ಟಿಂ ಇಂಡಿಯಾಗೆ ಬಿಗ್‌ ಶಾಕ್..! ರಾಹುಲ್ ದ್ರಾವಿಡ್ ಗೆ ಕೋವಿಡ್ ದೃಢ

Sports News:

ಏಷ್ಯಾಕಪ್ ಕ್ರಿಕೆಟ್‌ ಟೂರ್ನಿಯು ಆಗಸ್ಟ್ 27ರಿಂದ ಆರಂಭವಾಗಲಿದ್ದು, ಟೀಂ ಇಂಡಿಯಾ, ಆಗಸ್ಟ್ 28ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ದ ಕಣಕ್ಕಿಳಿಯುವ ಮೂಲಕ ತನ್ನ ಅಭಿಯಾನವನ್ನು ಆರಂಭಿಸಲಿದೆ. ಈ ಹೈವೋಲ್ಟೇಜ್ ಪಂದ್ಯಕ್ಕೆ ದುಬೈ ಅಂತಾರಾಷ್ಟ್ರೀಯ ಮೈದಾನ ಆತಿಥ್ಯವನ್ನು ವಹಿಸಲಿದೆ. ಈ ಮೊದಲು ಕಳೆದ ವರ್ಷ ಭಾರತ ಹಾಗೂ ಪಾಕಿಸ್ತಾನ ಕ್ರಿಕೆಟ್ ತಂಡಗಳು ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ದುಬೈ ಮೈದಾನದಲ್ಲಿಯೇ ಮುಖಾಮುಖಿಯಾಗಿದ್ದವು. ಆ ಪಂದ್ಯದಲ್ಲಿ ಭಾರತ ಎದುರು ಪಾಕಿಸ್ತಾನ ತಂಡವು 10 ವಿಕೆಟ್‌ಗಳ ಅಂತರದ ಗೆಲುವು ದಾಖಲಿಸಿತ್ತು. ಇದೀಗ ಒಂದು ವರ್ಷದ ಬಳಿಕ ಮತ್ತೊಮ್ಮೆ ಉಭಯ ತಂಡಗಳ ಮುಖಾಮುಖಿಗೆ ಕ್ಷಣಗಣನೆ ಆರಂಭವಾಗಿದೆ. ಇದರ ಮಧ್ಯೆ ಇದೀಗ ದ್ರಾವಿಡ್ ಗೆ ಕೊರೊನಾ  ಸೋಂಕು ದೃಢವವಾಗಿದೆ. ಟಿಂ ಇಂಡಿಯಾಗೆ ಬಿಗ್‌ ಶಾಕ್ ಎದುರಾಗಿದ್ದು, ಭಾರತ ಕ್ರಿಕೆಟ್ ತಂಡದ ಹೆಡ್‌ ಕೋಚ್ ರಾಹುಲ್ ದ್ರಾವಿಡ್‌ ಅವರಿಗೆ ಕೋವಿಡ್ 19 ಸೋಂಕು ತಗುಲಿರುವುದು ದೃಢಪಟ್ಟಿದೆ.

ಕೋವಿಡ್‌ 19 ಸೋಂಕಿಗೆ ಒಳಗಾಗಿರುವ ರಾಹುಲ್ ದ್ರಾವಿಡ್, ಪಾಕಿಸ್ತಾನ ಎದುರಿನ ಹೈವೋಲ್ಟೇಜ್ ಪಂದ್ಯದ ವೇಳೆಗೆ ತಂಡ ಕೂಡಿಕೊಳ್ಳುತ್ತಾರೆಯೇ ಅಥವಾ ಇಲ್ಲವೇ ಎನ್ನುವ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ಆದರೆ ಬಿಸಿಸಿಐ ವೈದ್ಯಕೀಯ ಸಿಬ್ಬಂದಿಯು ಗ್ರೀನ್‌ ಸಿಗ್ನಲ್‌ ನೀಡದ ಬಳಿಕವಷ್ಟೇ ರಾಹುಲ್ ದ್ರಾವಿಡ್‌, ದುಬೈಗೆ ಹಾರಲಿದ್ದಾರೆ ಎಂದು ಸುದ್ದಿ ಹರಿದಾಡುತ್ತಿದೆ.

  ಗೆಲುವಿನೊಂದಿಗೆ ನಿರ್ಗಮಿಸಿದ ಶಿವಮೊಗ್ಗ: ಗುಲ್ಬರ್ಗಾ ವಿರುದ್ಧ  ರೋಚಕ ಜಯ

ಸಚಿನ್ ದಾಖಲೆ ಮುರಿದ ಶುಭಮನ್ 

ವಿಶ್ವದ ನಂ.2 ಅಲೆಕ್ಸಾಂಡರ್ ಜ್ವೆರೆವ್ ಪಾದದ ಗಾಯದಿಂದ ಯುಎಸ್ ಓಪನ್ನಿಂದ ಹೊರಗೆ

About The Author