಿಸ್ : ಸ್ಪೇನ್ ನ ಅಗ್ರ ಟೆನಿಸ್ ಆಟಗಾರ ರಾಫೆಲ್ ನಡಾಲ್ ಫ್ರೆಂಚ್ ಓಪನ್ ಟೂರ್ನಿ ಮುಡಿಗೇರಿಸಿಕೊಂಡಿದ್ದಾರೆ. 14ನೇ ಬಾರಿ ಫ್ರೆಂಚ್ ಓಪನ್ ಕಿರೀಟ ಧರಿಸಿದ ಸಾಧನೆ ಮಾಡಿದ್ದಾರೆ.
ಜೊತೆಗೆ ದಾಖಲೆಯ 22ನೇ ಗ್ರ್ಯಾನ್ ಸ್ಲಾಮ್ ಗೆದ್ದ ಸಾಧನೆ ಮಾಡಿದ್ದಾರೆ.
ಭಾನುವಾರ ಇಲ್ಲಿ ನಡೆದ ಪುರುಷರ ವಿಭಾಗದ ಫೈನಲ್ ನಲ್ಲಿ ನಾರ್ವೆಯ ಕ್ಯಾಸ್ಪೆರ್ ರುಡ್ ವಿರುದ್ಧ 2 ಗಂಟೆ 18 ನಿಮಿಷಗಳ ಕಾಲ ಹೋರಾಡಿ 6-3, 6-3,6-0 ಅಂಕಗಳ ಅಂತರದಿಂದ ಗೆದ್ದರು.
ವಿಶೇಷವೆಂದರೆ ಈ ಟೂರ್ನಿಯಲ್ಲಿ ನಡಾಲ್ 14 ಬಾರಿ ಫೈನಲ್ ಪ್ರವೇಶಿಸಿದ್ದಾರೆ. 14 ಬಾರಿಯೂ ಫೈನಲ್ ನಲ್ಲಿ ಗೆದ್ದಿದ್ದಾರೆ.
ಮತ್ತಿಬ್ಬರು ಟೆನಿಸ್ ದಿಗ್ಗಜರಾದ ಜೋಕೋವಿಚ್ ಹಾಗೂ ರೋಜರ್ ಫೆಡರರ್ ತಲಾ 20 ಗ್ರ್ಯಾನ್ ಸ್ಲಾಮ್ ಗೆದ್ದಿದ್ದಾರೆ.
ಮತ್ತೊಂದು ವಿಶೇಷ ವೆಂದರೆ ಇದೇ ಮೊದಲ ಬಾರಿಗೆ ನಡಾಲ್ ತಮ್ಮ ವೃತ್ತಿ ಜೀವನದಲ್ಲಿ ಒಂದೇ ವರ್ಷದಲ್ಲಿ ಆಸ್ಟ್ರೇಲಿಯಾ ಹಾಗೂ ಫ್ರೆಂಚ್ ಓಪನ್ ಗೆದ್ದ ಸಾಧನೆ ಮಾಡಿದ್ದಾರೆ.




