Saturday, April 19, 2025

Latest Posts

PSI ನೇಮಕಾತಿ ಹಗರಣದಲ್ಲಿ ಅಧಿಕಾರಿಗಳು, ಸಚಿವರು ಭಾಗಿ-ಡಿ.ಕೆ.ಶಿವಕುಮಾರ್ ಗಂಭೀರ ಆರೋಪ

- Advertisement -

ಬೆಂಗಳೂರು : ಪಿಎಸ್ ಐ ಹಗರಣ ಸಂಬಂಧ ಸಿಐಡಿ ಪೊಲೀಸರು ಇಂದು ದರ್ಶನ್ ಗೌಡನನ್ನು ಬಂಧಿಸಿದ್ದಾರೆ. ಈ ಕುರಿತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದು, ಪಿಎಸ್ ಐ ಹಗರಣದಲ್ಲಿ ಸಚಿವರು, ಅಧಿಕಾರಿಗಳೂ ಭಾಗಿಯಾಗಿದ್ದಾರೆ ಎಂದು ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ ಶಿವಕುಮಾರ್, ಪಿಎಸ್ ಐ ನೇಮಕಾತಿಯ ಹಗರಣದಲ್ಲಿ ದರ್ಶನ್ ಗೌಡಗೆ ನೋಟಿಸ್ ಕೊಟ್ಟು ವಿಚಾರಣೆ ಮಾಡಿದ್ದರು. ವಿಚಾರಣೆ ಸಂದರ್ಭದಲ್ಲಿ ಸಚಿವರ ಪ್ರಭಾವದಿಂದ ಬಿಟ್ಟಿದ್ದರು. ಇದೀಗ ಮತ್ತೆ ವಿಚಾರಣೆಗೆ ಕರೆದುಕೊಂಡು ಹೋಗಿದ್ದಾರೆ ಎಂದು ತಿಳಿಸಿದ್ದಾರೆ.

ಇನ್ನು ಪಿಎಸ್ಐ ಹಗರಣದಲ್ಲಿ ಪ್ರಭಾವಿ ಸಚಿವರು, ಅಧಿಕಾರಿಗಳು ಇದ್ದಾರೆ ಎಂಬ ಮಾಹಿತಿ ಇದೆ. ಹಾಗೂ ಪಿಎಸ್ಐ ಹಗರಣದಲ್ಲಿ ಶಾಮೀಲಾದವರ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಡಿ.ಕೆ ಶಿವಕುಮಾರ್ ಗಂಭೀರವಾಗಿ ಆರೋಪವನ್ನು ಮಾಡಿದ್ದಾರೆ.

ಅಭಿಜಿತ್ ಕರ್ನಾಟಕ ಟಿವಿ ಬೆಂಗಳೂರು.

 

- Advertisement -

Latest Posts

Don't Miss