Film news:
ಚೆಲುವಿನ ಚಿತ್ತಾರದ ಚಿನಕುರುಳಿ ಅಮೂಲ್ಯ ಈಗ ಸಿನಿಮಾದಿಂದ ಸ್ವಲ್ಪ ದೂರ ಉಳಿದು ಇದೀಗ ಅವಳಿ ಮುದ್ದು ಮಕ್ಕಳೊಂದಿಗೆ ದಿನ ಕಳೆಯುತ್ತಿದ್ದಾರೆ. ಅಮೂಲ್ಯ ತಾಯಿಯಾಗುತ್ತಿರುವ ವಿಚಾರ ಕೇಳಿ ಕುಟುಂಬ ತುಂಬಾನೆ ಸಂತಸ ವ್ಯಕ್ತ ಪಡಿಸಿತ್ತು. ಹಾಗೆಯೇ ಅಮೂಲ್ಯ ಜಗದೀಶ್ ಅಭಿಮಾನಿಗಳೊಂದಿಗೂ ಈ ವಿಚಾರ ಹಂಚಿಕೊಂಡು ಸಂತಸ ವ್ಯಕ್ತಪಡಿಸಿದ್ದರು. ಜೊತೆಗೆ ತಾಯಿಯಾದ ನಂತರವೂ ತನ್ನ ಪತಿ ಜಗದೀಶ್ ವಿಷಯವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಖುಷಿ ಪಟ್ಟಿದ್ದರು. ಜೊತೆಗೆ ಜಗದೀಶ್ ಬೀದಿ ಬದಿಯಲ್ಲಿ ತನ್ನ ಮಕ್ಕಳಿಗೆ ಆಟಿಕೆ ಕೊಂಡು ಸುದ್ದಿಯಾಗಿದ್ದರು.ಆದರೆ ಇದು ವರೆಗೂ ಸೋಷಿಯಲ್ ಮೀಡಿಯದಲ್ಲಾಗಲೀ ಎಲ್ಲೂ ತನ್ನ ಅವಳಿ ಮಕ್ಕಳನ್ನು ಪರಿಚಯಿಸಿರಲಿಲ್ಲ.ಆದರೆ ಇದೀಗ ಶ್ರೀ ಕೃಷ್ಣ ಜನ್ಮಾಷ್ಟಮಿಯ ಶುಭ ಸಂದರ್ಭದಲ್ಲಿ ತನ್ನ ಫೇಸ್ ಬುಕ್ ಖಾತೆಯಲ್ಲಿ ತನ್ನ ಅವಳಿ ಮಕ್ಕಳ ಪೋಟೋ ಶೂಟ್ ಮಾಡಿಸಿ ಮುದ್ದು ಫೋಟೋಗಳನ್ನು ಶೇರ್ ಮಾಡಿ “ಶ್ರೀಕೃಷ್ಣ ಜನ್ಮಾಷ್ಟಮಿಯ ಶುಭ ಸಂದರ್ಭದಲ್ಲಿ ನಮ್ಮ ಮುದ್ದಿನ ಮಕ್ಕಳನ್ನು ಸಂತೋಷದಿಂದ ನಿಮಗೆ ಪರಿಚಯಿಸುತ್ತಿದ್ದೇವೆ. ಸಹೃದಯಿಗಳಾದ ನಿಮ್ಮ ಶುಭಾಶೀರ್ವಾದವಿರಲಿ.” ಎಂದು ಪೋಸ್ಟ್ ಮಾಡಿದ್ದಾರೆ. ಈ ಮುದ್ದು ಮಕ್ಕಳ ಫೋಟೋಗೆ ಸೋ ಕ್ಯೂಟ್ ಎಂಬ ಕಮೆಂಟ್ ಗಳ ಸುರಿಮಳೆಯೇ ಬರುತ್ತಿವೆ.

