ದುಬೈ: ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ತಂಡ ಟಿ20 ವಿಶ್ವಕಪ್ ಫೈನಲ್‍ನಲ್ಲಿ ಭಾರತ ತಂಡವನ್ನು ಸೋಲಿಸಲಿದೆ ಎಂದು ಮಾಜಿ ನಾಯಕ ರಿಕಿ ಪಾಂಟಿಂಗ್ ತಿಳಿಸಿದ್ದಾರೆ.
ಮುಂಬರುವ ಟಿ20 ವಿಶ್ವಕಪ್‍ನ ಫೈನಲ್‍ಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಮುಖಾಮುಖಿಯಾಗಬಹುದು. ಆಸ್ಟ್ರೇಲಿಯಾ ತಂಡ ಅವರನ್ನು ಸೋಲಿಸಲಿದೆ ಎಂದಿದ್ದಾರೆ. ತವರಿನಲ್ಲಿ ಆಡುತ್ತಿರುವುದರಿಂದ ಲಾಭವಾಗಿದ ಎಂದು 47 ವರ್ಷದ ಪಾಟಿಂಗ್ ಹೇಳಿದ್ದಾರೆ.
ಕಳೆದ ಟಿ20 ವಿಶ್ವಕಪ್‍ನಲ್ಲಿ ಅಲ್ಲಿನ ವಾತಾವರಣ ಆಸ್ಟ್ರೇಲಿಯನ್ನರಿಗೆ ಕಠಿಣವಾಗಿತ್ತು. ಆದರೆ ಅಲ್ಲಿ ಐಪಿಎಲ್ ಆಡಿದ್ದರಿಂದ ವಿಶ್ವಕಪ್ ಗೆಲ್ಲಲು ಸಾಧ್ಯವಾಯಿತು. ಗೆಲ್ಲುವ ಮಾರ್ಗವನ್ನು ಹುಡುಕಿಕೊಂಡರು ಎಂದು ತಿಳಿಸಿದ್ದಾರೆ.
ಇಂಗ್ಲೆಂಡ್ ವೈಟ್ ಬಾಲ್ ತಂಡದ ಕೋಚ್ ಮ್ಯಾಥೀವ್ ಮೋಟ್ ಆಸಿಸ್ ಮಹಿಳಾ ತಂಡದ ಜೊತೆ ಒಳ್ಳೆಯ ದಾಖಲೆ ಹೊಂದಿದ್ದಾರೆ. ಇಂಗ್ಲೆಂಡ್ ತಂಡ ಕೂಡ ಟೂರ್ನಿಯಲ್ಲಿ ಒಳ್ಳೆಯ ಪ್ರದರ್ಶನ ನೀಡಲಿದೆ . ಭಾರತ, ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ಮ್ಯಾಚ್ ವಿನ್ನರ್‍ಗಳೆಂದು ಎಂದು ತಿಳಿಸಿದ್ದಾರೆ.
ಪಾಕ್ ತಂಡದ ಯಶಸ್ಸು ನಾಯಕ ಬಾಬರ್ ಅಜಾಮ್ ಅವರ ಮೇಲೆ ನಿಂತಿದೆ ಎಂದು ತಿಳಿಸಿದ್ದಾರೆ.ಬಾಬರ್ ಅಜಾಮ್ ಚೆನ್ನಾಗಿ ಆಡದಿದ್ದರೆ ಅವರು ಗೆಲ್ಲುವುದಿಲ್ಲ ಎಂದು ತಿಳಿಸಿದ್ದಾರೆ.
ಟಿ20 ವಿಶ್ವಕಪ್‍ನಲ್ಲಿ ಎಲ್ಲಾ ತಂಡಗಳಲ್ಲೂ ಆರಂಭಿಕರು ತುಂಬ ಪ್ರಾಮುಖ ಪಾತ್ರವಹಿಸುತ್ತಾರೆ. ಆಸಿಸ್ ನೆಲದಲ್ಲಿ ಸ್ಪಿನ್ನರ್‍ಗಳು ವಿಕೆಟ್ ಕೀಳಲು ಪರದಾಡಬೇಕಾಗುತ್ತದೆ. ಯಾಕಂದ್ರೆ ಪಿಚ್ ಸಹಕರಿಸುವುದಿಲ್ಲ ಎಂದಿದ್ದಾರೆ.




