ಹೊಸದಿಲ್ಲಿ: ಅಮಾನತು ಭೀತಿ ಎದುರಿಸುತ್ತಿರುವ ಭಾರತ ಒಲಿಂಪಿಕ್ ಸಂಸ್ಥೆಯ ಚಟುವಟಿಕೆಗಳನ್ನು ಆಡಳಿತಗಾರರ ಸಮಿತಿಯನ್ನು (ಸಿಒಎ) ರದ್ದು ಮಾಡಿದೆ ಮುಂದಿನ ಸೂಚನೆವರೆಗೂ ಯಥಾಸ್ಥಿತಿ ಮುಂದುವರೆಸುವಂತೆ ಸುಪ್ರೀಮ್ ಕೋರ್ಟ್ ಹೇಳಿದೆ.
ನ್ಯಾಯಾಧಿಶರುಗಳಾದ ಎಸ್.ಎ.ನಜೀರ್ ಮತ್ತು ಜೆ.ಕೆ.ಮಹೇಶ್ವರಿ ಅವರನ್ನೊಳಗೊಂಡ ಪೀಠ ರಾಜ್ಯ ಸಂಸ್ಥೆಗಳ ಅರ್ಜಿಗಳ ಬಗ್ಗೆ ಕೇಂದ್ರದಿಂದ ಮಾಹಿತಿ ಕೇಳಿದೆ. ನಾಲ್ಕು ವಾರದ ನಂತರ ವಿಚಾರಣೆ ನಡೆಸುವುದಾಗಿ ಹೇಳಿದೆ.
ನಾಮಪತ್ರ ಸಲ್ಲಿಕೆ, ಬದಲಾದ ಚುನಾವಣೆ ಪ್ರಕ್ರಿಯೆ ಹಿನ್ನೆಲೆಯಲ್ಲಿ ಹೊಸ ನಿಯಮ ಖಾತರಿ ಪಡಿಸಿಕೊಳ್ಳುವ ಸಲುವಾಗಿ ಎಐಎಫ್ಎಫ್ ಚುನಾವಣೆಯನ್ನು ಒಂದು ವಾರ ಮುಂದೂಡಿರುವುದಾಗಿ ಸುಪ್ರೀಂ ಕೋರ್ಟ್ ಹೇಳಿದೆ.
ಭವಿಷ್ಯದಲ್ಲಿ ಆಟಗಾರರಿಗೂ ಮಂಡಳಿಯ ಚುನಾವಣೆಯಲ್ಲಿ ಮತದಾನ ಮಾಡುವ ಹಕ್ಕು ಬೇಕೆಂದು ಭಾರತ ಫುಟ್ಬಾಲ್ ತಂಡದ ಮಾಜಿ ನಾಯಕ ಭೈಚುಂಗ್ ಭುಟಿಯಾ ಹೇಳಿದ್ದಾರೆ.
ಸುಪ್ರೀಮ್ ಮೆಟ್ಟಿಲ್ಲೇರಿದ ಕೆಒಎ
ಭಾರತ ಒಲಿಂಪಿಕ್ ಸಂಸ್ಥೆಗೆ ನಿಗದಿ ಮಾಡಿರುವ ದಿನಾಂಕದಲ್ಲೆ ಚುನಾವಣೆ ನಡೆಸುವಂತೆ ಕರ್ನಾಟಕ ಒಲಿಂಪಿಕ್ ಸಂಸ್ಥೆ (ಕೆಒಎ) ಸುಪ್ರೀಮ್ ಕೋರ್ಟ್ ಮೆಟ್ಟಿಲ್ಲೇರಿದೆ. ಭಾರತ ಒಲಿಂಪಿಕ್ ಸಂಸ್ಥೆಗೆ ಅನಿಲ್ ಖನ್ನಾ ಅವರನ್ನು ಹಂಗಾಮಿ ಅಧ್ಯಕ್ಷರನ್ನಾಗಿ ನೇಮಕ ಮಾಡಿರುವ ಹೈಕೋರ್ಟ್ ಕ್ರಮ ನಿಯಮ ಬಾಹಿರವಾಗಿದೆ. ಅದಿಲೆ ಸುಮರಿವಾಲಾ ಅವರನ್ನು ಅಧ್ಯಕ್ಷರನ್ನಾಗಿ ಮುಂದುವರಿಯಲ್ಲಿ ಎಂದು ಪತ್ರದಲ್ಲಿ ಮನವಿ ಮಾಡಿದೆ.