ಬೆಂಗಳೂರು: ಸರ್ಫಾರಾಜ್ ಖಾನ್ ಅವರ ಆಕರ್ಷಕ ಶತಕದ ನೆರೆವಿನಿಂದ ಮುಂಬೈ ತಂಡ ಮಧ್ಯ ಪ್ರದೇಶ ವಿರುದ್ಧದ ರಣಜಿ ಟೂರ್ನಿಯ ಫೈನಲ್ ಪಂದ್ಯದಲ್ಲಿ ಮೇಲುಗೈ ಸಾಧಿಸಿದೆ. ಆದರೆ ದಿನದಾಟದ ಅಂತ್ಯದಲ್ಲಿ ಮಧ್ಯಯಪ್ರದೇಶ 1 ವಿಕೆಟ್ ನಷ್ಟಕ್ಕೆ 123 ರನ್ ಗಳಿಸಿ ತಿರುಗೇಟು ನೀಡಿದೆ.
ಗುರುವಾರ ಚಿನ್ನಸ್ವಾಮಿ ಮೈದಾನದಲ್ಲಿ ನಡೆದ 2ನೇ ದಿನದಾಟದ ಪಂದ್ಯದಲ್ಲಿ ಬ್ಯಾಟಿಂಗ್ ಮುಂದುವರೆಸಿದ ಮುಂಬೈ ತಂಡ ಮೊದಲ ಇನ್ನಿಂಗ್ಸ್‍ನಲ್ಲಿ 374 ರನ್‍ಗಳಿಗೆ ಆಲೌಟ್ ಆಯಿತು. ಮೊದಲ ದಿನ 5 ವಿಕೆಟ್ ನಷಕ್ಕೆ 248 ರನ್ ಗಳಿಸಿತ್ತು.
ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ ರ್ಸಾರಾಜ್ ಖಾನ್ 13 ಬೌಂಡರಿ 2 ಸಿಕ್ಸರ್ ನೆರೆವಿನಿಂದ 134 ರನ್ ಗಳಿಸಿದರು.
ಪ್ರಸಕ್ತ ರಣಜಿ ಟೂರ್ನಿಯಲ್ಲಿ ರ್ಸಾರಾಜ್ ಖಾನ್ 6 ಪಂದ್ಯಗಳಿಂದ 937 ರನ್‍ಗಳನ್ನು ಕಲೆ ಹಾಕಿದ್ದಾರೆ. 2019-20ರ ರಣಜಿಯಲ್ಲಿ
928 ರನ್ ಪೇರಿಸಿದ್ದರು.
ಶಾಮ್ಸ್ ಮುಲಾನಿ 12, ತನುಷ್ ಕೋಟ್ಯಾನ್ 15, ಧವಳ್ ಕುಲಕರ್ಣಿ 1, ತುಷಾರ್ ದೇಶಪಾಂಡೆ 6, ಮೋಹಿತ್ ಅವಸ್ತಿ ಅಜೇಯ 7 ರನ್ ಗಳಿಸಿದರು. ಮಧ್ಯ ಪ್ರದೇಶ ಪರ ಗೌರವ್ ಯಾದವ್ 106ಕ್ಕೆ 4, ಅನುಭವ್ ಅಗರ್‍ವಾಲ್ 81ಕ್ಕೆ 3, ಸಾರಾನ್ಶ್ ಜೈನ್ 47ಕ್ಕೆ 2, ಕುಮಾರ್ ಕಾರ್ತಿಕ್‍ಯೇಯಾ 133ಕ್ಕೆ 1 ವಿಕೆಟ್ ಪಡೆದರು.
ಮೊದಲ ಇನ್ನಿಂಗ್ಸ್ ಆರಂಭಿಸಿದ ಮಧ್ಯ ಪ್ರದೇಶ ತಂಡಕ್ಕೆ ಆರಂಭಿಕರಾದ ಯಶ್ ದುಬೆ (44 ರನ್) ಹಿಮಾನ್ಶು ಮಂತ್ರಿ (31 ರನ್ )ಮೊದಲ ವಿಕೆಟ್‍ಗೆ 47 ರನ್ ಸೇರಿಸಿದರು.
ಮೂರನೆ ಕ್ರಮಾಂಕದಲ್ಲಿ ಬಂದ ಶುಭಂ ಶರ್ಮಾ ಅಜೇಯ 41 ರನ್ ಗಳಿಸಿ ವಿಕೆಟ್ ಬೀಳದಂತೆ ನೋಡಿಕೊಂಡರು. ದಿನದಾಟದ ಅಂತ್ಯದಲ್ಲಿ ಯಶ್ ದುಬೆ ಅಜೇಯ44 ರನ್ ಹಾಗೂ ಶುಭಂ ಶರ್ಮಾ ಅಜೇಯ 41 ರನ್ ಗಳಿಸಿ ಮೂರನೆ ದಿನಕ್ಕೆ ಕ್ರೀಸ್ ಕಾಯ್ದುಕೊಂಡರು. ಮುಂಬೈ ಪರ ತುಷಾರ್ ದೇಶಪಾಂಡೆ 31ಕ್ಕೆ 1 ವಿಕೆಟ್ ಪಡೆದರು. ಮಧ್ಯಪ್ರದೇಶ ಮೊದಲ ಇನ್ನಿಂಗ್ಸ್‍ನಲ್ಲಿ 251 ರನ್‍ಗಳ ಹಿನ್ನಡೆ ಅನುಭವಿಸಿದೆ.
ಗಾಯಗೊಂಡು ಚೇತರಿಸಿಕೊಂಡ ರ್ಸಾರಾಜ್
ಶತಕ ವೀರ ರ್ಸಾರಾಜ್ ಖಾನ್ ಗಾಯಗೊಂಡ ಘಟನೆ ನಡೆಯಿತು. ಎರಡನೆ ದಿನದಾಟದ ಪಂದ್ಯದ ವೇಳೆ 70 ರನ್ ಗಳಿಸಿ ಮುನ್ನಗುತ್ತಿದ್ದ ರ್ಸಾರಾಜ್ ಖಾನ್ ವೇಗವಾಗಿ ಓಡುವ ಭರದಲ್ಲಿ ವೇಗಿ ಗೌರವ್ ಯಾದವ್‍ಗೆ ಡಿಕ್ಕಿ ಹೊಡೆದರು. ರ್ಸಾರಾಜ್ ಅವರ ತಲೆಗೆ ಏಟು ಬಿದ್ದಿತ್ತು. ತಕ್ಷಣ ವೈದ್ಯರು ಬಂದ ಪರೀಕ್ಷಿಸಿದರು. ದೊಡ್ಡ ಗಾಯವಾಗಿರದ ಕಾರಣ ರ್ಸಾರಾಜ್ ಚೇತರಿಸಿಕೊಂಡು ಬ್ಯಾಟಿಂಗ್ ಮುಂದುವರೆಸಿದರು.
ಸಂಕ್ಷಿಪ್ತ ಸ್ಕೋರ್
ಮುಂಬೈ ತಂಡ ಮೊದಲ ಇನ್ನಿಂಗ್ಸ್ 374
ರ್ಸಾರಾಜ್ ಖಾನ್ 134, ಹಾರ್ದಿಕ್ ತಾಮೋರ್ 24
ಗೌರವ್ ಯಾದವ್ 106ಕ್ಕೆ 4 ಅನುಭವ್ ಅಗರ್‍ವಾಲ್ 81ಕ್ಕೆ 3
ಮಧ್ಯ ಪ್ರದೇಶ ಮೊದಲ ಇನ್ನಿಂಗ್ಸ್
ಯಶ್ ದುಬೆ ಅಜೇಯ 44, ಶುಭಂ ಶರ್ಮಾ ಅಜೇಯ 41
ತುಷಾರ್ ದೇಶಪಾಂಡೆ 31ಕ್ಕೆ1

