ರಮೇಶ್ ಕುಮಾರ್ ಆತ್ಮಸಾಕ್ಷಿ ಮೂಲಕ ಒಂದಷ್ಟು ನಿಜ ಹೇಳುವ ಪ್ರಯತ್ನ ಮಾಡಿದ್ದಾರೆ – ಸಚಿವ ಬಿ.ಸಿ ನಾಗೇಶ್

ಬೆಂಗಳೂರು:ರಾಜ್ಯದ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ಮಾತನಾಡಿ, ಅತ್ಯಂತ ಅನುಭವ ಇರುವ ನಾಯಕರಲ್ಲಿ ರಮೇಶ್‍ಕುಮಾರ್ ಒಬ್ಬರು. ಅವರು ಆತ್ಮಸಾಕ್ಷಿ ಮೂಲಕ ಒಂದಷ್ಟು ನಿಜ ಹೇಳುವ ಪ್ರಯತ್ನ ಮಾಡಿದ್ದಾರೆ. ದೇಶಾದ್ಯಂತ ಪಕ್ಷದ ಸೋಲು, ಜನ ಪಕ್ಷವನ್ನು ಒಪ್ಪಿಕೊಳ್ಳದೆ ಇರುವಾಗ ಸತ್ಯ ಒಪ್ಪಿಕೊಂಡು ಜನರ ಮುಂದೆ ಹೋಗೋಣವೆಂದು ಸತ್ಯ ಒಪ್ಪಿರಬಹುದೇನೋ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿಸಿ ನಾಗೇಶ್ ತಿಳಿಸಿದರು.

ಇಂದು ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಂತ ಅವರು, ರಮೇಶ್ ಕುಮಾರ್ ಮೂರ್ನಾಲ್ಕು ತಲೆಮಾರಿಗೆ ಆಗುವಷ್ಟು ನಾವೆಲ್ಲರೂ ಮಾಡಿಕೊಂಡಿದ್ದೇವೆ ಎಂಬ ಸತ್ಯವನ್ನು ಅವರು ಹೇಳಿದ್ದಾರೆ. ಸೋನಿಯಾ ಗಾಂಧಿಗೆ ನಮ್ಮ ಋಣವಿದೆ ಎಂದು ಕಾರ್ಯಕರ್ತರ ಮುಂದೆ ಹೇಳಿದ್ದಾರೆ ಎಂದು ಪ್ರಶ್ನೆಗೆ ಉತ್ತರಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಕಾರ್ಯದರ್ಶಿ ಮತ್ತು ವಿಧಾನಪರಿಷತ್ ಸದಸ್ಯ ಕೆ.ಎಸ್. ನವೀನ್ ಅವರು ಉಪಸ್ಥಿತರಿದ್ದರು.

About The Author