ಲಕ್ನೋ: ತಂದೆಯೊಬ್ಬ 13 ವರ್ಷದ ಅಪ್ರಾಪ್ತ ಮಗಳ ಮೇಲೆ ಸತತ 6 ತಿಂಗಳ ಕಾಲ ಅತ್ಯಾಚಾರಗೈದಿರುವ ಹೃದಯ ವಿದ್ರಾವಕ ಘಟನೆ ಉತ್ತರಪ್ರದೇಶ ರಾಜಧಾನಿಯ ಕಾಕೋರಿ ಕಾಲೋನಿಯಲ್ಲಿ ನಡೆದಿದೆ.
ಕಳೆದ 6 ತಿಂಗಳಿನಿಂದ ಈ ಕ್ರೂರ ತಂದೆ ಮಗಳ ಮೇಲೆ ಅತ್ಯಾಚಾರ ನಡೆಸುತ್ತಿದ್ದ ಎಂದು ಆರೋಪಿಸಲಾಗಿದೆ. ತಾಯಿ ಮನೆಯಿಂದ ಹೊರಗೆ ಹೋದಾಗಲೆಲ್ಲ ನನ್ನೊಂದಿಗೆ ತಪ್ಪು ಕೆಲಸ ಮಾಡುತ್ತಿದ್ದರು ಎಂದು ಸಂತ್ರಸ್ತೆ ಆರೋಪಿಸಿದ್ದಾಳೆ.
ಅಷ್ಟೇ ಅಲ್ಲದೆ, ಆರೋಪಿಯು ಇತರ ಅಮಾಯಕ ಹೆಣ್ಣು ಮಕ್ಕಳ ಮೇಲೂ ಕಣ್ಣಿಟ್ಟಿದ್ದನು ತಿಳಿದ ಸಂತ್ರಸ್ತೆಯ ತಾಯಿ ಪತಿ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಮಾಹಿತಿ ಪ್ರಕಾರ ಆರೋಪಿಯು ಕಾಕೋರಿ ಪ್ರದೇಶದ ನಿವಾಸಿಯಾಗಿದ್ದು, ಕೂಲಿ ಕೆಲಸ ಮಾಡುತ್ತಿದ್ದನು. ಬಾಲಕಿಯ ತಾಯಿಯು ತನ್ನ ತವರು ಮನೆಗೆ ಹೋದ ಸಂದರ್ಭದಲ್ಲಿ ಆರೋಪಿಯು ಮೊದಲ ಬಾರಿಗೆ ಅತ್ಯಾಚಾರವೆಸಗಿದ್ದನು ಎಂದು ಬಾಲಕಿಯ ತಾಯಿ ಪೊಲೀಸರಿಗೆ ತಿಳಿಸಿದ್ದಾರೆ.
ಅಂದಿನಿಂದ, ಅವಕಾಶ ಸಿಕ್ಕಾಗಲೆಲ್ಲಾ ಅವನು ಇದನ್ನು ಮಾಡಲು ಪ್ರಾರಂಭಿಸಿದ್ದನು. ಉಳಿದ ಮೂವರು ಮಕ್ಕಳನ್ನು ಆಟವಾಡಲು ಹೊರಗೆ ಕಳುಹಿಸುವ ಮೂಲಕ ಇಂತಹ ಹೇಯ ಕೃತ್ಯ ಎಸಗುತ್ತಲೇ ಇದ್ದ. ಅತ್ಯಾಚಾರವೆಸಗಿದ ನಂತರ ಆರೋಪಿಯು ಮಗಳಿಗೆ ಥಳಿಸುತ್ತಿದ್ದನು. ಘಟನೆಯ ಕುರಿತು ಯಾರಿಗೂ ಹೇಳದಂತೆ ಬೆದರಿಕೆ ಹಾಕುತ್ತಿದ್ದನು. ಇದರಿಂದ ಗಾಬರಿಗೊಂಡ ಬಾಲಕಿ ಯಾರಿಗೂ ಏನನ್ನೂ ಹೇಳಿರಲಿಲ್ಲ. ತಾಯಿ ಮಗಳನ್ನು ಪ್ರೀತಿಯಿಂದ ಕೇಳಿದಾಗ ಎಲ್ಲವನ್ನು ಬಹಿರಂಗವಾಗಿ ಹೇಳಿದ್ದಾಳೆ. ಈ ವಿಷಯ ತಿಳಿದ ತಂದೆ ಮತ್ತೆ ಮಗಳು ಹಾಗೂ ಪತ್ನಿ ಮೇಲೆ ಹಲ್ಲೆ ನಡೆಸಿದ್ದಾನೆ.
ಘಟನೆಯ ವಿರುದ್ಧ ಪ್ರಕರಣ ದಾಖಲಾಗಿದ್ದು, ಬಾಲಕಿಗೆ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದೆ. ಆರೋಪಿ ತಂದೆಯನ್ನು ವಶಕ್ಕೆ ಪಡೆಯಲಾಗಿದೆ.