ಬೆಂಗಳೂರು: ನಗರದ ತಿಲಕ್ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ತಲೆ ಮರೆಸಿಕೊಂಡು ವಾಸವಾಗಿದ್ದಂತ ಶಂಕಿತ ಲಷ್ಕರ್ ಉಗ್ರನನ್ನು ಪೊಲೀಸರು ಬಂಧಿಸಿದ್ದಾರೆ.
ಸಿಸಿಬಿಯ 30ಕ್ಕೂ ಹೆಚ್ಚು ಪೊಲೀಸರು ನಿನ್ನೆ ರಾತ್ರಿ 8 ಗಂಟೆಯ ಸುಮಾರಿಗೆ ಅಸ್ಸಾಂ ಮೂಲಕ ಅಖ್ತರ್ ಹುಸೇನ್ ಎಂಬಾತ ವಾಸವಾಗಿದ್ದಂತ ನಿವಾಸದ ಮೇಲೆ ದಾಳಿ ನಡೆಸಿದ್ದಾರೆ. ಈ ಮೂಲಕ ಶಂಕಿತ ಉಗ್ರನನ್ನು ಬಂದಿಸಿ ವಶಕ್ಕೆ ಪಡೆದಿದ್ದಾರೆ.
ಅಂದಹಾಗೇ ನಗರದಲ್ಲಿ ಪುಡ್ ಡಿಲಿವರಿ ಯುವಕರ ಜೊತೆಗೆ ವಾಸವಾಗಿದ್ದಂತ ಶಂಕಿತ ಉಗ್ರ ಅಖ್ತರ್ ಹುಸೇನ್, ಅಸ್ಸಾಂ ಮೂಲದ ಲಷ್ಕರ್ ಉಗ್ರನಾಗಿದ್ದನು. ಈತ ನಗರದಲ್ಲಿ ವಾಸವಾಗಿದ್ದಂತ ಖಚಿತ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ದಾಳಿ ನಡೆಸಿ, ಬಂಧಿಸಿದ್ದಾರೆ.




