ಡಬ್ಲಿನ್ :ಇಂದಿನಿಂದ ಭಾರತ-ಐರ್ಲೆಂಡ್ ಟಿ20 ಸರಣಿ ಆರಂಭವಾಗಲಿದ್ದು ಮೊದಲ ಟಿ20 ಕದನ ಇಂದು ಡಬ್ಲಿನ್ ಕ್ರೀಡಾಂಗಣದಲ್ಲಿ ನಡೆಯಲಿದೆ.
ಮೊದಲ ಪಂದ್ಯದ ಶುಭಾರಂಭದ ನಿರೀಕ್ಷೆಯಲ್ಲಿರುವ ಭಾರತ ಮೊದಕ ಪಂದ್ಯವನ್ನು ಎದುರು ನೋಡುತ್ತಿದೆ. ಹಾರ್ದಿಕ್ ನಾಯಕತ್ವಕ್ಕೆ ಅಗ್ನಿ ಪರೀಕ್ಷೆಯಾಗಿದ್ದು ಯುವ ಆಟಗಾರರು ತಂಡದ ಪ್ಲೇಯಿಂಗ್ ಇಲೆವೆನ್ ನಲ್ಲಿ ಸ್ಥಾನ ಪಡೆಯಲು ಹೋರಾಟ ನಡೆಸಲಿದ್ದಾರೆ.
ಮುಂಬರುವ ಟಿ20 ವಿಶ್ವಕಪ್ಗೆ ಬಲಿಷ್ಠ ತಂಡವನ್ನು ಕಟ್ಟಲು ಈ ಸರಣಿ ಸಹಾಯಮಾಡಲಿದೆ.
ಈ ಸರಣಿಯಲ್ಲಿ ಭಾರತ ತಂಡ ಎಲ್ಲಾ ರೀತಿಯ ಪರೀಕ್ಷೆಗೆ ಒಳಪಡಲಿದೆ. ಹೊಸ ನಾಯಕ, ಹೊಸ ಕೋಚ್ ಅಡಿಯಲ್ಲಿ ತಂಡಕ್ಕೆ ಹಿರಿಯ ಆಟಗಾರರ ನೆರೆವಿಲ್ಲ.
ಮೊದಲ ಪ್ರಯತ್ನದಲ್ಲೆ ಗುಜರಾತ್ ತಂಡಕ್ಕೆ ಚಾಂಪಿಯನ್ ಪಟ್ಟ ಕೊಡಿಸಿದ ಹಾರ್ದಿಕ್ ಪಾಂಡ್ಯ ಇದೀಗ ಮೊದಲ ಬಾರಿಗೆ ರಾಷ್ಟ್ರೀಯ ತಂಡವನ್ನು ಮುನ್ನಡೆಸುತ್ತಿದ್ದಾರೆ.
ರಾಹುಲ್ ದ್ರಾವಿಡ್ ಅನುಪಸ್ಥಿತಿಯಲ್ಲಿ ಎನ್ ಸಿಎ ಮುಖಸ್ಥ ವಿವಿಎಸ್ ಲಕ್ಷ್ಮಣ್ ಕೋಚ್ ಆಗಿ ಕಾರ್ಯನಿರ್ವಹಿಸಲಿದ್ದಾರೆ. ತ್ರಿಪಾಠಿ,ಉಮ್ರಾನ್ ಪಾದಾರ್ಪಣೆ ಮಾಡುವ ನಿರೀಕ್ಷೆ ಇದೆ.
ಸಂಭಾವ್ಯ ತಂಡಗಳು
ಭಾರತ ತಂಡ: ಇಶಾನ್ ಕಿಶನ್ , ಋತುರಾಜ್ ಗಾಯಕ್ವಾಡ್, ಸ್ಯಾಮ್ಸನ್, ಸೂರ್ಯ ಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ (ನಾಯಕ), ದಿನೇಶ್ ಕಾರ್ತಿಕ್, ಅಕ್ಷರ್ ಪಟೇಲ್, ಹರ್ಷಲ್, ಭುವನೇಶ್ವರ್ ಕುಮಾರ್, ಆವೇಶ್ ಖಾನ್/ಅರ್ಷದೀಪ್/ ಉಮ್ರಾನ್ ಮಲ್ಲಿಕ್, ಯಜ್ವಿಂದರ್ ಚಾಹಾಲ್.
ಐರ್ಲೆಂಡ್ ತಂಡ: ಪೌಲ್ ಸ್ಟಿರ್ಲಿಂಗ್, ಬಾಲ್ಬಿರ್ನಿ(ನಾಯಕ), ಡೆಲಾನಿ, ಟೆಕ್ಟರ್, ಟಕ್ಕರ್, ಕ್ಯಾಂಪರ್, ಮೆಕ್ ಬ್ರೈನ್, ಡೊಕ್ರೆಲ್, ಮಾರ್ಕ್ ಅಡೈರ್, ಮೆಕ್ ಜಾರ್ತಿ, ಜೋಶುವಾ.