ಹಾವೇರಿ: ಜಿಲ್ಲಾ ಕೇಂದ್ರ ಹಾಗೂ ಮಹಿಳಾ ಕಾರ್ಮಿಕರು ಹೆಚ್ಚಿರುವ ಎರಡು ತಾಲೂಕಾ ಕೇಂದ್ರಗಳಲ್ಲಿ ಶಿಶು ಪಾಲನಾ ಕೇಂದ್ರಗಳನ್ನು ತೆರೆಯಲು ಆಸಕ್ತ ಸ್ವಯಂ ಸೇವಾ ಸಂಸ್ಥೆಗಳು ಹಾಗೂ ಸ್ತ್ರೀ ಒಕ್ಕೂಟಗಳಿಂದ ಮಹಿಳಾಮತ್ತು ಮಕ್ಕಳ ಕಲ್ಯಾಣ ಇಲಾಖೆ ಅರ್ಜಿ ಆಹ್ವಾನಿಸಿದೆ.
ಉದ್ಯೋಗಸ್ಥ ಮಹಿಳೆಯರಿಗೆ ಅನುಕೂಲವಾಗುವಂತೆ ಜಿಲ್ಲಾ ಕೇಂದ್ರದಲ್ಲಿ ಒಂದು ಶಿಶು ಪಾಲನಾ ಕೇಂದ್ರ ತೆರೆಯಲು ಅವಕಾಶವಿದೆ ಹಾಗೂ ಮಹಿಳಾ ಕಾರ್ಮಿಕರ ಸಾಂದ್ರತೆ ಹೆಚ್ಚಾಗಿರುವ ಜಿಲ್ಲೆಯ ಎರಡು ತಾಲೂಕಾ ಕೇಂದ್ರಗಳಲ್ಲಿ ತಲಾ ಒಂದರಂತೆ ಶಿಶು ಪಾಲನಾ ಕೇಂದ್ರ ತೆರೆಯಲು ಅವಕಾಶವಿದೆ.
ಶಿಶು ಪಾಲನಾ ಕೇಂದ್ರಗಳ ನಿರ್ವಹಣೆಯನ್ನು ಆದ್ಯತೆಯಾಗಿ ಜಿಲ್ಲಾ ಅಥವಾ ತಾಲೂಕಾ ಸ್ತ್ರೀ ಶಕ್ತಿ ಒಕ್ಕೂಟಗಳಿಗೆ ನೀಡಲು ನಿರ್ಧರಿಸಲಾಗಿದೆ. ಒಂದೊಮ್ಮೆ ಸ್ತ್ರೀ ಒಕ್ಕೂಟಗಳು ನಿರ್ವಹಣೆಗೆ ಮುಂದೆಬರದಿದ್ದರೆ ಸರ್ಕಾರದಿಂದ ದೃಢೀಕರಿಸಲ್ಪಟ್ಟ ಮಕ್ಕಳ ಆರೈಕೆಗೆ ಸಂಬಂಧಪಟ್ಟ ವಿದ್ಯಾರ್ಹತೆ ಹೊಂದಿರುವ ಮಹಿಳಾ ಸಿಬ್ಬಂದಿಯೊಳಗೊಂಡ ಸ್ವಯಂ ಸೇವಾ ಸಂಸ್ಥೆಗಳಿಗೆ ವಹಿಸಲು ನಿರ್ಧರಿಸಲಾಗಿದೆ.
ದಿನಾಂಕ 30-06-2022 ಸಂಜೆ 5-30ರೊಳಗಾಗಿ ಉಪನಿರ್ದೇಶಕರ ಕಚೇರಿ, ಮಹಿಳಾ ಮತ್ತು ಮಕ್ಕಳಭಿವೃದ್ಧಿ ಇಲಾಖೆ, ಜಿಲ್ಲಾಡಳಿತ ಭವನ, ಹಾವೇರಿ ಇವರಿಗೆ ಅರ್ಜಿ ಸಲ್ಲಿಸಬಹುದು. ಹೆಚ್ಚಿನಮಾಹಿತಿಗಾಗಿ 08375-249002/209005 ಸಂಖ್ಯೆಗೆ ಸಂಪರ್ಕಿಸಲುಕೋರಿದೆ.




