BIG BREAKING NEWS: 16 IPS ಅಧಿಕಾರಿಗಳ ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶ

ಬೆಂಗಳೂರು: ರಾಜ್ಯ ಸರ್ಕಾರದಿಂದ ವಿವಿಧ ವಲಯದ 16 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ. ಈ ಮೂಲಕ ಆಡಳಿತ ಯಂತ್ರಕ್ಕ ಚುರುಕು ಮುಟ್ಟಿಸೋ ಕೆಲಸವನ್ನು ಮಾಡಿದೆ.

ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದು, ಬಾಗಲಕೋಟೆಯ ಎಸ್ಪಿಯಾಗಿದ್ದಂತ ಲೋಕೇಶ್ ಅವರನ್ನು ಧಾರವಾಡ ಎಸ್ಪಿಯಾಗಿ ವರ್ಗಾವಣೆ ಮಾಡಲಾಗಿದೆ. ಬೆಂಗಳೂರಿನ ಸಿಐಡಿಯ ಎಸ್ಪಿಯಾಗಿದ್ದಂತ ನಾಗೇಶ್ ಡಿ ಎಲ್ ಅವರನ್ನು ಚಿಕ್ಕಬಳ್ಳಾಪುರ ಎಸ್ಪಿಯಾಗಿ ವರ್ಗಾವಣೆಗೊಳಿಸಿದೆ.

ಹಾಸನ ಎಸ್ಪಿ ಆರ್ ಶ್ರೀನಿವಾಸ್ ಗೌಡ ಅವರನ್ನು, ಬೆಂಗಳೂರು ಸೆಂಟ್ರಲ್ ವಿಭಾಗದ ಡಿಸಿಪಿಯಾಗಿ ವರ್ಗಾವಣೆಗೊಳಿಸಲಾಗಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಎಸ್ಪಿಯಾಗಿದ್ದಂತ ಜಿ ಕೆ ಮಿತುನ್ ಕುಮಾರ್ ಅವರನ್ನು ಸಿಐಡಿಯ ಎಸ್ಪಿಯಾಗಿ ನೇಮಿಸಲಾಗಿದೆ.

ಬೆಸ್ಕಾಂ ಎಸ್ಪಿಯಾಗಿದ್ದಂತ ಶೋಭಾ ರಾಣಿ ವಿಜೆ ಅವರನ್ನು ವರ್ಗಾವಣೆ ಮಾಡಿ, ಬೆಂಗಳೂರಿನ ಎಸಿಬಿಯ ಎಸ್ಪಿಯಾಗಿ ನೇಮಿಸಲಾಗಿದೆ.  ಮಂಗಳೂರು ಡಿಸಿಪಿಯಾಗಿದ್ದಂತ ಹರಿರಾಂ ಶಂಕರ್ ಅವರನ್ನು ಹಾಸನ ಎಸ್ಪಿಯಾಗಿ ವರ್ಗಾವಣೆಗೊಳಿಸಲಾಗಿದೆ.

ಇನ್ನುಳಿದ ಐಪಿಎಸ್ ಅಧಿಕಾರಿಗಳ ವರ್ಗಾವಣೆ ಪಟ್ಟಿ, ಈ ಕೆಳಗಿನಂತಿದೆ

About The Author