International news:
ಭಾರತದ ಪ್ರಮುಖ ರಾಜಕೀಯ ವ್ಯಕ್ತಿಯೊಬ್ಬರ ವಿರುದ್ಧ ಭಯೋತ್ಪಾದಕ ದಾಳಿಗೆ ಸಂಚು ರೂಪಿಸುತ್ತಿದ್ದ ಐಸಿಸ್ ಭಯೋತ್ಪಾದಕ ಗುಂಪಿನ ಸದಸ್ಯ ಆತ್ಮಾಹುತಿ ಬಾಂಬರ್ ಅನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಈ ಬಗ್ಗೆ ರಷ್ಯಾದ ಫೆಡರಲ್ ಸೆಕ್ಯುರಿಟಿ ಸರ್ವೀಸ್ (ಎಫ್ಎಸ್ಬಿ) ಸೋಮವಾರ ಹೇಳಿದೆ ಎಂದು ರಷ್ಯಾದ ಸುದ್ದಿ ಸಂಸ್ಥೆ ಸ್ಪುಟ್ನಿಕ್ ವರದಿ ಮಾಡಿದೆ. “ರಷ್ಯಾದ ಎಫ್ಎಸ್ಬಿ ರಷ್ಯಾದಲ್ಲಿ ನಿಷೇಧಿತ ಇಸ್ಲಾಮಿಕ್ ಸ್ಟೇಟ್ ಅಂತಾರಾಷ್ಟ್ರೀಯ ಭಯೋತ್ಪಾದಕ ಸಂಘಟನೆಯ ಸದಸ್ಯರೊಬ್ಬರನ್ನು ಗುರುತಿಸಿ ಬಂಧಿಸಿದೆ.
ಅವರು ಮಧ್ಯ ಏಷ್ಯಾ ಪ್ರದೇಶದ ದೇಶವೊಂದರ ನಾಗರೀಕನಾಗಿದ್ದು, ಭಾರತದ ಆಡಳಿತ ಪಕ್ಷ (ಬಿಜೆಪಿ) ನಾಯಕರೊಬ್ಬರ ವಿರುದ್ಧ ತನ್ನನ್ನು ಸ್ಫೋಟಿಸುವ ಮೂಲಕ ಭಯೋತ್ಪಾದಕ ಕೃತ್ಯವನ್ನು ಎಸಗಲು ಯೋಜಿಸಿದ್ದನು’’ ಎಂದು ಪ್ರಾಧಿಕಾರವು ಹೇಳಿಕೆಯಲ್ಲಿ ತಿಳಿಸಿದೆ.
ಬಂಧಿತನನ್ನು ಟರ್ಕಿಯಲ್ಲಿ ಆತ್ಮಹತ್ಯಾ ಬಾಂಬರ್ ಆಗಿ ಐಸಿಸ್ ನೇಮಿಸಿಕೊಂಡಿದೆ ಎಂದು ಹೇಳಿಕೆಯಲ್ಲಿ ಸೇರಿಸಲಾಗಿದೆ. ಇನ್ನು, ಈ ಉಗ್ರನನ್ನು ಅಜಾಮೋವ್ ಎಂದು ಗುರುತಿಸಲಾಗಿದ್ದು, ಈತ ರಷ್ಯಾದ ಅಧಿಕಾರಿಗಳ ಎದುರು ತಪ್ಪೊಪ್ಪಿಗೆ ನೀಡಿದ್ದಾನೆ ಎಂದು ತಿಳಿದುಬಂದಿದೆ.
ಯುಕೆ ಪ್ರಧಾನ ಮಂತ್ರಿ ಸ್ಥಾನಕ್ಕೆ ಸುನಾಕ್ ಅವರೇ ಟಾಪ್ ಹುದ್ದೆಗೆ ಸೂಕ್ತ ಅಭ್ಯರ್ಥಿ: ಗೋವ್
ಮಗ್ರಿಬ್ ಪ್ರಾರ್ಥನೆ ವೇಳೆ ಕಾಬೂಲ್ನ ಮಸೀದಿಯಲ್ಲಿ ಬಾಂಬ್ ಸ್ಫೋಟ : 21 ಜನರ ಸಾವು