ಮಾಲಾಹೈಡ್: ಸರಣಿ ಕ್ಲೀನ್‍ಸ್ವೀಪ್ ಮಾಡಲು ಪಣ ತೊಟ್ಟಿರುವ ಭಾರತ ತಂಡ ಇಂದು ಆತಿಥೇಯ ಐರ್ಲೆಂಡ್ ವಿರುದ್ಧ ಎರಡನೆ ಟಿ20 ಪಂದ್ಯ ಆಡಲಿದೆ.
ಇಲ್ಲಿನ ಮಾಲಾಹೈಡ್‍ನಲ್ಲಿ ನಡೆಯಲಿರುವ ಅಂತಿಮ ಟಿ20 ಕದನದಲ್ಲಿ ಹಾರ್ದಿಕ್ ಪಡೆ ಗೆಲ್ಲುವ ನೆಚ್ಚಿನ ತಂಡವಾಗಿದೆ. ಯುವ ಆಟಗಾರರಿಗೆ ತಮ್ಮ ಸಾಮಥ್ರ್ಯವನ್ನು ಪ್ರದರ್ಶಿಸಲು ಮತ್ತೊಂದು ಅವಕಾಶ ಸಿಗಲಿದೆ.
ಮೊನ್ನೆ ನಡೆದ ಪಂದ್ಯದಲ್ಲಿ ಮಳೆಯಿಂದಾಗಿ 12 ಓವರ್‍ಗಳಿಗೆ ಪಂದ್ಯವನ್ನು ಸೀಮಿತಗೊಳಿಸಲಾಯಿತು. ಎರಡನೆ ಪಂದ್ಯದಲ್ಲಿ ಮಳೆ ಮತ್ತು ಅಡ್ಡಿ ಇರುವುದಿದಿಲ್ಲ ಎಂದು ನಿರೀಕ್ಷಿಸಲಾಗಿದೆ.
ಪರಿಪೂರ್ಣ ತಂಡದೊಂದಿಗೆ ಮುಂದಿನ ತಿಂಗಳು ಇಂಗ್ಲೆಂಡ್ ವಿರುದ್ಧ ಟಿ20 ಸರಣಿಗೆ ಸಜ್ಜಾಗಬೇಕಿರುವ ಹಿನ್ನೆಲೆಯಲ್ಲಿ ಅಂತಿಮ ಪಂದ್ಯ ಯುವ ಆಟಗಾರರಿಗೆ ಅಗ್ನಿ ಪರೀಕ್ಷೆಯಾಗಿದೆ.
ಆರಂಭಿಕ ಬ್ಯಾಟರ್ ಋತುರಾಜ್ ಗಾಯಕ್ವಾಡ್ ಆರೋಗ್ಯದ ಸಮಸ್ಯೆ ಹಿನ್ನೆಲೆಯಲ್ಲಿ ಫಿಟ್ ಆಗಿಲ್ಲ. ಗಾಯಕ್ವಾಡ್ ಬದಲಿಗೆ ಆರಂಭಿಕರಾಗಿ ಕಣಕ್ಕಿಳಿದ ದೀಪಕ್ ಹೂಡಾ ಐರ್ಲೆಂಡ್ ಜೇಯ 47 ರನ್ ಹೊಡೆದು ಸಾಮರ್ಥ್ಯ ನಿರೂಪಿಸಿದರು. ಅದರಲ್ಲೂ ಸ್ಪಿನ್ನರ್ ಆ್ಯಂಡಿ ಮೆಕ್‍ಬ್ರೈನ್ ಅವರ ಒಂದೆ ಓವರ್‍ನಲ್ಲಿ 21 ರನ್ ಚಚ್ಚಿದರು.
ಗಾಯದ ಸಮಸ್ಯೆ ನಂತರ ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ಮರಳಿದ ಸೂರ್ಯ ಕುಮಾರ್ ಯಾದವ್ ಸ್ಥಿರ ಪ್ರದರ್ಶನ ನೀಡಬೇಕಿದೆ.
ಇನ್ನು ಬೌಲಿಂಗ್ ವಿ`Áಗದಲ್ಲಿ ವೇಗಿ ಉಮ್ರಾನ್ ಮಲ್ಲಿಕ್ ಇನ್ನಷ್ಟೆ ಒಳ್ಳಯ ಪ್ರದರ್ಶನ ನೀಡಬೇಕಿದೆ. ಕೇವಲ ಒಂದು ಓವರ್‍ನಿಂದ ಅವರನ್ನು ವಿಮರ್ಶೆ ಮಾಡವುದು ಸರಿಯಲ್ಲ.
ಅನುಭವಿ ಬೌಲರ್ ಭುವನೇಶ್ವರ್ ಕುಮಾರ್ ಮ್ತತೆ ಐರ್ಲೆಂಡ್ ಬ್ಯಾಟರ್‍ಗಳನ್ನು ಕಾಡಲಿದ್ದಾರೆ. ಡೆತ್ ಓವರ್‍ಗಳಲ್ಲಿ ವೇಗಿ ಆವೇಶ್ ಖಾನ್ ಪರಿಣಾಮ ಬೀರಿಲ್ಲ.
ಬ್ಯಾಟರ್ ಹ್ಯಾರಿ ಟೆಕ್ಟರ್ ಭಾರತೀಯ ಬೌಲರ್‍ಗಳ ಪಾಲಿಗೆ ವಿಲನ್ ಆಗಿದ್ದರು.ಕೇವಲ 29 ಎಸೆತದಲ್ಲಿ ಅರ್ಧ ಶತಕ ಸಿಡಿಸಿದರು.
ಐರ್ಲೆಂಡ್ ತಂಡಕ್ಕೆ ತಿರುಗೇಟು ನೀಡುವ ಸಾಮರ್ಥ್ಯ ಇದೆ. ತಂಡದ ಬೌಲರ್‍ಗಳು ಆಕ್ರಮಣಕಾರಿ ಪ್ರದರ್ಶನ ನೀಡಿದರೆ ಐರ್ಲೆಂಡ್ ಗೆಲ್ಲುವುದರಲ್ಲಿ ಅನುಮಾನವೇ ಇಲ್ಲ.
ಐರ್ಲೆಂಡ್ ವೇಗಿಗಳು ಸರಿಯಾದ ಕ್ರಮದಲ್ಲಿ ಬೌಲಿಂಗ್ ಮಾಡುತ್ತಿಲ್ಲ ಇದರ ಪರಿಣಾಮ ಭಾರತೀಯ ಬ್ಯಾಟರ್‍ಗಳು ಸುಲಭÀವಾಗಿ ಬೌಂಡರಿ ಹೊಡೆಯುತ್ತಿದ್ದಾರೆ.
ಐರ್ಲೆಂಡ್ ಬೌಲರ್‍ಗಳು ಕ್ರೇಗ್ ಅವರನ್ನು ನೋಡಿ ಪ್ರೇರಣೆ ಪಡೆಯಬೇಕಿದೆ.
ಭಾರತ ಕ್ರಿಕೆಟ್ ತಂಡದಂತಹ ಬಲಿಷ್ಠ ತಂಡದ ಪ್ರತಿ ದಿನವೂ ಹೋರಾಟ ಮಾಡುವುದಿಲ್ಲ. ಸಿಕ್ಕ ಅವಕಾಶವನ್ನು ಪ್ರಯೋಜನ ಪಡೆಯಬೇಕಿದೆ.
ಸಂಭಾವ್ಯ ತಂಡಗಳು
ಭಾರತ ತಂಡ: ದೀಪಕ್ ಹೂಡಾ/ರಾಹುಲ್ ತ್ರಿಪಾಠಿ, ಇಶಾನ್ ಕಿಶನ್, ಸೂರ್ಯ ಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ(ನಾಯಕ),ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಋತುರಾಜ್ ಗಾಯಕ್ವಾಡ್, ಅಕ್ಷರ್ ಪಟೇಲ್, ಭುವನೇಶ್ವರ್ ಕುಮಾರ್, ಆವೇಶ್ ಖಾನ್, ಯಜ್ವಿಂದರ್ ಚಾಹಲ್, ಉಮ್ರಾನ್ ಮಲ್ಲಿಕ್.
ಐರ್ಲೆಂಡ್ ತಂಡ: ಪೌಲ್ ಸ್ಟರ್ಲಿಂಗ್, ಆ್ಯಂಡಿ ಬಾಲ್ಬಿರಿನ್ (ನಾಯಕ), ಗಾರೆತ್ ಡಿಲಾನಿ, ಹ್ಯಾರಿ ಟೆಕ್ಟರ್, ಲಾರಕಾನ್ ಟಕ್ಕರ್ (ವಿಕೆಟ್ ಕೀಪರ್), ಜಾರ್ಜ್ ಡಾಕ್ರೆಲ್, ಮಾರ್ಕ್ ಅಡೈರ್, ಆ್ಯಂಡಿ ಮೆಕ್‍ಬ್ರೈನ್, ಕ್ರೇಗ್ ಯಂಗ್, ಜೋಶ್ ಲಿಟ್ಲ್, ಕಾನೊರ್ ಆಲರ್ಟ್.
ನೇರ ಪ್ರಸಾರ : ಸೋನಿ ಲೈವ್
ಸಮಯ: ರಾತ್ರಿ 9 ಗಂಟೆ (ಭಾರತೀಯ ಕಾಲಮಾನ)