ಶತಕ ಸಿಡಿಸಿ ಮಿಂಚಿದ ಕ್ರೀಡಾ ಸಚಿವ ಮನೋಜ್ ತಿವಾರಿ

ಬೆಂಗಳೂರು:  ರಾಜಕೀಯ ಮತ್ತು ಕ್ರಿಕೆಟ್ ಕ್ಷೇತ್ರಗಳಲ್ಲಿ  ಸಮತೋಲನ ಕಾಪಾಡುತ್ತಿರುವ ಬಂಗಾಳ ಕ್ರಿಕೆಟ್ ತಂಡದ ಬ್ಯಾಟರ್ ಮನೋಜ್ ತಿವಾರಿ ಕ್ರೀಡಾ ಸಚಿವನಾಗಿರುವಾಗಲೇ ಶತಕ ಸಿಡಿಸಿ ಅಚ್ಚರಿಗೆ ಕಾರಣರಾಗಿದ್ದರೆ. 88 ವರ್ಷದ ರಣಜಿ ಟೂರ್ನಿಯ ಇತಿಹಾಸದಲ್ಲಿ ಯಾರು ಮಾಡದ ಸಾಧನೆಯನ್ನ ಮಾಡಿ ತೋರಿಸಿದ್ದಾರೆ.

ಬೆಂಗಳೂರಿನ ಆಲೂರಿನಲ್ಲಿ ಮುಕ್ತಾಯಗೊಂಡ ಬಂಗಾಳ ಹಾಗೂ ಜಾರ್ಖಂಡ್ ನಡುವಿನ ಮೊದಲ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ  ಈ ಅಚ್ಚರಿಯ ದಾಖಲೆ ನಿರ್ಮಾಣವಾಗಿದೆ.

ಶುಕ್ರವಾರ ಐದನೆ ದಿನದಾಟದ ಪಂದ್ಯದಲ್ಲಿ  ಬಂಗಾಳ ತಂಡ ಎರಡನೆ ಇನ್ನಿಂಗ್ಸ್ ಮುಂದುವರೆಸಿದತು. 36 ವರ್ಷದ ಬ್ಯಾಟರ್ ಮನೋಜ್ ತಿವಾರಿ  19 ಬೌಂಡರಿ  2 ಸಿಕ್ಸರ್ ಸೇರಿ  ಒಟ್ಟು 136 ರನ್ ಗಳಿಸಿ ಎಲ್ಲರ ಕೇಂದ್ರ ಬಿಂದುವಾದರು. ಶತಕ ಸಿಡಿಸುತ್ತಿದ್ದಂತೆ ಮನೋಜ್ ತಿವಾರಿ ತೊಡೆ ತಟ್ಟಿ ಸಂಭ್ರಮಿಸಿದರು. ಇದಕ್ಕೂ ಮುನ್ನ  ಮೊದಲ ಇನ್ನಿಂಗ್ಸ್‍ನಲ್ಲಿ 73 ರನ್ ಗಳಿಕೆ ಮಾಡಿದ್ದರು.

ಬಂಗಾಳ  ಹಾಗೂ ಜಾರ್ಖಂಡ್ ನಡುವಿನ ಪಂದ್ಯ ಡ್ರಾನಲ್ಲಿ  ಅಂತ್ಯ ಕಂಡಿತು. ಮೊದಲ ಇನ್ನಿಂಗ್ಸ್ ಮುನ್ನಡೆ ಆಧಾರದ ಮೇಲೆ ಬಂಗಾಳ ತಂಡ ಸೆಮಿಫೈನಲ್ ತಲುಪಿತು.

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಸಂಪುಟದಲ್ಲಿ ಮನೋಜ್ ತಿವಾರಿ ಕ್ರೀಡೆ ಹಾಗೂ ಯುವ ಸಬಲೀಕರಣದ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಬಂಗಾಳ ತಂಡದ ಈ ಮಾಜಿ ನಾಯಕ 2019-20ರ ರಣಜಿಯಲ್ಲಿ ಹೈದ್ರಾಬಾದ್ ವಿರುದ್ಧ  ತ್ರಿಶತಕ ಸಡಿಸಿದ್ದರು. ಹಲವಾರು ವರ್ಷಗಳಿಂದ ಬಂಗಾಳದ ತಂಡದ ಪ್ರಮುಖ ಆಟಗಾರನಾಗಿರುವ ಮನೋಜ್ ತಿವಾರಿ ಬಲಿಷ್ಠ ಕಟ್ಟಲು ತಂಡಕ್ಕೆ ನೆರವಾಗುತ್ತಿದ್ದಾರೆ. ಭಾರತ ತಂಡದಲ್ಲಿ ಆಡಿರುವ ತಿವಾರಿ 12 ಏಕದಿನ ಹಾಗೂ 3 ಟಿ20 ಆಡಿದ್ದಾರೆ.

2021ರಲ್ಲಿ ನಡೆದ ವಿಧಾನ ಸಭಾ ಚುನಾವಣೆಯಲ್ಲಿ ತೃಣ ಮೂಲ ಕಾಂಗ್ರೆಸ್ ಪಕ್ಷದಿಂದ ಶಿಬ್ಪುರ್ ಕ್ಷೇತ್ರದಿಂದ ಸ್ರ್ಪಸಿ ಬಿಜೆಪಿಯ ರಾಥಿನ್ ಚಕ್ರಬೊರ್ತಿ ವಿರುದ್ಧ ಗೆದ್ದು ಕ್ರೀಡಾ ಸಚಿವರಾಗಿದ್ದರು.

 

 

About The Author