ಮನನೊಂದು ಆತ್ಮಹತ್ಯೆಗೆ ಶರಣಾದ 5ನೇ ತರಗತಿ ಬಾಲಕಿ..!

Banglore News:

ಬಟ್ಟೆ ಕೊಳ್ಳಲು ಬಟ್ಟೆ ಅಂಗಡಿಗೆ ತನ್ನನ್ನು ಕರೆದೊಯ್ಯಲಿಲ್ಲ ಎಂದು ಮನನೊಂದು ಬಾಲಕಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ  ಧಾರುಣ ಘಟನೆ ಚಾಮರಾಜಪೇಟೆಯಲ್ಲಿ ನಡೆದಿದೆ.

5ನೇ ತರಗತಿ ವಿದ್ಯಾರ್ಥಿನಿ ವೈಶಾಲಿ ಆತ್ಮಹತ್ಯೆಗೈದ ಬಾಲಕಿ. ಹಬ್ಬದ ಹಿನ್ನೆಲೆಯಲ್ಲಿ ವೈಶಾಲಿಗೆ ಬಟ್ಟೆ ಈಗಾಗಲೇ ಖರೀದಿಸಲಾಗಿತ್ತು. ಉಳಿದಿಬ್ಬರು ಮಕ್ಕಳಿಗೆ ಬಟ್ಟೆ ಖರೀದಿಸಲಿಲ್ಲ ಎಂಬ ಕಾರಣದಿಂದ ಇಬ್ಬರು ಮಕ್ಕಳನ್ನು ಪೋಷಕರು ಬಟ್ಟೆ ಅಂಗಡಿಗೆ ಕರೆದೊಯ್ದಿದ್ದರು. ಈ ವೇಳೆ ವೈಶಾಲಿ ತನ್ನನ್ನೂ ಕರೆದುಕೊಂಡು ಹೋಗುವಂತೆ ಹಠ ಹಿಡಿದಿದ್ದಾಳೆ. ಆದರೆ ಪೋಷಕರು ಆಕೆಯನ್ನು ಮನೆಯಲ್ಲೇ ಇರುವಂತೆ ಹೇಳಿ ಹೋಗಿದ್ದಾರೆ. ತನ್ನನ್ನು ಬಟ್ಟೆ ಅಂಗಡಿಗೆ ಕರೆದೊಯ್ಯಲಿಲ್ಲವೆಂಬ ನೋವಿನಲ್ಲಿ ಬಾಲಕಿ ವೈಶಾಲಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಹಬ್ಬದ ವಾತಾವರಣವಿದ್ದ ಮನೆಯಲ್ಲಿ ಈಗ ನೀರವ ಮೌನ ಆವರಿಸಿದೆ. ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಯಲಾಯ್ತು ಬೆಂಗಳೂರಿನ ಕಳ್ಳ ಸ್ವಾಮೀಜಿಯ ಕಾಮ ಪುರಾಣ…!

ಜಗ್ಗೇಶ್ ಅಯೋಗ್ಯ …! ಜಗ್ಗೇಶ್ ವಿರುದ್ದ ಎಂ.ಬಿ ಪಾಟೀಲ್ ಕೆಂಡ

ಸಿಡಿದೆದ್ದ ಸಿದ್ದರಾಮಯ್ಯ…! ಕೇಸರಿ ಕಲಿಗಳ ಸವಾಲ್ ಗೆ ಸಿದ್ದು ಕೌಂಟರ್..!

 

About The Author