Mandya News: ಮತ್ತೆ ಮಂಡ್ಯ ಕೋರ್ಟ್ಗೆ ಬಾಂಬ್ ಬೆದರಿಕೆ ಮೇಲ್ ಬಂದಿದ್ದು, ಈ ಕಾರಣಕ್ಕೆ ವಕೀಲರು ಕೋರ್ಟ್ ಕಲಾಪ ನಿಲ್ಲಿಸಿ ಆಚೆ ಬಂದಿದ್ದಾರೆ. ಸದ್ಯ ಕೋರ್ಟ್ ಆವರಣದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
ಮಂಡ್ಯ ಜಿಲ್ಲಾ ನ್ಯಾಯಾಧೀಶರ ಮೇಲ್ಗೆ ಈ ಸಂದೇಶ ಬಂದಿದ್ದು, ಸದ್ಯ ಪೊಲೀಸರು, ಬಾಂಬ್ ಪತ್ತೆ ದಳ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಯಿಂದ ಪರಿಶೀಲನೆ ನಡೆದಿದೆ.
ಕಳೆದ ಫೆಬ್ರವರಿ 16ರಂದು ಇದೇ ರೀತಿ ಬೆದರಿಕೆ ಮೇಲ್ ಬಂದಿತ್ತು. ಇದೀಗ ಮತ್ತೆ ಅದೇ ರೀತಿ ಬೆದರಿಕೆ ಮೇಲ್ ಬಂದಿದೆ. ಹೀಗೆ ಪದೇ ಪದೇ ಬೆದರಿಕೆ ಹಾಕಿ ಹೆದರಿಸುತ್ತಿರವವರನ್ನು ಪೋಲೀಸರು ಬಂಧಿಸಿ, ಈ ರೀತಿ ಆಗದಂತೆ ಎಚ್ಚರಿಕೆ ವಹಿಸಬೇಕು ಎಂದು ವಕೀಲರು ಆಗ್ರಹಿಸಿದ್ದಾರೆ.
ಸದ್ಯ ಸ್ಥಳದಲ್ಲಿ ಇದ್ದು ಎಎಸ್ಪಿ ಗಂಗಾಧರ್ ಸ್ವಾಮಿ ಸೇರಿ ಪೊಲೀಸ್ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.




