Wednesday, October 15, 2025

Latest Posts

BREAKING NEWS: PSI ನೇಮಕಾತಿ ಪರೀಕ್ಷೆ ಅಕ್ರಮದಲ್ಲಿ ಆರೋಪಿ ದರ್ಶನ್ ಗೌಡ ಅರೆಸ್ಟ್

- Advertisement -

ಬೆಂಗಳೂರು: ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣದಲ್ಲಿ ವಿಚಾರಣೆ ವೇಳೆಯಲ್ಲಿ ಸಚಿವ ಡಾ.ಸಿಎನ್ ಅಶ್ವತ್ಥ ನಾರಾಯಣ ಹೆಸರು ಹೇಳಿದ್ದ ಕಾರಣ, ಅಕ್ರಮದಲ್ಲಿ ಭಾಗಿಯಾಗಿದ್ದಂತ ಆರೋಪಿಯನ್ನು  ಪೊಲೀಸರು ಬಿಟ್ಟು ಕಳುಹಿಸಿದ್ದಾರೆ ಎಂಬುದಾಗಿ ಕಾಂಗ್ರೆಸ್, ಜೆಡಿಎಸ್ ನಾಯಕರು ಆರೋಪಿಸಿದ್ದರು. ಈ ಬೆನ್ನಲ್ಲೇ ಇಂದು ಆರೋಪಿ ದರ್ಶನ್ ಗೌಡ ಅನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ.

ಯಲಹಂಕ ನ್ಯೂ ಟೌನ್ ನ ಖಾಸಗಿ ಶಾಲೆಯೊಂದರಲ್ಲಿ ಪಿಎಸ್ಐ ನೇಮಕಾತಿ ಪರೀಕ್ಷೆ ಸಂಬಂಧ ಅಭ್ಯರ್ಥಿ ದರ್ಶನ್ ಗೌಡ ಪರೀಕ್ಷೆ ಬರೆದಿದ್ದರು. ಪಿಎಸ್ಐ ನೇಮಕಾತಿ ಅಕ್ರಮ ಹೊರ ಬರುತ್ತಿದ್ದಂತೆ, ಈತನೂ ಅಕ್ರಮದಲ್ಲಿ ಭಾಗಿಯಾಗಿರೋದಾಗಿ ತಿಳಿದು ಬಂದಿತ್ತು. ಪೊಲೀಸರು ವಿಚಾರಣೆಗೆ ಕರೆಸಿ, ವಿಚಾರಣೆ ನಡೆಸಿದ್ದರು. ಆದ್ರೇ ಸಚಿವ ಅಶ್ವತ್ಥನಾರಾಯಣ ಸಂಬಂಧಿ ಎಂದು ಹೇಳಿದ ಕಾರಣ, ವಿಚಾರಣೆಯ ಬಳಿಕ ಬಿಟ್ಟು ಕಳುಹಿಸಿದ್ದರು ಎಂಬುದಾಗಿ ಹಲವರು ಆರೋಪಿಸಿದ್ದರು.

ಈ ಬಳಿಕ, ವ್ಯಾಪಕ ಆಕ್ರೋಶವನ್ನು ಪೊಲೀಸರ ನಡೆಯ ಬಗ್ಗೆ ವ್ಯಕ್ತವಾಗಿತ್ತು. ಈ ನಂತ್ರ ಸಿಐಡಿಗೆ ಪ್ರಕರಣ ವರ್ಗಾವಣೆಯಾದ ಬಳಿಕ, ದರ್ಶನ್ ಗೌಡ ಕೂಡ ಪಿಎಸ್ಐ ನೇಮಕಾತಿ ಅಕ್ರಮದಲ್ಲಿ ಭಾಗಿಯಾಗಿದ್ದ ಕಾರಣ, ಇಂದು ಯಲಹಂಕ ನ್ಯೂ ಟೌನ್ ಠಾಣೆಯ ಪೊಲೀಸರು ಬಂಧಿಸಿರೋದಾಗಿ ತಿಳಿದು ಬಂದಿದೆ.

ಅಂದಹಾಗೇ ಆರೋಪಿ ದರ್ಶನ್ ಗೌಡ ಅವರು ಪಿಎಸ್ಐ ನೇಮಕಾತಿಗೆ ನಡೆದಂತ ಪರೀಕ್ಷೆಯಲ್ಲಿ ಮೊದಲ ಪೇಪರ್ ನಲ್ಲಿ 19 ಅಂಕ ಪಡೆದಿದ್ದರೇ, 2ನೇ ಪತ್ರಿಕೆಯಲ್ಲಿ 141 ಅಂಕ ಪಡೆದಿದ್ದರು. ಒಟ್ಟು 160 ಅಂಕವನ್ನು ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ಪಡೆದು, ತಾತ್ಕಾಲಿಕ ನೇಮಕಾತಿ ಪಟ್ಟಿಯನ್ನು ಆಯ್ಕೆಯಾಗಿದ್ದರು.

- Advertisement -

Latest Posts

Don't Miss