Monday, October 6, 2025

Latest Posts

ದರ್ಶನ್‌- ದುನಿಯಾ ಸೂರಿ ಸಿನಿಮಾ “ಕದನವಿರಾಮ”! ಇದು ನಿಜಾನಾ?

- Advertisement -

 

ಚಾಲೆಂಜಿAಗ್ ಸ್ಟಾರ್ ದರ್ಶನ್ ಸದ್ಯ ಕ್ರಾಂತಿ ಸಿನಿಮಾದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಇದರ ಬಳಿಕ ಡಿ ಬಾಸ್ ಯಾವ ಸಿನಿಮಾದಲ್ಲಿ, ಯಾರ ನಿರ್ದೇಶನದ ಸಿನಿಮಾದಲ್ಲಿ ನಟಿಸ್ತಾರೆ ಎಂಬುವ ಕುತೂಹಲ ಅಭಿಮಾನಿಗಳಲ್ಲಿ ಸಾಕಷ್ಟಿದೆ. ಕ್ರಾಂತಿ ಸಿನಿಮಾ ಬಳಿಕ ದರ್ಶನ್ ಕೈಯಲ್ಲಿ ಸಾಕಷ್ಟು ಪ್ರಾಜೆಕ್ಟ್÷್ಸಗಳಿದ್ದು, ಮುಂದಿನ ಸಿನಿಮಾ ಯಾವುದು ಅನ್ನುವುದರ ಬಗ್ಗೆ ದಚ್ಚು ಇನ್ನೂ ಅಧಿಕೃತವಾಗಿ ತಿಳಿಸಿಲ್ಲ. ಬದಲಿಗೆ ಸೋಶಿಯಲ್ ಮೀಡಿಯಾದಲ್ಲಿ ಸದ್ಯ ಟೈಟಲ್ ಜೊತೆಯಲ್ಲೇ ಡಿ ಬಾಸ್ ಮುಂದಿನ ಸಿನಿಮಾ ಯಾವುದು, ಯಾವ ನಿರ್ದೇಶಕರ ಜೊತೆ ಅನ್ನೋದನ್ನ ಖಚಿತಪಡಿಸಿದೆ.

ಹೌದು, ಡಿ ಬಾಸ್ ದರ್ಶನ್ ಜೊತೆ ಸಿನಿಮಾ ಮಾಡಲು ಲೆಕ್ಕವಿಲ್ಲದಷ್ಟು ನಿರ್ದೇಶಕರು ಕ್ಯೂ ನಲ್ಲಿ ನಿಂತು ಕಾಯ್ತಿದ್ದಾರೆ. ಆದರೀಗ ಕನ್ನಡ ಚಿತ್ರರಂಗದ ಮಾಸ್ ಡೈರೆಕ್ಟರ್ ಸುಕ್ಕಾ ಸೂರಿ ನಿರ್ದೇಶನದ ಮುಂದಿನ ಚಿತ್ರದಲ್ಲಿ ದರ್ಶನ್ ನಟಿಸಲಿದ್ದಾರೆಯಂತೆ. ಈ ಸುದ್ದಿ ಸಾಕಷ್ಟು ದಿನಗಳಿಂದಲೂ ಗಾಂಧೀನಗರದಲ್ಲಿ ಗಿರ್ಕಿ ಹೊಡೆಯುತ್ತಿದ್ದು, ಚಿತ್ರತಂಡ ಈ ಬಗ್ಗೆ ಅಧಿಕೃತ ಮಾಹಿತಿಯನ್ನೇನೂ ನೀಡಿರಲಿಲ್ಲ.

ಇದೀಗ ಟ್ವಿಟ್ಟರ್‌ನಲ್ಲಿ ಸುಕ್ಕಾ ಸೂರಿ ಎಂಬ ಹೆಸರಿನಲ್ಲಿಯೇ ಫೇಕ್ ಅಕೌಂಟ್ ಕ್ರಿಯೇಟ್ ಮಾಡಿದ್ದು, ಇದರಲ್ಲಿ ದರ್ಶನ್, ಸೂರಿ ಕಾಂಬಿನೇಶನ್ನಲ್ಲಿ “ಕದನ ವಿರಾಮ” ಸಿನಿಮಾ ಬರಲಿದೆ ಎಂಬ ಸುದ್ದಿಯನ್ನ ಪೋಸ್ಟ್ ಮಾಡಿದ್ದಾರೆ.ದುನಿಯಾ ಸೂರಿ, ದರ್ಶನ್‌ ಅವರ ಸಿನಿಮಾ ನಿರ್ದೇಶನ ಮಾಡಲಿದ್ದಾರೆಂಬ ಸುದ್ದಿ ಮತ್ತೆ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.  “ಕ್ರಾಂತಿ” ಸಿನಿಮಾ ಬಳಿಕ ಯೋಗರಾಜ್‌ ಭಟ್‌ ನಿರ್ದೇಶನದ “ಗರಡಿ” ಸಿನಿಮಾದಲ್ಲಿಯೂ ಅವರು ನಟಿಸುತ್ತಿದ್ದಾರೆ. ಈಗಾಗಲೇ ಆ ವಿಚಾರ ಅಧಿಕೃತವಾಗಿದೆ. ಇದೆಲ್ಲದರ ನಡುವೆ ಅವರ ಅಭಿಮಾನಿಗಳ ಆಸೆಯೇ ಬೇರೆ ಇದೆ. ಅದೇನೆಂದರೆ, ಅದ್ಯಾವಾಗ ದುನಿಯಾ ಸೂರಿ ಮತ್ತು ದರ್ಶನ್‌ ಕಾಂಬಿನೇಷನ್‌ ಸಿನಿಮಾ ಘೋಷಣೆ ಆಗುತ್ತದೋ ಎಂದು!

ಕಳೆದ ವರ್ಷವೇ ಈ ಜೋಡಿಯ ಸಿನಿಮಾ ಶುರುವಾಗಲಿದೆ ಎಂದೇ ಹೇಳಲಾಗಿತ್ತು. ಆದರೆ, ಸದ್ಯದ ಈ ಇಬ್ಬರು ಅವರವರ ಕಮಿಟ್‌ಮೆಂಟ್‌ಗಳನ್ನು ಮುಗಿಸುವ ಭರದಲ್ಲಿದ್ದಾರೆ. ನಿರ್ದೇಶಕ ಸೂರಿ, ಅಭಿಷೇಕ್‌ ಅಂಬರೀಶ್‌ ಜತೆಗೆ “ಬ್ಯಾಡ್‌ ಮ್ಯಾನರ್ಸ್‌” ಮುಗಿಸಿ, ಅದರ ಪೋಸ್ಟ್‌ ಪ್ರೊಡಕ್ಷನ್‌ ಕೆಲಸದಲ್ಲಿದ್ದಾರೆ ಇತ್ತ “ಕ್ರಾಂತಿ”ಯಲ್ಲಿ ದರ್ಶನ್‌ ಬಿಜಿ.

ಯಾವುದೂ ಅಧಿಕೃತವಾಗದಿದ್ದರೂ, ಸೋಷಿಯಲ್‌ ಮೀಡಿಯಾದಲ್ಲಿ ಮಾತ್ರ ಹೊಸ ಹೊಸ ವಿಚಾರಗಳು ಮುನ್ನೆಲೆಗೆ ಬರುತ್ತಿವೆ. ಇದೀಗ ಅಭಿಮಾನಿ ವಲಯವೇ ಸಿನಿಮಾದ ಶೀರ್ಷಿಕೆ ಏನಿರಬಹುದು? ಯಾವುದಿದ್ದರೆ ಚೆಂದ ಎಂದು ಊಹಿಸಿ “ಕದನವಿರಾಮ” ಎಂಬ ಶೀರ್ಷಿಕೆ ನೀಡಿದ್ದಾರೆ. ಆದರೆ, ಇದು ಫ್ಯಾನ್‌ ಮೇಡ್‌ ಎಂಬುದು ಗಮನದಲ್ಲಿರಲಿ. ಇದೆಲ್ಲದರ ಹೊರತಾಗಿ, ಸುಕ್ಕಾ ಸೂರಿ ಜತೆಗೆ ದರ್ಶನ್‌ ಸಿನಿಮಾ ಶುರು ಎಂಬಂಥ ಪೋಸ್ಟ್‌ಗಳೇ ಕಳೆದ ಎರಡು ದಿನಗಳಿಂದ ಟ್ವಿಟರ್‌ನಲ್ಲಿ ಹರಿದಾಡುತ್ತಿವೆ. ಅವರ ಅಭಿಮಾನಿ ಸಂಘಗಳು, ಮೇಲಿಂದ ಮೇಲೇ ಈ ಟ್ವಿಟ್‌ ಅನ್ನೇ ವೈರಲ್‌ ಮಾಡುತ್ತಿವೆ. ಚಿತ್ರತಂಡವೇ ಈ ಬಗ್ಗೆ ಅಧಿಕೃತವಾಗಿ ಮಾಹಿತಿ ನೀಡಬೇಕಿದೆ.

- Advertisement -

Latest Posts

Don't Miss