ಬೆಳಿಗ್ಗೆ 9 ಗಂಟೆಗೆ ದರ್ಶನ್ ನಟನೆಯ ಹೊಸ ಚಿತ್ರದ ಪೋಸ್ಟರ್ ರಿಲೀಸ್..!
ನಟ ದರ್ಶನ್ ಅಭಿಮಾನಿಗಳಿಗೆ ತನ್ನ ನೆಚ್ಚಿನ ನಟನ ಸಿನಿಮಾದ ಅಪ್ಡೇಟ್ಸ್ ಏನೂ ಸಿಗ್ತಿಲ್ಲ ಅಂತ ಸಿಕ್ಕಾಪಟ್ಟೆ ಬೇಜಾರಲ್ಲಿದ್ರು. ಆದ್ರೆ ಈಗ ಬ್ಯಾಕ್ ಟು ಬ್ಯಾಕ್ ಡಿ-ಅಪ್ಡೇಟ್ಸ್ಗಳು ಅಭಿಮಾನಿಗಳಿಗೆ ಸಿಗ್ತಿದ್ದು, ಸಖತ್ ಖುಷಿಯಲ್ಲಿದ್ದಾರೆ ಡಿ-ಫ್ಯಾನ್ಸ್. ಆಗಸ್ಟ್-5ನೇ ತಾರೀಖು ಯಾವಗಾಗುತ್ತೆ ಅಂತ ಡಿ ಭಕ್ತಗಣ ಕಾಯ್ತಿದೆ.
ಅಷ್ಟೇ ಅಲ್ಲ ವರ ಮಹಾಲಕ್ಷ್ಮಿ ಹಬ್ಬದ ಜೊತೆಯಲ್ಲಿ ಮತ್ತೊಂದು ಭರ್ಜರಿ ಗಿಫ್ಟ್ ಡಿ-56 ಸಿನಿಮಾ ಮುಹೂರ್ತ ಆಗಲಿದೆ ಡಿ-ಸೆಲೆಬ್ರೆಟೀಸ್‌ಗೆ. ನಟ ದರ್ಶನ್‌ಗೆ ನಾಯಕಿ ಯಾರಾಗ್ಬೋದು ಎಂಬ ಕುತೂಹಲವನ್ನ ನಾಯಕಿಯ ಅರ್ಧ ಫೋಟೋ ರಿವೀಲ್ ಮಾಡೋ ಮೂಲಕ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿರೊ ನಿರ್ದೇಶಕ ತರುಣ್ ಸುಧೀರ್, ಅಭಿಮಾನಿಗಳ ತಲೆಗೆ ಹುಳ ಬಿಟ್ಟಿದ್ದಾರೆ.
ಮತ್ತೊಂದೆಡೆ ಅಭಿಮಾನಿಗಳಿಗೆ ಕ್ರಾಂತಿಯ ಹೊಸ ಪೋಸ್ಟರ್ ಸಹ ಸಿಗಲಿದೆ. ಹೌದು ವಿ ಹರಿಕೃಷ್ಣ ಡೈರೆಕ್ಷನ್ ಹೇಳಿರೋ ಈ ಚಿತ್ರಕ್ಕೆ ಬಿ ಸುರೇಶ್ ಹಾಗೂ ಶೈಲಜಾ ನಾಗ್ ನಿರ್ಮಾಣ ಮಾಡ್ತಿದ್ದಾರೆ. ರಚಿತಾ ರಆಮ್, ವಿ ರವಿಚಂದ್ರನ್, ಸುಮಲತಾ ಅಂಬರೀಶ್, ಮುಖ್ಯ ಮಂತ್ರಿ ಚಂದ್ರು ಸೇರಿದಂತೆ ದೊಡ್ಡ ತಾರಾಗಣವೇ ಈ ಚಿತ್ರದಲ್ಲಿದೆ. ಇದೀಗ ವರ ಮಹಾಲಕ್ಷ್ಮಿ ಹಬ್ಬಕ್ಕೆ ಡಿ-56 ಮುಹೂರ್ತದ ಜೊತೆಗೆ ಕ್ರಾಂತಿ ಚಿತ್ರದ ಮೆಗಾ ಅಪ್ಡೇಟ್ ಕೂಡ ಅಭಿಮಾನಿಗಳಿಗೆ ಸಿಗಲಿದೆ.
ಮೀಡಿಯಾ ಹೌಸ್ ಸಂಸ್ಥೆ ಮೂಲಕ ತಯಾರಾಗ್ತಿರೋ ಕ್ರಾಂತಿ ಸಿನಿಮಾದ ಮತ್ತೊಂದು ಹೊಸ ಪೋಸ್ಟರ್ ವರ ಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಬೆಳಿಗ್ಗೆ 9 ಗಂಟೆಗೆ ಮೀಡಿಯಾ ಹೌಸ್ ಫಿಲ್ಮ್ಸ್ ಲಾಂಚ್ ಮಾಡಲಿದೆ. ಹೀಗಂತ ಮೀಡಿಯಾ ಹೌಸ್ ಫಿಲ್ಮ್ಸ್ ಅಧಿಕೃತವಾಗಿ ತಮ್ಮ ಟ್ವಿಟ್ಟರ್ ಪೇಜ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.