- Advertisement -
ಯುಜೀನ್ (ಯುಎಸ್‍ಎ): ಭಾರೀ ನಿರೀಕ್ಷೆ ಮೂಡಿಸಿದ್ದ ಲಾಂಗ್ ಜಂಪರ್ ಮುರಳಿ ಶ್ರೀಶಂಕರ್ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‍ಶಿಪ್‍ನಲ್ಲಿ ಏಳನೆ ಸ್ಥಾನಕ್ಕೆ ತೃಪ್ತಿಪಟ್ಟು ನಿರಾಸೆ ಅನುಭವಿಸಿದರು.
ಅಮೆರಿಕದಲ್ಲಿ ನಡೆಯುತ್ತಿರುವ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‍ಶಿಪ್‍ನ ಲಾಂಗ್ ಜಂಪ್ ವಿಭಾಗದಲ್ಲಿ ಅಥ್ಲೀಟ್ ಮುರಳಿ ಶ್ರೀಶಂಕರ್ ಫೈನಲ್‍ನಲ್ಲಿ 7.96 ಮೀ. ಜಿಗಿದರು. ಈ ಹಿಂದೆ 8.36 ಮೀ. ಜಿಗಿದಿದ್ದು ಅತ್ಯುತ್ತಮ ವೈಯಕ್ತಿಕ ಪ್ರದರ್ಶನವಾಗಿತ್ತುಘಿ.
ಅಂತಿಮ ಸ್ಪರ್ಧೆಯ ಮೊದಲ ಜಿಗಿತ 7.96 ಮೀ.ಜಿಗಿದರು. ನಾಲ್ಕನೆ ಸುತ್ತಿನಲ್ಲಿ 7.89 ಮೀ. ನಂತರ ಮೂರು ಟ್ರಯಲ್‍ಗಳು ಫೌಲ್ ಆದವು.ಆರು ಪ್ರಯತ್ನಗಳಲ್ಲಿ 8 ಮೀ.ಗುರಿ ಮುಟ್ಟಲು ಸಾಧ್ಯಯವಾಗದೇ ನಿರಾಸೆ ಅನುಭವಿಸಿದರು.
- Advertisement -

