Wednesday, September 17, 2025

Latest Posts

ದೀಪ್ತಿ ಆಲ್ರೌಂಡ್ ಆಟಕ್ಕೆ ಭಾರತಕ್ಕೆ ಜಯ

- Advertisement -

ಪಲ್ಲಿಕಲ್ಲೆ: ದೀಪ್ತಿ ಶರ್ಮಾ ಅವರ ಆಲ್ರೌಂಡ್ ಆಟದ ನೆರೆವಿನಿಂದ ಭಾರತ ವನಿತೆಯರ ತಂಡ ಆತಿಥೇಯ ಶ್ರೀಲಂಕಾ ವಿರುದ್ಧ ಮೊದಲ ಗೆಲುವು ದಾಖಲಿಸಿ ಸರಣಿಯಲ್ಲಿ 1-0 ಮುನ್ನಡೆ ಪಡೆದಿದೆ.

ಪಲ್ಲಕಲ್ಲೆ ಮೈದಾನದಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ  ಟಾಸ್ ಗೆದ್ದ  ಲಂಕಾ ತಂಡ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ಲಂಕಾ ಪರ ಹಸಿನಿ ಪೆರೆರಾ 37, ನೀಲಾಕ್ಷಿ ಡಿಸಿಲ್ವಾ 43 ರನ್ ಗಳಿಸಿದರು.

ಲಂಕಾ 48.2 ಓವರ್‍ಗಳಲ್ಲಿ 171 ರನ್ ಗಳಿಗೆ ಆಲೌಟ್ ಅಯಿತು.ಭಾರತ ಪರ  ದೀಪ್ತಿ ಶರ್ಮಾ ಹಾಗೂ ರೇಣುಕಾ ಸಿಂಗ್ ತಲಾ 3 ವಿಕೆಟ್ ಪಡೆದರು.

ಭಾರತ ಶೆಫಾಲಿ ವರ್ಮಾ 35, ಹರ್ಮನ್ ಪ್ರೀತ್ ಕೌರ್ 44,  ಹರ್ಲಿನ್ ಡಿಯಾಲ್ 34, ದೀಪ್ತಿ ಶರ್ಮಾ ಅಜೇಯ 22 ರನ್ ಗಳಿಸಿದರು.  ಭಾರತ 38 ಓವರ್‍ಗಳಲ್ಲಿ 6 ವಿಕೆಟ್ ನಷ್ಟಕ್ಕೆ 176 ರನ್ ಗಳಿಸಿತು.

 

 

- Advertisement -

Latest Posts

Don't Miss