Film news:
ಚಿತ್ರರಂಗದವರಿಗೂ ರಾಜಕೀಯದವರಿಗೂ ಹತ್ತಿರದ ನಂಟು ಇದೆ ಎನ್ನುವುದು ನಿಜವಾದ ಮಾತು ಎನ್ನುವುದಕ್ಕೆ ಮತ್ತೊಂದು ಸಾಕ್ಷ್ಯ ಸಿಕ್ಕಿದೆ. ಹೌದು ಇತ್ತೀಚೆಗೆ ಜೂ.ಎನ್.ಟಿ.ಆರ್ ಅಮಿತ್ ಷಾ ಅವರನ್ನು ಭೇಟಿಯಾಗಿದ್ದು ಸದ್ಯ ಕುತೂಹಲ ತಂದಿದೆ. ರಾಜಕೀಯದ ಅನೇಕ ಮಂದಿ ಚಿತ್ರರಂಗಕ್ಕೆ ಬಂದಿದ್ದಾರೆ. ಅದೇ ರೀತಿ ಸಿನಿಮಾದವರು ರಾಜಕೀಯಕ್ಕೆ ಎಂಟ್ರಿ ನೀಡಿ ಗೆಲುವು ಕಂಡಿದ್ದೂ ಇದೆ. ಹಾಗಾಗಿ ಈ ಕ್ಷೇತ್ರದವರ ನಡುವೆ ಯಾವುದೇ ಭೇಟಿ ನಡೆದರೂ ಅಭಿಮಾನಿಗಳ ಕಣ್ಣು, ಕಿವಿ ಚುರುಕಾಗುತ್ತದೆ. ಈಗ ಜೂ,ಎನ್.ಟಿ.ಆರ್ ಅಭಿಮಾನಿಗಳಿಗೂ ಹಾಗೆಯೇ ಆಗಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಜ್ಯೂ. ಎನ್ಟಿಆರ್ ಭೇಟಿ ಆಗಿದ್ದಾರೆ. ಭಾನುವಾರ (ಆಗಸ್ಟ್ 21) ನಡೆದ ಈ ಭೇಟಿಯ ಸಂದರ್ಭದಲ್ಲಿ ತೆಗೆದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಅಮಿತ್ ಶಾ ಎದುರು ಜೂ,ಎನ್.ಟಿ.ಆರ್ ಕೈ ಕಟ್ಟಿ ಕುಳಿತುಕೊಂಡಿದ್ದಾರೆ. ಅವರ ವಿನಯವಂತ ವ್ಯಕ್ತಿತ್ವಕ್ಕೆ ಫ್ಯಾನ್ಸ್ ಸಂತಸ ವ್ಯಕ್ತ ಪಡಿಸಿದ್ದಾರೆ.
‘ತೆಲುಗು ಚಿತ್ರರಂಗದ ರತ್ನ, ಅತ್ಯಂತ ಪ್ರತಿಭಾನ್ವಿತ ನಟ ಜ್ಯೂ. ಎನ್ಟಿಆರ್ ಅವರನ್ನು ಹೈದರಾಬಾದ್ನಲ್ಲಿ ಭೇಟಿಯಾಗಿ ಮಾತನಾಡಿದ್ದು, ಖುಷಿ ನೀಡಿದೆ’ ಎಂದು ಅಮಿತ್ ಶಾ ಬರೆದು ಟ್ವೀಟ್ ಮಾಡಿದ್ದಾರೆ.
Had a good interaction with a very talented actor and the gem of our Telugu cinema, Jr NTR in Hyderabad.
అత్యంత ప్రతిభావంతుడైన నటుడు మరియు మన తెలుగు సినిమా తారక రత్నం అయిన జూనియర్ ఎన్టీఆర్తో ఈ రోజు హైదరాబాద్లో కలిసి మాట్లాడటం చాలా ఆనందంగా అనిపించింది.@tarak9999 pic.twitter.com/FyXuXCM0bZ
— Amit Shah (@AmitShah) August 21, 2022
ಡಿವೋರ್ಸ್ ಪಡೆಯಲು ಮುಂದಾಗಿದ್ದಾರಾ ಪ್ರಿಯಾಮಣಿ..?! ನಟಿ ಹೇಳಿದ್ದೇನು..?!




