Saturday, April 19, 2025

Latest Posts

ಗುರೂಜಿ ಹುಬ್ಬಳ್ಳಿಗೆ ಬಂದಿದ್ದಾರು ಯಾಕೆ ಗೊತ್ತಾ?

- Advertisement -
ಹುಬ್ಬಳ್ಳಿ: ಸರಳ ವಾಸ್ತು’ ಖ್ಯಾತಿಯ  ಚಂದ್ರಶೇಖರ್ ಗುರೂಜಿ ಅವರನ್ನು ಇಂದು ಅಮಾನುಷವಾಗಿ ಕೊಲೆ ಮಾಡಲಾಗಿದೆ. ಹುಬ್ಬಳ್ಳಿಯ ಹೋಟೆಲ್‌ನಲ್ಲಿ ಕಾಲಿಗೆ ಅಡ್ಡಬಿದ್ದು ನಮಸ್ಕಾರ ಮಾಡುವ ಸೋಗಿನಲ್ಲಿ ಬಂದಿದ್ದ ಇಬ್ಬರು ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾರೆ.

ಕಳೆದ ಎರಡು ದಿನಗಳ ಹಿಂದೆ ಚಂದ್ರಶೇಖರ್  ಅವರ ಅಣ್ಣನ ಮಗು ಸಾವನ್ನಪ್ಪಿತ್ತು. ಮೊಮ್ಮಗುವಿನ ಸಾವಿನಿಂದಲೇ ಇಡೀ ಕುಟುಂಬ ದುಖಃದಲ್ಲಿತ್ತು. ಅದಕ್ಕಾಗಿ ಮೊಮ್ಮಗುವನ್ನು ನೋಡುವುದಕ್ಕಾಗಿಯೇ ಗುರೂಜಿ ಶುಕ್ರವಾರ ಹುಬ್ಬಳ್ಳಿಗೆ ಬಂದಿದ್ದರು. ಹುಬ್ಬಳ್ಳಿ ಉಣಕಲ್ ಕ್ರಾಸ್ನಲ್ಲಿರುವ ಖಾಸಗಿ ಹೋಟೆಲ್‌ನಲ್ಲಿ ತಮ್ಮ 2ನೇ ಪತ್ನಿಯೊಂದಿಗೆ  ತಂಗಿದ್ದರು.

ತಮ್ಮ ಮೊದಲ ಪತ್ನಿಯ ಸಾವಿನ ಬಳಿಕ ಗುರೂಜಿ 2ನೇ ಮದುವೆಯಾಗಿದ್ದರು. ಮೊದಲ ಪತ್ನಿಯ ಮಗಳು ಮುಂಬೈನಲ್ಲಿ ವಾಸವಾಗಿದ್ದಾರೆ. ಗುರೂಜಿ ಒಟ್ಟು 4 ದಿನಗಳಿಗೆ ರೂಂ ಪಡೆದಿದ್ದರು. ರೂಂ ನಂಬರ್ 220ರಲ್ಲಿ ವಾಸ್ತವ್ಯ ಹೂಡಿದ್ದರು. ಶನಿವಾರ ತಮ್ಮ ಮೊಮ್ಮಗುವಿನ ಕಾರ್ಯ ಮುಗಿಸಿ ಹೋಟೆಲ್‌ನಲ್ಲೇ ತಂಗಿದ್ದರು. ಇಂದು ಅಥವಾ ನಾಳೆ ರೂಂ ಖಾಲಿ ಮಾಡಿ ತಮ್ಮ ಮಗಳನ್ನು ನೋಡಲು ಮುಂಬೈಗೆ ತೆರಳಲು ಮುಂದಾಗಿದ್ದರು.

- Advertisement -

Latest Posts

Don't Miss