- Advertisement -
Kerala News:
ಕೇರಳದ ಕುಟುಂಬವೊಂದು ಶವದ ಮುಂದೆ ನಗುತ್ತಾ ಫೋಟೋ ತೆಗೆಸಿಕೊಂಡು ಸಂತೋಷದಿಂದ ಬಾಳಿ ಬದುಕಿದ ಕುಟುಂಬ ಸದಸ್ಯೆಗೆ ವಿದಾಯ ಹೇಳಿದೆ. ಇದನ್ನು ಹಲವಾರು ಜನ ಟೀಕಿಸಿ ಸಾವಿನ ಮನೆಯಲ್ಲಿ ನಗಲು ಹೇಗೆ ಸಾಧ್ಯ ಎಂದು ಪ್ರಶ್ನೆ ಮಾಡಿದ್ದಾರೆ.
ಕುಟುಂಬದ ಸದಸ್ಯರಾದ 95 ವರ್ಷದ ಮರಿಯಮ್ಮ ಅವರು ಆಗಸ್ಟ್ 17 ರಂದು ನಿಧನರಾಗಿದ್ದು, ಈ ವೇಳೆ ಅವರ ಶವಪೆಟ್ಟಿಗೆಯ ಸುತ್ತಲು ನಿಂತ ಕುಟುಂಬ ಸದಸ್ಯರು ನಗುತ್ತಿರುವ ಫೋಟೋ ಕಂಡು ಹಲವರು ಟೀಕಿಸಿದ್ದಾರೆ.
ಹಲವು ಟೀಕೆ ಬಳಿಕ ನಗುವಿಗೆ ಕಾರಣವನ್ನು ವಿವರಿಸಿದ ಕುಟುಂಬ, 95 ವರ್ಷಗಳ ಕಾಲ ಮರಿಯಮ್ಮ ಅವರು ಸಾಕಷ್ಟು ಪ್ರೀತಿಯನ್ನು ಕೊಟ್ಟು, ನೆಮ್ಮದಿಯ ಜೀವನ ನಡೆಸಿದ್ದು, ಕುಟುಂಬಸ್ಥರು ಅವರಿಗೆ ಸಂತಸದಿಂದ ಬೀಳ್ಕೊಟ್ಟಿದ್ದಾರೆ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ ಎನ್ನಲಾಗಿದೆ.
- Advertisement -