ರಾಯಚೂರು: ಕಾಲೇಜಿಗೆಂದು ತೆರಳಿದ್ದಂತ ನಾಲ್ವರು ವಿದ್ಯಾರ್ಥಿನಿಯರು ದಿಢೀರ್ ನಾಪತ್ತೆಯಾಗಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ. ಹೀಗಾಗಿ ಆತಂಕಗೊಂಡಿರುವಂತ ಪೊಲೀಸರು, ಮಕ್ಕಳನ್ನು ಹುಡುಕಿ ಕೊಡುವಂತೆ ಪೊಲೀಸರಿಗೆ ದೂರು ನೀಡಿದ್ದಾರೆ.
ರಾಯಚೂರು ನಗರದ ಸ್ಟೇಷನ್ ರಸ್ತೆಯಲ್ಲಿರುವಂತ ಸರ್ಕಾರಿ ಕಾಲೇಜಿಗೆ ಹೋಗುವುದಾಗಿ ಮನೆಯಲ್ಲಿ ಪೋಷಕರಿಗೆ ಹೇಳಿ, ತೆರಳಿದ್ದಂತ ನಾಲ್ವರು ವಿದ್ಯಾರ್ಥಿನಿಯರು ನಾಪತ್ತೆಯಾಗಿರೋ ಪ್ರಕರಣ ಇಂದು ಬೆಳಕಿಗೆ ಬಂದಿದೆ.
ಮಕ್ಕಳು ಕಾಣೆಯಾದ ಬಗ್ಗೆ ರಾಯಚೂರಿನ ಸದರಬಜಾರ್ ಠಾಣೆಯ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಸಂಬಂಧ ದೂರು ದಾಖಲಿಸಿಕೊಂಡಿರುವಂತ ಪೊಲೀಸರು ಎರಡು ತಂಡಗಳನ್ನು ರಚಿಸಿ ಶೋಧಕಾರ್ಯದಲ್ಲಿ ತೊಡಗಿದ್ದಾರೆ.




