ಏಕದಿನ  ಸರಣಿಗೆ ವಿಂಡೀಸ್  ತಂಡ ಪ್ರಕಟ :ತಂಡಕ್ಕೆ ವಾಪಸ್ ಮರಳಿದ ಆಲ್ರೌಂಡರ್ ಹೋಲ್ಡರ್

ಜಮೈಕಾ: ಮುಂಬರುವ ಟೀಮ್ ಇಂಡಿಯಾ ವಿರುದ್ಧದ ಏಕದಿನ ಸರಣಿಗೆ ಕ್ರಿಕೆಟ್ ವೆಸ್ಟ್ ಇಂಡೀಸ್ 13 ಆಟಗಾರರನ್ನೊಳಗೊಂಡ  ತಂಡವನ್ನು ಪ್ರಕಟಿಸಿದೆ.  ಬಾಂಗ್ಲಾದೇಶ ಸರಣಿಯಿಂದ ದೂರ ಉಳಿದಿದ್ದ  ಅನುಭವಿ ಆಲ್ರೌಂಡರ್ ಜೆಸನ್ ಹೋಲ್ಡರ್‍ಗೆ ತಂಡದಲ್ಲಿ ಸ್ಥಾನ ನೀಡಲಾಗಿದೆ.  ಮೂರು ಪಂದ್ಯಗಳ ಏಕದಿನ ಸರಣಿ ಜು.22, 24 ಮತ್ತು 27ರಂದು ನಡೆಯಲಿದೆ. ಏಕದಿನ ಸರಣಿ ನಂತರ ಟಿ20 ಸರಣಿ ಜು.29ರಿಂದ ಆ.7ರವರೆಗೆ ನಡೆಯಲಿದೆ.

ವಿಂಡೀಸ್ ಏಕದಿನ ತಂಡ: ನಿಕೊಲೊಸ್ ಪೂರಾನ್ (ನಾಯಕ), ಶಾಯ್ ಹೋಪ್ (ಉಪನಾಯಕ), ಶಾಮಾರ್ಹ್ ಬ್ರೂಕ್ಸ್‍, ಕಿಸಿ ಕಾರ್ಟಿ, ಅಖಿಲ್ ಹುಸೇನ್, ಅಲಜಾರಿ ಜೋಸೆಫ್, ಬ್ರಂಡಾನ್ ಕಿಂಗ್, ಕಿಲೇ ಮೇಯರ್ಸ್‍, ಗುದಾಕೇಶ್ ಮೋಟಿ, ಕೀಮೊ ಪೌಲ್, ರೊವಮನ್ ಪೊವೆಲ್, ಜೇಡನ್ ಸೀಲ್ಸ್ 

ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ರಾಮ್‍ದಿನ್ ಗುಡ್‍ಬೈ

ಭಾರತದ ವಿರುದ್ಧದ ಸರಣಿಗೂ ಮುನ್ನ  ವಿಂಡೀಸ್ ತಂಡದ ಅನುಭವಿ ವಿಕೆಟ್ ಕೀಪರ್ ದಿನೇಶ್ ರಾಮ್‍ದಿನ್ ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ  ನಿವೃತ್ತಿ ಘೋಷಿಸಿದ್ದಾರೆ. ಭಾರತ ಮೂಲದ ದಿನೇಶ್ ರಾಮ್‍ದಿನ್  2005ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ಪದಾರ್ಪಣೆ ಮಾಡಿದರು. 37 ವರ್ಷದ ರಾಮ್‍ದಿನ್ ಕಳೆದ 14 ವರ್ಷಗಳಿಂದ ಮೂರು ಆವೃತ್ತಿಗಳಲ್ಲೂ ತಂಡವನ್ನು ಪ್ರತಿನಿಸಿದ್ದರು. ವಿಂಡೀಸ್‍ನ ಮಾಜಿ ವಿಕೆಟ್ ಕೀಪರ್ 74 ಟೆಸ್ಟ್‍, 139 ಏಕದಿನ ಮತ್ತು 71 ಟಿ20 ಪಂದ್ಯಗಳನ್ನು ಆಡಿದ್ದಾರೆ.

About The Author