ಶಿವಮೊಗ್ಗ : ಡಾ|| ಬಾಬು ಜಗಜೀವನ ರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮವು 2022-23ನೇ ಸಾಲಿನ ಪರಿಶಿಷ್ಟ ಜಾತಿಗೆ ಸೇರಿದ ಚರ್ಮ ಕೈಗಾರಿಕೆಯಲ್ಲಿ ತೊಡಗಿರುವ ಕುಶಲಕರ್ಮಿಗಳಿಗೆ ಸ್ವಯಂ ಉದ್ಯೋಗ ಕಲ್ಪಿಸಬಹುದಾದ ತರಬೇತಿ, ಸ್ವಯಂ ಉದ್ಯೋಗ ಸ್ವಾವಲಂಭಿ ಮಾರಾಟ ಮಳಿಗೆ, ಸಂಚಾರ ಮಾರಾಟ ಮಳಿಗೆ, ನೇರ ಸಾಲ ಯೋಜನೆ, ಪಾದುಕೆ ಕುಟೀರ ಯೋಜನೆ, ವಸತಿ ಯೋಜನೆ ಹಾಗೂ ಇತರೆ ಯೋಜನೆಗಳಾಗಿ ಅರ್ಜಿ ಆಹ್ವಾನಿಸಿದೆ.
ಆಸಕ್ತರು ನಿಗಮದ ವೆಬ್‍ಸೈಟ್ https://lidkar.com ಅಥವಾ ಸುವಿಧಾ ಜಾಲತಾಣ http://suvidha.karnataka.gov.in ಮೂಲಕ ನೇರವಾಗಿ ದಿ: 30/07/2022 ರೊಳಗಾಗಿ ಸಲ್ಲಿಸುವುದು.
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಸಂಯೋಜಕರು, ಲಿಡ್‍ಕರ್, ನೆಹರು ರಸ್ತೆ, ದೂ.ಸಂ.: 9480886268 ನ್ನು ಸಂಪರ್ಕಿಸುವುದು.




