- Advertisement -
ಯುಜೀನ್: ಭಾರತದ ಅಥ್ಲೀಟ್ ಎಲ್ಡೋಸ್ ಪೌಲ್ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‍ಶಿಪ್‍ನಲ್ಲಿ ಏಳನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ.
ಭಾನುವಾರ ನಡೆದ ಪುರುಷರ ಟ್ರಿಪಲ್ ಜಂಪ್ ಫೈನಲ್‍ನಲ್ಲಿ 25 ವರ್ಷದ ಅಥ್ಲೀಟ್ ಎಲ್ಡೋಸ್ ಪೌಲ್ ಮೂರು ಪ್ರಯತ್ನಗಳಲ್ಲೂ (16.37ಮೀ.,16.79ಮೀ., 13.86ಮೀ)ಅತ್ಯುತ್ತಮವಾಗಿ ಜಿಗಿದರು. ಆದರೆ ಟಾಪ್ 8ರಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾದರು.
ಅರ್ಹತಾ ಸುತ್ತಿನಲ್ಲಿ 16.68ಮೀ. ಜಿಗಿದು 12ನೇ ಸ್ಥಾನದೊಂದಿಗೆ ಟ್ರಿಪಲ್ ಜಂಪ್ ಫೈನಲ್‍ಗೆ ಅರ್ಹತೆ ಪಡೆದ ಮೊದಲ ಭಾರತೀಯ ಅಥ್ಲೀಟ್ ಎಲ್ಡೋಸ್ ಪೌಲ್ ಆಗಿದ್ದಾರೆ.
ಪುರುಷರ 4-400ಮೀ. ರಿಲೇಯಲ್ಲಿ ಭಾರತಕ್ಕೆ 6ನೇ ಸ್ಥಾನ ಹಾಗೂ ಹೀಟ್ಸ್ ನಂ.1ರಲ್ಲಿ ಕೊನೆಯ ಸ್ಥಾನ ಮತ್ತು ಒಟ್ಟು 12ನೇ ಸ್ಥಾನ ಪಡೆಯಿತು.
- Advertisement -

