ಬೆಂಗಳೂರು: ಕೆ. ಗೌತಮ್ ಅವರ ಆಲ್ರೌಂಡ್ ಆಟದ ನೆರೆವಿನಿಂದ ಶಿವಮೊಗ್ಗ ಸ್ಟ್ರೈಕರ್ಸ್ ಮಹಾರಾಜ ಟಿ20 ಟ್ರೋಫಿಯಲ್ಲಿ ಮಂಗಳೂರು ಯುನೈಟೆಡ್ ವಿರುದ್ಧ 8 ವಿಕೆಟ್ `ಭರ್ಜರಿ ಗೆಲುವು ದಾಖಲಿಸಿದೆ. ಗೆಲ್ಲಲ್ಲೇ ಬೇಕಾದ ಪಂದ್ಯದಲ್ಲಿ ಮಂಗಳೂರು ತಂಡ ಎಡವಟ್ಟು ಮಾಡಿಕೊಂಡಿದೆ.
ಇಲ್ಲಿನ ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಶಿವಮೊಗ್ಗ ತಂಡ ಫೀಲ್ಡಿಂಗ್ ಆಯ್ದುಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಮಂಗಳೂರು ಯುನೈಟೆಡ್ ನಿಗದಿತ 20 ಓವರ್‍ಗಳಲ್ಲಿ 8 ವಿಕೆಟ್ ನಷ್ಟಕ್ಕೆ 136 ರನ್ ಗಳಿಸಿತು. ಶಿವಮೊಗ್ಗ ಸ್ಟ್ರೈಕರ್ಸ್ 12.2 ಓವರ್‍ಗಳಲ್ಲಿ 2 ವಿಕೆಟ್ ನಷ್ಟಕ್ಕೆ 137 ರನ್ ಕಲೆ ಹಾಕಿತು.
137 ರನ್‍ಗಳ ಗುರಿ ಬೆನ್ನತ್ತಿದ ಶಿವಮೊಗ್ಗ ಸ್ಟ್ರೈಕರ್ಸ್ ಉತ್ತಮ ಆರಂಭ ಕೊಡುವಲ್ಲಿ ಎಡವಿತು. ಶರತ್ (1 ರನ್) ನಿಕಿನ್ ಜೋಸ್‍ಗೆ ಕ್ಯಾಚ್ ನೀಡಿ ಹೊರ ನಡೆದರು. ಮೂರನೆ ಕ್ರಮಾಂಕದಲ್ಲಿ ಬಂದ ನಾಯಕ ಕೆ.ಗೌತಮ್ ಸ್ಟಾಲಿನ್ ಹೂವರ್‍ಗೆ ಒಳ್ಳೆಯ ಸಾಥ್ ಕೊಟ್ಟರು. ಸೋಟಕ ಬ್ಯಾಟಿಂಗ್ ಮಾಡಿದ ನಾಯಕ ಗೌತಮ್ 21 ಎಸೆತದಲ್ಲಿ ಅರ್ಧ ಶತಕ ಸಿಡಿಸಿದರು.
ಹೂವರ್ 31 ಎಸೆತದಲ್ಲಿ ಅರ್ಧ ಶತಕ ಸಿಡಿಸಿದರು. ಈ ಜೋಡಿ ಎರಡನೆ ವಿಕೆಟ್‍ಗೆ 129 ರನ್‍ಗಳ ಜೊತೆಯಾಟ ನೀಡಿದ ತಂಡದ ಗೆಲುವನ್ನು ಸುಲಭಗೊಳಿಸಿದರು. ಸ್ಟಾಲಿನ್ ಹೂವರ್ ಅಜೇಯ 53, ಕೆ,ಗೌತಮ್ 72 ರನ್, ಸಿದ್ದಾರ್ಥ್ ಅಜೇಯ 3 ರನ್ ಗಳಿಸಿದರು. ಶರತ್ ಹಾಗೂ ಶಶಿ ಕುಮಾರ್ ತಲಾ 1 ವಿಕೆಟ್ ಪಡೆದರು.
ಸಂಕ್ಷಿಪ್ತ ಸ್ಕೋರ್
ಮಂಗಳೂರು ಯುನೈಟೆಡ್ 136/8
ನಿಖಿನ್ ಜೋಸ್ 38, ಅಭಿನವ್ ಮನೋಹರ್ 36
ಕೆ.ಗೌತಮ್ 11ಕ್ಕೆ2, ಕಾರ್ಯಪ್ಪ 33ಕ್ಕೆ2 ವಿಕೆಟ್
ಶಿವಮೊಗ್ಗ ಸ್ಟ್ರೈಕರ್ಸ್ 137/2
ಸ್ಟಾಲಿನ್ ಹೂವರ್ ಅಜೇಯ 53, ಕೆ.ಗೌತಮ್ 72
ಶರತ್ 3ಕ್ಕೆ 1, ಶಶಿ 28ಕ್ಕೆ 1ವಿಕೆಟ್