Banglore news:
ವೀರ ಸಾವರ್ಕರ್ ಫೋಟೋದ ಬಗ್ಗೆ ಸಿದ್ದರಾಮ್ಯ ಅವರು ನೀಡಿದ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಗೃಹಸಚಿವರು, ಮುಸ್ಲಿಂ ಏರಿಯಾವನ್ನು ದೇಶದಿಂದಲೇ ಬೇರ್ಪಡಿಸುತ್ತೀರಾ ಎಂದು ಪ್ರಶ್ನಿಸಿದ್ದಾರೆ. ಸಿದ್ದರಾಮಯ್ಯ ಅವರು ಯೋಚನೆ ಮಾಡಿ ಮಾತಾಡುವುದು ಒಳ್ಳೆಯದು, ಸಾವರ್ಕರ್ ಫೋಟೋ ಮುಸ್ಲಿಂ ಏರಿಯಾದಲ್ಲಿ ಇಟ್ಟಿರಲಿಲ್ಲ. ಮಾಹಿತಿ ತಪ್ಪಿನಿಂದ ಸಿದ್ದರಾಮಯ್ಯನವರು ಹಾಗೆ ಹೇಳಿದ್ದಾರೆ. ಮುಸ್ಲಿಂ ಏರಿಯಾವನ್ನು ದೇಶದಿಂದಲೇ ಬೇರ್ಪಡಿಸುತ್ತಿದ್ದಾರಾ? ಇಂತಹ ಹೇಳಿಕೆಗಳು ಎಲ್ಲರ ಭಾವನೆಗಳನ್ನು ಕೆರಳಿಸುತ್ತದೆ. ಹೋರಾಟಗಾರರ ಬಗ್ಗೆ ಕೀಳಾಗಿ ಮಾತಾಡೋದು ಜನ ಸಹಿಸಲ್ಲ. ಯಾರದೇ ಭಾವನೆ ಕೆರಳಿಸದಂತೆ ಹೇಳಿಕೆ ನೀಡಬೇಕಾಗುತ್ತದೆ. ಭಾವನೆ ಕೆರಳಿಸಿ ಶಾಂತಿ ಸುವ್ಯವಸ್ಥೆ ಸರಿಯಿಲ್ಲ ಅಂತಾ ಹೇಳುತ್ತಿದ್ದಾರೆ. ಇದರಲ್ಲಿ ಯಾವುದೇ ಅರ್ಥವಿಲ್ಲ, ಸಿದ್ದರಾಮಯ್ಯ ಅವರಂತಹ ಹಿರಿಯರಿಗೆ ನಾನು ಪಾಠ ಮಾಡುವ ಅವಶ್ಯಕತೆ ಇಲ್ಲ, ಅವರನ್ನು ಇದನ್ನು ಅರ್ಥ ಮಾಡಿಕೊಳ್ಳುತ್ತಾರೆ ಎಂದರು.
“ನಾನು ಶ್ಯಾಡೋ ಸಿಎಂ” : ಮೊಟ್ಟೆ ಎಸೆತ ಪ್ರಕರಣಕ್ಕೆ ಗುಡುಗಿದ ಸಿದ್ದರಾಮಯ್ಯ
‘ಗುಪ್ತಚರ ಇಲಾಖೆ ಐಸಿಯುನಲ್ಲಿದೆ, ಸರ್ಕಾರ ಸತ್ತಿದೆ’: ಕರ್ನಾಟಕ ಕಾಂಗ್ರೆಸ್ ಟ್ವಿಟ್ ಸಮರ