- Advertisement -
ಅಮೆಜಾನ್ ಪ್ರೈಮ್ ನಲ್ಲೂ “ಲಂಕೆ”ಗೆ ಜೈ ಅಂದ ಪ್ರೇಕ್ಷಕ.
ಕೊರೋನ ಹೊಡೆತಕ್ಕೆ ಸಿಲುಕಿ ಚಿತ್ರರಂಗ ಅನುಭವಿಸಿದ ಕಷ್ಟ ಅಷ್ಟಿಷ್ಟಲ್ಲ. ಅಂತಹ ಸಮಯದಲ್ಲಿ ಅಂದರೆ, ಕಳೆದವರ್ಷ ಸೆಪ್ಟೆಂಬರ್ ನಲ್ಲಿ ಬಿಡುಗಡೆಯಾದ ಚಿತ್ರ “ಲಂಕೆ”.
ಲೂಸ್ ಮಾದ ಯೋಗಿ ನಾಯಕನಾಗಿ ನಟಿಸಿ, ರಾಮ್ ಪ್ರಸಾದ್ ಎಂ.ಡಿ ನಿರ್ಮಿಸಿ, ನಿರ್ದೇಶಿಸಿರುವ “ಲಂಕೆ” ಚಿತ್ರ ಉತ್ತರ ಕರ್ನಾಟಕ ಭಾಗದ ಅಥಣಿ, ಜಮಖಂಡಿ ಮುಂತಾದ ಕಡೆ ಈಗಲೂ ಪ್ರದರ್ಶನ ಕಾಣುತ್ತಿದೆ. ಇದರ ನಡುವೆ ಇತ್ತೀಚೆಗೆ ಅಮೆಜಾನ್ ಪ್ರೈಮ್ ನಲ್ಲಿ ಈ ಚಿತ್ರ ಬಿಡುಗಡೆಯಾಗಿದೆ. ಅಲ್ಲೂ ನೋಡುಗರಿಂದ ಉತ್ತಮ ಪ್ರತಿಕ್ರಿಯೆ ದೊರಕುತ್ತಿದೆ. ಈಗಾಗಲೇ ಚಿತ್ರ 300 ದಿನಗಳನ್ನು ಪೂರೈಸಿದೆ. ಸದ್ಯದಲ್ಲೇ ಚಿತ್ರ ಬಿಡುಗಡೆಯಾಗಿ ಒಂದು ವರ್ಷವಾಗಲಿದೆ ಎನ್ನುತ್ತಾರೆ ಚಿತ್ರದ ನಿರ್ದೇಶಕ ರಾಮಪ್ರಸಾದ್ ಎಂ ಡಿ.
ಖ್ಯಾತ ನಟ ಸಂಚಾರಿ ವಿಜಯ್ ಸಹ ಈ ಚಿತ್ರದಲ್ಲಿ ಅಭಿನಯಿಸಿದ್ದರು.
- Advertisement -