- Advertisement -
ಯುಜೀನ್ (ಯುಎಸ್ಎ): ಭಾರತದ ಅಗ್ರ ಅಥ್ಲೀಟ್ ಅವಿನಾಶ್ ಸೇಬ್ಲ್ ವಿಶ್ವಚಾಂಪಿಯನ್ಶಿಪ್ನಲ್ಲಿ 11ನೇ ಸ್ಥಾನ ಪಡೆದು ನಿರಾಸೆ ಮೂಡಿಸಿದರು.
ನಾಲ್ಕನೆ ದಿನದ ಕ್ರೀಡಾಕೂಟದಲ್ಲಿ ನಡೆದ ಪುರುಷರ 3 ಸಾವಿರ ಮೀ.ಸ್ಟೀಪಲ್ ಚೇಸ್ನಲ್ಲಿ ಅವಿನಾಶ್ ಸೇಬ್ಲ್ 8:31.75 ಸೆ.ಗುರಿ ತಲುಪಿ 11ನೇ ಸ್ಥಾನಕ್ಕೆ ತೃಪ್ತಿಪಟ್ಟರು. ಇದು ರಾಷ್ಟ್ರೀಯ ದಾಖಲೆಗಿಂತಲೂ (8;12.48 ಸೆಕೆಂಡು)ಕಡಿಮೆಯಾಯಿತು.
ಮೊನ್ನೆಯಷ್ಟೆ ಹೀಟ್ಸ್ ವಿಭಾಗದಲ್ಲಿ ಮೂರನೆ ಸ್ಥಾನ ಪಡೆದು ಫೈನಲ್ಗೆ ಅರ್ಹತೆ ಪಡೆದಿದ್ದರು. ಒಟ್ಟು 8:18.75 ಸೆಕೆಂಡುಗಳಲ್ಲಿ ಗುರಿ ಮುಟ್ಟಿದ್ದರು.
- Advertisement -