ಹರಾರೆ: ಆತಿಥೇಯ ಜಿಂಬಾಬ್ವೆ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿ ಇಂದಿನಿಂದ ಆರಂಭವಾಗಲಿದ್ದು ಮೊದಲ ಪಂದ್ಯ ಇಂದು ನಡೆಯಲಿದೆ.
ಇಲ್ಲಿನ ಹರಾರೆ ಸೋಟ್ರ್ಸ್ ಕ್ಲಬ್‍ನಲ್ಲಿ ನಡೆಯಲಿರುವ ಪಂದ್ಯದಲ್ಲಿ ಕೆ.ಎಲ್.ರಾಹುಲ್ ನೇತೃಥ್ವದ ಟೀಮ್ ಇಂಡಿಯಾ ರೆಗಿಸ್ ಚಕಬ್ವ ನೇತೃತ್ವದ ಜಿಂಬಾಬ್ವೆ ತಂಡವನ್ನು ಎದುರಿಸಲಿದೆ.
ಈ ಮೂರು ಪಂದ್ಯಗಳ ಸರಣಿಯಲ್ಲಿ ನಾಯಕ ಕೆ.ಎಲ್. ರಾಹುಲ್ ಅವರ ಫಿಟ್ನೆಸ್ ಪರೀಕ್ಷಿಸಲಾಗುತ್ತದೆ. ಕೆ.ಎಲ್.ರಾಹುಲ್ ಈ ಸರಣಿಯಲ್ಲಿ ಆರಂಭಿಕರಾಗಿ ಕಣಕ್ಕಿಳಿಯಲಿದ್ದಾರೆ. ಏಷ್ಯಾಕಪ್ ದೃಷ್ಟಿಯಿಂದ ಈ ಸರಣಿಯಲ್ಲಿ ರಾಹುಲ್ ಪ್ರದರ್ಶನ ತುಂಬ ಮುಖ್ಯವಾಗಿದೆ.
ಜಿಂಬಾಬ್ವೆ ತಂಡ ಬ್ಯಾಟಿಂಗ್‍ನಲ್ಲಿ ಬಲಿಷ್ಠವಾಗಿದೆ. ಇತ್ತೀಚೆಗೆ ಇದೇ ಮೈದಾನದಲ್ಲಿ ಬಾಂಗ್ಲಾದೇಶ ನೀಡಿದ್ದ 300 ರನ್‍ಗಿಂತ ಅಕ ಗುರಿಯನ್ನು ಬೆನ್ನತ್ತಿತ್ತುಘಿ.
ಭಾರತದ ಬ್ಯಾಟಿಂಗ್ ವಿಭಾಗದಲ್ಲಿ ನಾಯಕ ಕೆ.ಎಲ್. ರಾಹುಲ್, ಶಿಖರ್ ಧವನ್, ಶುಭಮನ್ ಗಿಲ್, ದೀಪಕ್ ಹೂಡಾ ಮತ್ತು ಸಂಜು ಸ್ಯಾಮ್ಸನ್ ರನ್ ಮಳೆಯನ್ನೆ ಸುರಿಸಬೇಕು.
ಬೌಲಿಂಗ್ ವಿಭಾಗದಲ್ಲಿ ವೇಗಿಗಳಾದ ಮೊಹ್ಮದ್ ಸೀರಾಜ್, ಕ್ನನಡಿಗ ಪ್ರಸಿದ್ಧ ಕೃಷ್ಣಘಿ, ದೀಪಕ್ ಚಾಹರ್, ಕುಲದೀಪ್ ಯಾದವ್, ಆಲ್ರೌಂಡರ್‍ಗಳಾದ ಶಾರ್ದೂಲ್ ಠಾಕೂರ್ ಮತ್ತು ಅಕ್ಷರ್ ಪಟೇಲ್ ಇದ್ದಾರೆ.
ಗಾಯದ ಸಮಸ್ಯೆ ನಂತರ ವೇಗಿ ದೀಪಕ್ ಚಾಹರ್ ಮತ್ತೆ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ರಾಹುಲ್ ಪಡೆಗೆ ಕಠಿಣ ಸವಾಲಿರುತ್ತದೆ. ಒಂದು ವೇಳೆ ಸರಣಿಯಲ್ಲಿ ಸೋತರೇ ಇಡೀ ತಂಡ ಟೀಕೆಗಳನ್ನು ಎದುರಿಸಬೇಕಾಗುತ್ತದೆ.
ಬಾಂಗ್ಲಾ ವಿರುದ್ಧ ಸಿಖಂದರ್ ರಜಾ, ರೆಗಿಸ್ ಚಕಬ್ವ ಹಾಗೂ ಇನೋ ಸೆಂಟ್ ಕೈಯಾ ಮತ್ತೊಮ್ಮೆ ಅದ್ಭುತ ಬ್ಯಾಟಿಂಗ್ ಮಾಡಿದರೆ ಟೀಮ್ ಇಂಡಿಯಾ ಕಠಿಣ ಸವಾಲು ಎದುರಿಸಲಿದೆ.
ಶಾಬಾಜ್ ಅಹ್ಮದ್‍ಗೆ ಅವಕಾಶ
ಗಾಯದ ಸಮಸ್ಯೆ ಎದುರಿಸುತ್ತಿರುವ ಆಲ್ರೌಂಡರ್ ವಾಷಿಂಗ್ಟನ್ ಸುಂದರ್ ಜಿಂಬಾಬ್ವೆ ವಿರುದ್ಧ ಕಣಕ್ಕಿಳಿಯುತ್ತಿಲ್ಲಘಿ. ಇವರ ಬದಲು ಶಾಬಾಜ್ ಅಹ್ಮದ್‍ಗೆ ಮಣೆ ಹಾಕಲಾಗಿದೆ.ಐಪಿಎಲ್‍ನಲ್ಲಿ ಆರ್‍ಸಿಬಿ ಪರ ಆಡಿದ್ದ ಶಾಬಾಜ್ ಅಹ್ಮದ್ ಈ ಹಿಂದೆ ಇಂಡಿಯಾ ಅ ತಂಡದಲ್ಲೂ ಆಡಿದ್ದರು. ಟಿ20 ಆವೃತ್ತಿಯಲ್ಲಿ 56 ಪಂದ್ಯಗಳಿಂದ 36 ವಿಕೆಟ್ ಪಡೆದಿದ್ದಾರೆ.
ತಂಡಗಳು
`Áರತ ತಂಡ : ಕೆ.ಎಲ್.ರಾಹುಲ್ (ನಾಯಕ), ಶಿಖರ್ ಧವನ್ (ಉಪನಾಯಕ), ಋತುರಾಜ್ ಗಾಯಕ್ವಾಡ್, ಶುಭಮನ್ ಗಿಲ್, ದೀಪಕ್ ಹೂಡಾ, ರಾಹುಲ್ ತ್ರಿಪಾಠಿ, ಇಶಾನ್ ಕಿಶನ್ (ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್(ವಿಕೆಟ್ ಕೀಪರ್), ಶಾರ್ದೂಲ್ ಠಾಕೂರ್, ಕುಲದಿಪ್ ಯಾದವ್, ಅಕ್ಷರ್ ಪಟೇಲ್, ಆವೇಶ್ ಖಾನ್, ಪ್ರಸಿದ್ಧ ಕೃಷ್ಣಘಿ, ಮೊಹ್ಮದ್ ಸಿರಾಜ್, ದೀಪಕ್ ಚಾಹರ್, ಶಾಬಾಜ್ ಅಹ್ಮದ್.
ಜಿಂಬಾಬ್ವೆ : ರೆಗಿಸ್ ಚಕಬ್ವ (ನಾಯಕ), ರಿಯಾನ್ ಬರ್ಲ, ತನಕಾ ಚಿಚಂಗಾ, ಬ್ರಾಡ್ಲಿ ಇವಾನ್ಸ್‍ಘಿ, ಲ್ಯೂಕ್ ಜೊಂಗ್ವೆಘಿ, ಇನೋ ಸೆಂಟ್ ಕೈಯಾ, ತಕುಸ್ಜ್ವಾನಾಶೆ ಕೈಟಾನೊ, ಕ್ಲೈವ್ ಮದಂಡೆ, ವೆಸ್ಲಿ ಮಾವೆರೆ, ತಡಿವಾನಾಶೆ ಮರುಮಣಿ, ಜಾನ್ ಮಸಾರ, ಟೋನಿ ಮುನ್ಯೊಂಗಾ, ರಿಚರ್ಡ್ ನಾಗರವ, ವಿಕ್ಟರ್ ನ್ಯುಚಿ, ಸಿಖಂದರ್ ರಜಾ, ಮಿಲ್ಟನ್ ಶುಂಬಾ, ಡೋನಾಲ್ಡ್ ತಿರಿಪಾನೊ.

